BAN vs IND 1st Test: ಭಾರತಕ್ಕೆ 188 ರನ್ ಗಳ ಭರ್ಜರಿ ಜಯ
ಆಲ್ರೌಂಡರ್ ಅಕ್ಸರ್ ಪಟೇಲ್(77/4) ಹಾಗೂ ಕುಲ್ದೀಪ್ ಯಾದವ್(73/3) ಅವರು ಸಂಘಟಿತ ಬೌಲಿಂಗ್ ದಾಳಿಯಿಂದ ಅತಿಥೇಯ ಬಾಂಗ್ಲಾದೇಶ ತಂಡವನ್ನ 324 ರನ್ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಮೊದಲ ಟೆಸ್ಟ್ನಲ್ಲಿ 188 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ.
ಚೆಟ್ಟೋಗ್ರಾಮ್ನಲ್ಲಿ ನಡೆದ ಪಂದ್ಯದ 5ನೇ ದಿನವಾದ ಭಾನುವಾರ 2ನೇ ಇನ್ನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ, ಕೇವಲ 52 ರನ್ಗಳಿಸಿ ತನ್ನ ನಾಲ್ಕು ವಿಕೆಟ್ಗಳನ್ನ ಕಳೆದುಕೊಂಡಿತು. ಹೀಗಾಗಿ 2ನೇ ಇನ್ನಿಂಗ್ಸ್ನಲ್ಲಿ 324 ರನ್ಗಳಿಗೆ ಆಲೌಟ್ ಆಗಿ, 188 ರನ್ಗಳ ಸೋಲನುಭವಿಸಿತು. ಬಾಂಗ್ಲಾ ಪರ ಜಾ಼ಕಿರ್ ಹಸನ್(100) ಹಾಗೂ ನಾಯಕ ಶಕೀಬ್(84) ರನ್ಗಳಿದರು. ಈ ಗೆಲುವಿನೊಂದಿಗೆ ಭಾರತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
4ನೇ ದಿನದ ಮೊತ್ತ 272/6 ರನ್ಗಳಿಂದ ದಿನದಾಟ ಆರಂಭಿಸಿದ ಬಾಂಗ್ಲಾ ತಂಡ ದಿನದ ಆರಂಭದಲ್ಲೇ ಮೆಹಿದಿ ಹಸನ್(13) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ಈ ಹಂತದಲ್ಲಿ ಬಿರುಸಿನ ಆಟಕ್ಕೆ ಮುಂದಾದ ನಾಯಕ ಶಕೀಬ್ ಅಲ್ ಹಸನ್(84) ರನ್ಗಳಿಸಿ ಹೊರ ನಡೆದರು. ನಂತರದಲ್ಲಿ ಬಂದ ತೈಜುಲ್ ಇಸ್ಲಾಮ್(4), ಎಬದೂತ್ ಹೊಸೈನ್(0) ಹೆಚ್ಚು ಹೊತ್ತು ಕ್ರೀಸ್ನಲ್ಲಿ ಉಳಿಯಲಿಲ್ಲ. ಹೀಗಾಗಿ ಬಾಂಗ್ಲಾದೇಶ ತನ್ನ 2ನೇ ಇನ್ನಿಂಗ್ಸ್ನಲ್ಲಿ 324 ರನ್ಗಳಿಗೆ ಆಲೌಟ್ ಆಯಿತು. ಭಾರತದ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಅಕ್ಸರ್ ಪಟೇಲ್ 4, ಕುಲ್ದೀಪ್ ಯಾದವ್ 3 ವಿಕೆಟ್ ಪಡೆದರೆ. ಸಿರಾಜ್, ಉಮೇಶ್ ಹಾಗೂ ಅಶ್ವಿನ್ ತಲಾ 1 ವಿಕೆಟ್ ಪಡೆದರು.
ಪಂದ್ಯದಲ್ಲಿ ಆಲ್ರೌಂಡ್ ಪ್ರದರ್ಶನ ನೀಡಿದ ಗಮನ ಸೆಳೆದ ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಹಾಗೂ ಸರಣಿಯ ಅಂತಿಮ ಟೆಸ್ಟ್ ಪಂದ್ಯ ಡಿ.22ರಿಂದ ಢಾಕಾದಲ್ಲಿ ನಡೆಯಲಿದೆ.
BAN vs IND 1st Test , congrats team india