Bangalore| ಸ್ನೇಹಿತನ ಪಿಕ್ ನಿಕ್ ಗೆ ಹೋಗಿದ್ದ ವಿದ್ಯಾರ್ಥಿನಿ ಸಾವು
ಚಿಕ್ಕಬಳ್ಳಾಪುರ : ಸ್ನೇಹಿತನ ಜೊತೆ ಪಿಕ್ ನಿಕ್ ಗೆ ತೆರಳಿದ್ದ ಬೆಂಗಳೂರಿನ ಯುವತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರದ ವಾಪಸಂದ್ರ ಬ್ರಿಡ್ಜ್ ಬಳಿ ನಡೆದಿದೆ.
ಬೆಂಗಳೂರು ಮೂಲದ ಯುವತಿ ಚೈತ್ರಾ ಮೃತಪಟ್ಟ ವಿದ್ಯಾರ್ಥಿನಿ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ ಚೈತ್ರಾ ತನ್ನ ಸ್ನೇಹಿತ ಲಿಖಿತ್ ಗೌಡನೊಂದಿಗೆ ಶ್ರೀನಿವಾಸ ಸಾಗರ ಜಲಾಶಯ ನೋಡಲು ತೆರಳಿದ್ದಾಳೆ.

ಆದ್ರೆ, ಜಲಾಶಯ ನೋಡಿ ಬೆಂಗಳೂರಿನತ್ತ ವಾಪಾಸ್ಸಾಗುವಾಗ ಚೈತ್ರಾ ಹೋಗುತ್ತಿದ್ದ ಬೈಕ್ ಗೆ ಟಿಪ್ಪರ್ ಗುದ್ದಿದೆ.
ಘಟನೆಯಲ್ಲಿ ಗೆಳೆಯ ಲಿಖಿತ್ ಗೌಡ ಗಂಭೀರವಾಗಿ ಗಾಯವಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. Bangalore A student who had gone to a friend’s picnic died saaksha tv








