Bangalore | ಲಾರಿ ಡಿಕ್ಕಿ ಹೊಡೆದು ಯುವಕ ಸಾವು
ಬೆಂಗಳೂರು : ಲಾರಿ ಡಿಕ್ಕಿ ಹೊಡೆದು ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಮನ್ ಮೃತ ದುರ್ದೈವಿಯಾಗಿದ್ದಾರೆ.
ಒನ್ ವೇ ನಲ್ಲಿ ಹೋಗಿ ಯೂ ಟರ್ನ್ ತೆಗೆದುಕೊಳ್ಳಲು ಸುಮನ್ ಮುಂದಾಗಿದ್ದು, ಈ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.
ಲಾರಿ ಡಿಕ್ಕಿಯ ರಭಸಕ್ಕೆ ಯುವಕ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಇತ್ತ ಲಾರಿಯ ಅಡಿಯಲ್ಲಿ ಬೈಕ್ ಸಿಲುಕಿಕೊಂಡಿದ್ದು, 300 ಮೀಟರ್ ವರೆಗೂ ಬೈಕ್ ಅನ್ನು ಎಳೆದೊಯ್ದಿದೆ.
ರಸ್ತೆಗೆ ಉಜ್ಜಿದ ಸ್ಪಾರ್ಕ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಬೆಂಕಿಗೆ ಲಾರಿ, ಬೈಕ್ ಸಂಪೂರ್ಣ ಆಹುತಿಯಾಗಿದೆ.
ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.