Bagalkot | ಇಂದು ಕೆರೂರು ಚಲೋ ಪ್ರತಿಭಟನೆ
ಬಾಗಲಕೋಟೆ : ಹಿಂದೂ ಕಾರ್ಯಕರ್ತರನ್ನು ಬಂಧಿಸಿರೋದನ್ನ ಖಂಡಿಸಿ ಹಿಂದೂ ಜಾಗರಣಾ ವೇದಿಕೆ ಇಂದು ಕೆರೂರು ಚಲೋಗೆ ಕರೆಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಕೆರೂರು ಪಟ್ಟಣದಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ ೬ ರಂದು ಗಣೇಶ ವಿಸರ್ಜನೆ ವೇಳೆ ಕೆಲ ಹಿಂದು ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.
ಹೀಗಾಗಿ ಹಿಂದೂ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಆದ್ರೆ ಪೊಲೀಸರು ಸುಳ್ಳು ಕೇಸ್ ಗಳನ್ನು ದಾಖಲಿಸಿ ಹಿಂದು ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಹಿಂದೂ ಜಾಗರಣಾ ವೇದಿಕೆ ಇಂದು ಕೆರೂರು ಚಲೋ ಹಮ್ಮಿಕೊಂಡಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪಡೆ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
೩ ಡಿವೈಎಸ್ಪಿ, ೯ ಇನ್ಸ್‌ಪೆಕ್ಟರ್, ೧೫ ಸಬ್ ಇನ್ಸ್ ಪೆಕ್ಟರ್, ೩೦೦ ಪೇದೆಗಳು, ಎರಡು ಕೆಎಸ್ಆರ್ಪಿ ತುಕಡಿ, ೬ ಡಿಎಆರ್ ಹಾಗೂ ಒಂದು ಕ್ಯೂಆರ್ಟಿ ನಿಯೋಜನೆ ಮಾಡಲಾಗಿದೆ.