50 ವರ್ಷ ಕಾಲ ಬಹ್ರೇನ್ ಪ್ರಧಾನಿಯಾಗಿದ್ದ ಖಲೀಫಾ ನಿಧನ
ಬಹ್ರೇನ್ : ಬರೋಬ್ಬರಿ ಐವತ್ತು ವರ್ಷಗಳ ಕಾಲ ಬಹ್ರೇನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಇಂದು ವಿಧಿವಶರಾಗಿದ್ದಾರೆ. ಖಲೀಫಾ ಅವರಿಗೆ 84 ವರ್ಷ ವಯಸ್ಸಾಗಿತ್ತು.
ಶೇಖ್ ಖಲೀಫಾ ಇಂದು ಬೆಳಗ್ಗೆ ಅಮೆರಿಕದ ಮೇಯೋ ಕ್ಲಿನಿಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದೇಶದಲ್ಲಿ ಒಂದು ವಾರ ಶೋಕಾಚರಣೆ ಘೋಷಿಸಲಾಗಿದೆ ಎಂದು ಬಹ್ರೇನ್ ರಾಯಲ್ ಕೋರ್ಟ್ ಮಾಹಿತಿ ಹಂಚಿಕೊಂಡಿದೆ.
1935ರ ನವೆಂಬರ್ 24ರಂದು ಜನಿಸಿದ್ದ ಖಲೀಫಾ ಅವರು 1971ರಲ್ಲಿ ಬಹ್ರೇನ್ ಸ್ವಾತಂತ್ರ್ಯಗೊಂಡಾಗಿನಿಂದ ಅಲ್ಲಿನ ಪ್ರಧಾನಿಯಾಗಿದ್ದರು.
ಈ ಮೂಲಕ ವಿಶ್ವದಲ್ಲಿಯೇ ಪ್ರಧಾನಿಯಾಗಿ ಸುದೀರ್ಘ ಸೇವೆ ಸಲ್ಲಿಸಿರುವ ಪ್ರಧಾನ ಮಂತ್ರಿ ಎನಿಸಿದ್ದಾರೆ.
ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತಗತ : ಈಶ್ವರಪ್ಪ ಕಿಡಿ
ಇನ್ನು ಕೊರೊನಾ ವೈರಸ್ ಹಿನ್ನೆಲೆ ಅತ್ಯಂತ ಆಪ್ತವಲಯದವರ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಖಲೀಫಾ ನಿಧನಕ್ಕೆ ಇಸ್ರೇಲ್ ಪ್ರಧಾನಿ ಸೇರಿದಂತೆ ವಿಶ್ವದ ನಾನಾ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









