ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತಗತ : ಈಶ್ವರಪ್ಪ ಕಿಡಿ
ಗದಗ : ರಾಜ್ಯದಲ್ಲಿ ಜಾತಿ ರಾಜಕಾರಣ, ಗೂಂಡಾ ರಾಜಕಾರಣ ಇದ್ಯಾವುದು ನಡೆಯೋದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜಾತಿ ರಾಜಕಾರಣ, ಗೂಂಡಾ ರಾಜಕಾರಣ ಇದ್ಯಾವುದು ನಡೆಯೋದಿಲ್ಲ.
ಈ ರೀತಿಯ ಬೆಳವಣಿಗೆಯನ್ನು ಉಪಚುನಾವಣೆ ಫಲಿತಾಂಶದಲ್ಲಿ ಕಾಣುತ್ತಿದ್ದೇವೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸುಳ್ಳಿನ ರಾಜಕಾರಣ ಮಾಡುತ್ತಾ ಬಂದಿದ್ದಾರೆ.
ನಾವು ಗೆಲ್ಲುತ್ತೇವೆ, ಚುನಾವಣೆ ನಂತರ ಯಡಿಯೂರಪ್ಪ ಬದಲಾವಣೆ ಆಗ್ತಾರೆ ಅಂತಾ ಹೇಳುತ್ತಲೇ ಬಂದರು.
ಹಿಂದಿನಿಂದಲೂ ಕಾಂಗ್ರೆಸ್ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾ ಬಂದಿದೆ.
ನನ್ನನ್ನು ಮುಗಿಸಲು ಬಹಳ ಜನ ಕಾಯ್ತಿದ್ದಾರೆ : ಯತ್ನಾಳ್
ಇನ್ನು ಮುಂದಾದರು ಜನರ ದಿಕ್ಕು ತಪ್ಪಿಸುವ ಕೆಲಸ ನಿಲ್ಲಿಸಿ, ನಾವು ಮಾಡಿದ್ದು ತಪ್ಪು ಅಂತಾ ಜನರಲ್ಲಿ ಕ್ಷಮೆ ಕೇಳಿ ಎಂದು ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.
ಇದೇ ವೇಳೆ ಕಾಂಗ್ರೆಸ್ ನ ಮುಂದಿನ ಸಿಎಂ ವಿಚಾರವಾಗಿ ಮಾತನಾಡಿ, ಇವರು ಪಾಠ ಕಲಿಯುವರಲ್ಲಾ.
ಗುಂಡಾಗಿರಿ, ಸುಳ್ಳು ಹೇಳುವುದು ಕಾಂಗ್ರೆಸ್ ರಕ್ತಗತವಾಗಿ ಬಂದಿದೆ.
ಇವರು ಸೋತರೂ ಕೂಡ ಪಾಠ ಕಲ್ಲಿಯುವುದಿಲ್ಲ ಎಂದ ಈಶ್ವರಪ್ಪ, ಜನರೇ ಇವರನ್ನು ಮೂಲೆಗೆ ತಳ್ಳತ್ತಾರೆ ಎಂದು ಕಿಡಿಕಾರಿದ್ರು.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ ಮೊದಲ ಚುನಾವಣೆ ಎದುರಿಸಲಾಗಲಿಲ್ಲ.
ದುಡ್ಡು, ಜಾತಿ ಹೆಸರಲ್ಲಿ ಜನರ ದಿಕ್ಕುಗೆಡಿಸುವ ಪ್ರಯತ್ನ ಮಾಡಿ ಸೋಲು ಕಂಡಿದ್ದಾರೆ.
ಶಾಸಕ ಸಿದ್ದು ಸವದಿ ಅಸಭ್ಯ ವರ್ತನೆ: ಡಿಕೆಶಿ ಹೇಳಿದ್ದೇನು..?
ಸೋಲಾದ ನಂತರವೂ ಧೃತಿಗೆಡುವ ಅವಶ್ಯಕತೆ ಇಲ್ಲಾ ಅಂತ ಹೇಳ್ತಿದಾರೆ ಎಂದು ವ್ಯಂಗ್ಯವಾಡಿದ್ರು.
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಈಶ್ವರಪ್ಪ, ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಕೇಂದ್ರ ನಾಯಕರಿಗೆ ಸಂಬಂಧಿಸಿದ್ದು ಕೇಂದ್ರದ ನಾಯಕರು ತೆಗೆದುಕೊಂಡು ನಿರ್ಧಾರಕ್ಕೆ ರಾಜ್ಯದ ಎಲ್ಲಾ ಶಾಸಕರು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel