Bagalkote | 50ಕ್ಕೂ ಹೆಚ್ಚು ಜನ ಊಟ ಸೇವಿಸಿ ಅಸ್ವಸ್ಥ!
ಬಾಗಲಕೋಟೆಯ ದೊಮನಲ್ ಗ್ರಾಮದಲ್ಲಿ ಘಟನೆ
ವಿಷಪೂರಿತ ಆಹಾರ ಸೇವಿಸಿ 22 ಮಕ್ಕಳು ಅಸ್ವಸ್ಥ
ಜಿಲ್ಲಾಸ್ಪತ್ರೆಯಲ್ಲಿ 55ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಉರುಸ್ ನಲ್ಲಿ ನೀಡಲಾದ ಆಹಾರ ಸೇವಿಸಿ ಅಸ್ವಸ್ಥ
ಬಾಗಲಕೋಟೆ : ವಿಷಪೂರಿತ ಆಹಾರ ಸೇವಿಸಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ದೊಮನಲ್ ಗ್ರಾಮದಲ್ಲಿ ನಡೆದಿದೆ.
ದೊಮನಲ್ ಗ್ರಾಮದ ಯಮುನರಪ್ಪ ಉರುಸ್ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ ಜನರಿಗೆ ಆಹಾರ ನೀಡಲಾಗಿತ್ತು.
ಆದ್ರೆ ಆಹಾರ ಸೇವಿಸಿದ ಒಂದು ಗಂಟೆಯ ನಂತರ ಹಲವರು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಗ್ರಾಮಸ್ಥರು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿ ಕ್ಷಣಮಾತ್ರದಲ್ಲಿಯೇ ಸ್ಥಳಕ್ಕೆ ಧಾವಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಸ್ಥಳೀಯ ಮಾಹಿತಿ ಮೇರೆಗೆ ದೊಮನಲ್ ಗ್ರಾಮಕ್ಕೆ ಧಾವಿಸಿದ ಆರೋಗ್ಯ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅಲ್ಲಿಂದ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಅಸ್ವಸ್ಥಕ್ಕೀಡಾಗಿರುವ 48 ಮಂದಿಯಲ್ಲಿ 22 ಮಕ್ಕಳಾಗಿದ್ದಾರೆ. 12 ಮಂದಿ ಮಹಿಳೆಯರಾಗಿದ್ದು 10 ಮಂದಿ ಹಿರಿಯ ವೃದ್ಧರಾಗಿದ್ದಾರೆ.
ಎಲ್ಲರೂ ಅಪಾಯದಿಂದ ಪಾರಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಿಲ್ಲಾಸ್ಪತ್ರೆ ತಿಳಿಸಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ ಜಯಶ್ರೀ ಎಮ್ಮಿ ಮಾತನಾಡಿ, ಅಸ್ವಸ್ಥರ ಚಿಕಿತ್ಸೆಗೆ ಸಾಕಷ್ಟು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ. bagalkote-more than 50 people got food poisoned eating food