ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸಿಸಿಬಿ ಪೊಲಿಸರು ನಟಿ ರಾಗಿಣಿಯನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿದ್ದಾರೆ. ರಾಗಿಣಿ ಪರ ವಕೀಲರು ಶನಿವಾರ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆಯಲಿದೆ.
ಡ್ರಗ್ಸ್ ಮಾಫಿಯಾ ಜತೆ ನಂಟು ಹೊಂದಿರುವ ಆರೋಪದಡಿ ನಟಿ ರಾಗಿಣಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನ್ಯಾಯಾಲಯ ರಾಗಿಣಿಯನ್ನು 3 ದಿನಗಳ ಸಿಸಿಬಿ ಕಸ್ಟಡಿಗೆ ನೀಡಿದೆ. ಇಂದು ರಾಗಿಣಿ ಸಿಸಿಬಿ ಕಸ್ಟಡಿಗೆ ಅಂತ್ಯಗೊಳ್ಳುತ್ತಿದ್ದು, ಸಿಸಿಬಿ ಪೊಲೀಸರು ಇನ್ನಷ್ಟು ದಿನ ವಿಚಾರಣೆಗೆ ಕಸ್ಟಡಿಗೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಈ ನಡುವೆ, ರಾಗಿಣಿ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ಸಿಟಿ ಸಿವಿಲ್ ಕೋರ್ಟ್ನಲ್ಲಿ ಬರಲಿದೆ. ಇಂದು ರಾಗಿಣಿಗೆ ಜಾಮೀನು ಸಿಗುತ್ತೋ ಇಲ್ಲವೋ, ಅರ್ಜಿ ವಿಚಾರಣೆ ಮುಂದಕ್ಕೆ ಹೋಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜಾಮೀನು ಕಷ್ಟ ಎನ್ನುತ್ತಿವೆ ಸೆಕ್ಷನ್ಗಳು…!
ನಟಿ ರಾಗಿಣಿ ಜಾಮೀನು ಅರ್ಜಿ ಇಂದು ವಿಚಾರಣೆಗೆ ಬಂದರೂ ಬೇಲ್ ಸಿಗುವುದು ಎನ್ನಲಾಗುತ್ತಿದೆ.
1. ವಿಚಾರಣೆ ವೇಳೆ ಸಿಸಿಬಿ ಪೊಲೀಸರಿಗೆ ಸಹಕಾರ ನೀಡದಿರುವುದು
2. ಜಾಮೀನು ನೀಡಿದರೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆ
3. ಮಾದಕ ವಸ್ತುಗಳ ನಿಯಂತ್ರಣ ಕಾಯ್ದೆ 1985ರ ಅಡಿ ದಾಖಲಾದ 21, 21ಸಿ, 27ಅ, 27ಬಿ ಹಾಗೂ 29 ಅಡಿ ದಾಖಲಾಗಿರುವ ಕೇಸ್ಗೆ ಜಾಮೀನು ಸಿಗುವುದು ಅನುಮಾನ
4. 120ಬಿ, ಕಾನೂನು ಬಾಹಿರ ಚಟುವಟಿಕೆ ಆರೋಪದಡಿ ಕೇಸ್
5. ರಾಗಿಣಿ ಮನೆಯಲ್ಲಿ ಗಾಂಜಾ ಹಾಗೂ ಡ್ರಗ್ಸ್ ಸಿಕ್ಕಿರುವ ಸಾಧ್ಯತೆ
ಈ ಎಲ್ಲಾ ಪ್ರಕರಣಗಳಡಿ ರಾಗಿಣಿ ಸೇರಿದಂತೆ 12 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜತೆಗೆ ವಿಚಾರಣೆ ವೇಳೆ ರಾಗಿಣಿ ಬಾಯ್ ಫ್ರೆಂಡ್ ರವಿಶಂಕರ್ ನೀಡಿದ ಹೇಳಿಕೆ, ಮೊದಲ ಬಾಯ್ಫ್ರೆಂಡ್ ಶಿವಕುಮಾರ್ ನೀಡಿರುವ ಹೇಳಿಕೆಗಳು ರಾಗಿಣಿಗೆ ಜಾಮೀನು ಸಿಗುವುದು ಅನುಮಾನ ಎನ್ನುತ್ತಿವೆ.