ADVERTISEMENT
Sunday, August 9, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

BAN v IND : ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್‌ ಸೋಲು

Namratha Rao by Namratha Rao
December 8, 2022
in ಕ್ರಿಕೆಟ್, News, Newsbeat, Sports
india bangladesh
Share on FacebookShare on TwitterShare on WhatsappShare on Telegram

BAN v IND : ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್‌ ಸೋಲು

ಗಾಯದ ಸಮಸ್ಯೆ ನಡುವೆಯೂ ತಂಡಕ್ಕಾಗಿ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮ(51*) ಅವರ ಕೆಚ್ಚೆದೆಯ ಆಟ ಹಾಗೂ ಶ್ರೇಯಸ್‌ ಅಯ್ಯರ್‌(82) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನಡುವೆಯೂ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ 5 ರನ್‌ಗಳ ಸೋಲನುಭವಿಸಿದೆ.

Related posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

August 8, 2026
malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

August 8, 2026

ಢಾಕಾದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಮೊದಲ ಪಂದ್ಯದಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದ ಮೆಹಿದಿ ಹಸನ್‌(100*) ಎರಡನೇ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದರು.

ಪರಿಣಾಮ ಬಾಂಗ್ಲಾ ತಂಡ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 271 ರನ್‌ಗಳ ಉತ್ತಮ ಮೊತ್ತ ಕಲೆಹಾಕಿತು. ಈ ಟಾರ್ಗೆಟ್‌ ಚೇಸ್‌ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 266 ರನ್‌ಗಳಿಸಲಷ್ಟೇ ಶಕ್ತವಾಯಿತು. ಆ ಮೂಲಕ 5 ರನ್‌ಗಳ ಸೋಲನುಭವಿಸಿದ ಭಾರತ, ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಸರಣಿ ಸೋಲನುಭವಿಸಿತು.

ಮೆಹಿದಿ ಶತಕದ ಅಬ್ಬರ : ಮೊದಲು ಬ್ಯಾಟ್‌  ಮಾಡಿದ ಬಾಂಗ್ಲಾದೇಶ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ನಿರೀಕ್ಷಿತ ಪ್ರದರ್ಶನ ಸಿಗಲಿಲ್ಲ. ಆರಂಭಿಕರಾದ ಅನ್ಮುಲ್‌(11) ಹಾಗೂ ನಾಯಕ ಲಿಟನ್‌ ದಾಸ್‌(7) ಬಹುಬೇಗನೆ ವಿಕೆಟ್‌ ಒಪ್ಪಿಸಿದರೆ. ನಂತರ ಬಂದ ಶ್ಯಾಂಟೊ(21), ಶಕೀಬ್‌(8), ಮುಶ್ಫಿಕರ್‌(12) ಹಾಗೂ ಅಫೀಫ್‌(0) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಪರಿಣಾಮ ಅತಿಥೇಯ ತಂಡ 69 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆದರೆ ಈ ಹಂತದಲ್ಲಿ ಜೊತೆಯಾದ ಮಹಮದುಲ್ಲಾ(77) ಹಾಗೂ ಮೆಹಿದಿ ಹಸನ್‌(100*) ತಂಡಕ್ಕೆ ಆಸರೆಯಾದರು. ಭಾರತದ ಬೌಲಿಂಗ್‌ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಈ ಜೋಡಿ 7ನೇ ವಿಕೆಟ್‌ಗೆ 148 ರನ್‌ಗಳ ಅತ್ಯುತ್ತಮ ಜೊತೆಯಾಟವಾಡಿ ಮಿಂಚಿದರು.
ಮೊದಲ ODI ಪಂದ್ಯದಲ್ಲಿ ಭಾರತದಿಂದ ಗೆಲುವನ್ನ ಕಸಿದುಕೊಂಡ ಮೆಹಿದಿ ಹಸನ್‌, 83 ಬಾಲ್‌ಗಳಲ್ಲಿ 8 ಬೌಂಡರಿ, 4 ಸಿಕ್ಸರ್‌ ಮೂಲಕ ಅಜೇಯ 100* ಸಿಡಿಸಿ ಅಬ್ಬರಿಸಿದರೆ. ಇವರಿಗೆ ಉತ್ತಮ ಸಾಥ್‌ ನೀಡಿದ ಮಹಮದುಲ್ಲಾ(77) ರನ್‌ಗಳ ಉಪಯುಕ್ತ ಕಾಣಿಕೆ ನೀಡಿದರು. ಪರಿಣಾಮ ಬಾಂಗ್ಲಾದೇಶ 7 ವಿಕೆಟ್‌ಗೆ 271 ರನ್‌ಗಳಿಸಿತು. ಭಾರತದ ಪರ ವಾಷಿಂಗ್ಟನ್‌ ಸುಂದರ್‌ 3, ಸಿರಾಜ್‌ ಹಾಗೂ ಉಮ್ರಾನ್‌ ಮಲ್ಲಿಕ್‌ ತಲಾ 2 ವಿಕೆಟ್‌ ಪಡೆದರು.

ಶ್ರೇಯಸ್‌, ರೋಹಿತ್‌ ವ್ಯರ್ಥ ಆಟ:
ಬಾಂಗ್ಲಾ ತಂಡ ನೀಡಿದ 272 ರನ್‌ಗಳ ಟಾರ್ಗೆಟ್‌ ಬೆನ್ನತ್ತಿದ ಭಾರತ ಆರಂಭಿಕ ಆಘಾತ ಕಂಡಿತು. ಗಾಯದ ಸಮಸ್ಯೆಗೆ ಸಿಲುಕಿದ ರೋಹಿತ್‌ ಶರ್ಮ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ(5) ಹಾಗೂ ಶಿಖರ್‌ ಧವನ್‌(8) ರನ್‌ಗಳಿಸಿ ಹೊರನಡೆದರು. ನಂತರ ಬಂದ ವಾಷಿಂಗ್ಟನ್‌ ಸುಂದರ್‌(11), ಕೆಎಲ್‌ ರಾಹುಲ್‌(14) ಸಹ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ ಈ ಹಂತದಲ್ಲಿ ಜೊತೆಯಾದ ಶ್ರೇಯಸ್‌ ಅಯ್ಯರ್‌(82) ಹಾಗೂ ಅಕ್ಸರ್‌ ಪಟೇಲ್‌(56) ಅರ್ಧಶತಕ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದರು.

ಆದರೆ ಮಧ್ಯಮ ಕ್ರಮಾಂಕದಲ್ಲಿ ಶಾರ್ದೂಲ್‌ ಥಾಕೂರ್‌(7), ದೀಪಕ್‌ ಚಹರ್‌(11) ಸಹ ಬಹುಬೇಗನೆ ಪೆವಿಲಿಯನ್‌ ಸೇರಿದರು. ಈ ವೇಳೆ ಗಾಯದ ಸಮಸ್ಯೆ ನಡುವೆಯೂ ತಂಡಕ್ಕಾಗಿ ಬ್ಯಾಟಿಂಗ್‌ ಮಾಡಿದ ನಾಯಕ ರೋಹಿತ್‌ ಶರ್ಮ, ಕೇವಲ 28 ಬಾಲ್‌ಗಳಲ್ಲಿ 3 ಬೌಂಡರಿ, 5 ಸಿಕ್ಸ್‌ ಮೂಲಕ 51* ರನ್‌ಗಳಿಸಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಹೀಗಾಗಿ 9 ವಿಕೆಟ್‌ಗೆ 266 ರನ್‌ಗಳಿಸಿದ ಭಾರತ 5 ರನ್‌ಗಳ ಸೋಲೊಪ್ಪಿಕೊಂಡಿತು. ಬಾಂಗ್ಲಾ ಪರ ಹೊಸೈನ್‌ 3, ಮೆಹಿದಿ ಹಾಗೂ ಶಕೀಬ್‌ ತಲಾ 2 ವಿಕೆಟ್‌ ಪಡೆದರು.

Tags: #saakshatvBAN v INDBangladeshindia
ShareTweetSendShare
Join us on:

Related Posts

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

film- ‘ನ್ಯಾಚುರಲ್ ಸ್ಟಾರ್’ ನಾನಿ ಅಭಿನಯದ ‘ದಿ ಪ್ಯಾರಡೈಸ್’ ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ!

by admin
August 8, 2026
0

'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ 'ದಿ ಪ್ಯಾರಡೈಸ್' ಸ್ಫೋಟಕ ಟೀಸರ್ ರಿಲೀಸ್: ಸೆಪ್ಟೆಂಬರ್ 24ಕ್ಕೆ ವಿಶ್ವಾದ್ಯಂತ ಬಿಡುಗಡೆ! ಹೈದರಾಬಾದ್: 'ನ್ಯಾಚುರಲ್ ಸ್ಟಾರ್' ನಾನಿ ಅಭಿನಯದ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್...

malayalam-movie-half-tiff-selection-excel-entertainment-deal-kannada

Film – ಕೆನಡಾದ ‘ಟೊರೊಂಟೊ ಫಿಲ್ಮ್ ಫೆಸ್ಟಿವಲ್’ಗೆ ಮಲಯಾಳಂನ ‘ಹಾಫ್’ ಸಿನಿಮಾ ಆಯ್ಕೆ: ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಜೊತೆ ಬೃಹತ್ ಒಪ್ಪಂದ!

by admin
August 8, 2026
0

ಮುಂಬೈ: ಮಲಯಾಳಂ ಚಿತ್ರರಂಗದ ಬಿಗ್ ಬಜೆಟ್ ವ್ಯಾಂಪೈರ್ ಆಕ್ಷನ್ ಥ್ರಿಲ್ಲರ್ ‘ಹಾಫ್’ (HALF) ಸಿನಿಮಾವು ಜಾಗತಿಕ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ. 'ಫ್ರಾಗ್ರೆಂಟ್ ನೇಚರ್ ಫಿಲ್ಮ್ ಕ್ರಿಯೇಷನ್ಸ್'...

jio-new-long-term-ott-pass-plans-kannada

ಜಿಯೋ ಒಟಿಟಿ-ಪಾಸ್ ವ್ಯಾಪ್ತಿ ವಿಸ್ತರಣೆ: 3 ತಿಂಗಳಿಗೆ 550 ರೂ., ವರ್ಷಪೂರ್ತಿ ಮನರಂಜನೆಗೆ 2000 ರೂ.

by admin
August 8, 2026
0

- 15 ಪ್ರೀಮಿಯಂ ಒಟಿಟಿ ಅಪ್ಲಿಕೇಶನ್ ಮತ್ತು 1,000 ಕ್ಕೂ ಹೆಚ್ಚು ಲೈವ್ ಟಿವಿ ಚಾನೆಲ್‌ಗಳು - ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G - ವರ್ಷಪೂರ್ತಿ...

dr-vidyabhushana-bhaja-mana-workshop-kannada

Bengaluru – ಡಾ. ವಿದ್ಯಾಭೂಷಣ್ ನೇತೃತ್ವದ ‘ಭಜ ಮನ’ ಕಾರ್ಯಾಗಾರಕ್ಕೆ ಅಭೂತಪೂರ್ವ ಸ್ಪಂದನೆ!

by admin
August 8, 2026
0

• ಜಯನಗರದಲ್ಲಿ ಯಶಸ್ವಿಯಾಗಿ ಜರುಗಿದ 'ಭಜ ಮನ' ಗಾಯನ ಕಾರ್ಯಾಗಾರ • ವಿದ್ಯಾಭೂಷಣ್ - ಮೇಧಾ ಅವರಿಂದ ಹೊಸ ತಲೆಮಾರಿಗೆ ದಾಸ ಸಾಹಿತ್ಯದ ಮಾರ್ಗದರ್ಶನ • ಸಂಗೀತಾಸಕ್ತರಿಗೆ...

nagara-panchami-2026-history-significance-kannada

Astro- ನಾಗರ ಪಂಚಮಿ: ಪ್ರಾಚೀನ ನಾಗಾರಾಧನೆ, ಮಹತ್ವ ಮತ್ತು ವಿಶೇಷ ಆಚರಣೆಗಳು

by admin
August 8, 2026
0

ಭಾರತೀಯ ಸನಾತನ ಸಂಸ್ಕೃತಿಯು ಪ್ರಕೃತಿಯನ್ನು ದೈವಸ್ವರೂಪವೆಂದು ಭಾವಿಸಿ ಆರಾಧಿಸುವ ವಿಶಿಷ್ಟ ಹಾಗೂ ಅನಾದಿ ಪರಂಪರೆಯನ್ನು ಹೊಂದಿದೆ. ಪ್ರಕೃತಿ ಆರಾಧನೆಯಲ್ಲಿ 'ನಾಗಾರಾಧನೆ'ಯು ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ಸ್ಥಾನವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram