Balakrishna | ಬೋಯಪಾಟಿ ಜೊತೆ ಮತ್ತೊಂದು ಸಿನಿಮಾ ಆದ್ರೆ ಟ್ವಿಸ್ಟ್..
ಟಾಲಿವುಡ್‌ನಲ್ಲಿ ಅನೇಕ ಬ್ಲಾಕ್‌ಬಸ್ಟರ್ ಕಾಂಬಿನೇಷನ್ ಗಳು ಇರಬಹುದು.
ಆದರೆ ಬೋಯಪತಿ, ಬಾಲಯ್ಯ ಕಾಂಬೋಗೆ ಅದರದ್ದೇಯಾದ ಕ್ರೇಜ್ ಇದೆ.
ಸಿಂಹ, ಲೆಜೆಂಡ್, ಅಖಂಡ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಬ್ಲಾಕ್‌ಬಸ್ಟರ್‌ಗಳು.
BC ಪ್ರೇಕ್ಷಕರಿಗೆ ಫುಲ್ ಮೀಲ್ಸ್ ಒದಗಿಸಿದ ಚಲನಚಿತ್ರಗಳು.
ಹಾಗಾಗಿಯೇ ಈ ಕಾಂಬೊ ಮತ್ತೆ ರಿಪೀಟ್ ಆಗೋದಕ್ಕೆ ಟಾಲಿವುಡ್ ಮಂದಿ ಸಾಕಷ್ಟು ಕಾತರದಿಂದ ಕಾಯುತ್ತಿದ್ದಾರೆ.
ಬಾಲಯ್ಯ ಮತ್ತು ಬೋಯಪಟಿ ಮುಂದಿನ ಸಿನಿಮಾ ಅಖಂಡ-2 ಆಗಿರಬೇಕು ಎಂದು ಎಲ್ಲರೂ ನಿರೀಕ್ಷಿಸುತ್ತಾರೆ.
ಯಾಕೆಂದರೆ ಅಖಂಡ 2 ಸಿನಿಮಾದ ಸ್ಟೋರಿ ರೆಡಿ ಇದೆ ಎಂದು ನಿರ್ದೇಶಕ ಬೋಯಪಾಟಿ ಹೇಳಿದ್ದಾರೆ.
ಆದ್ರೆ ಇಲ್ಲಿ ಬಾಲಯ್ಯ ಟ್ವಿಸ್ಟ್ ಕೊಟ್ಟಿದ್ದು, ಲೆಜೆಂಡ್ ಸಿನಿಮಾ ರೀತಿಯಲ್ಲಿ ಪೊಲಿಟಿಕಲ್ ಡ್ರಾಮಾ ರೀತಿ ಸಿನಿಮಾ ಮಾಡುವಂತೆ ಶ್ರೀನುಗೆ ಬಾಲಯ್ಯ ಹೇಳಿದ್ದಾರೆ.
ಇದಕ್ಕೆ ಬೋಯಪಾಟಿ ಓಕೆ ಎಂದಿದ್ದಾರಂತೆ.
ಸದ್ಯ ಬೋಯಪತಿ ಎನರ್ಜಿಟಿಕ್ ಹೀರೋ ರಾಮ್ ಜೊತೆ ಸಿನಿಮಾಗೆ ಕಮಿಟ್ ಆಗಿದ್ದಾರೆ.
ಇವರಿಬ್ಬರ ಕಾಂಬಿನೇಷನ್ ನಲ್ಲಿ ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.ಇನ್ನೊಂದೆಡೆ ಗೋಪಿಚಂದ್ ಮಲಿನೇನಿ ಮೇಕಿಂಗ್ ನಲ್ಲಿ ಬಾಲಯ್ಯ ಕೂಡ ನಟಿಸುತ್ತಿದ್ದಾರೆ.
ಅದರ ನಂತರ ಅನಿಲ್ ರವಿಪುಡಿ ಜೊತೆ ಸಿನಿಮಾ ಮಾಡಲಿದ್ದಾರೆ. ಈ ಎರಡು ಸಿನಿಮಾಗಳ ನಂತರ ಬಾಲಯ್ಯ ಬೋಯಪತಿ ಸಿನಿಮಾ ಸೆಟ್ಟೇರಲಿದೆ.