Bangalore | ಅಂಗಡಿಗಳಿಗೆ ಕನ್ನ ಹಾಕಿದ್ದ ಕಳ್ಳನ ಬಂಧನ
ಬೆಂಗಳೂರು : ನಗರದ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲಿನ ಅಂಗಡಿಗಳಿಗೆ ಕನ್ನ ಹಾಕಿದ ಕಳ್ಳನನ್ನು ಸದಾಶಿವನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
40 ವರ್ಷದ ಗೊಲ್ಲರಂಗಪ್ಪ ಬಂಧಿತ ಆರೋಪಿಯಾಗಿದ್ದಾನೆ.

ಗೊಲ್ಲರಂಗಪ್ಪ ಶ್ರೀಗಂಧದ ಮರ ಕಳ್ಳತನ ಪ್ರಕರಣದಲ್ಲಿ 5 ವರ್ಷ ಸಜೆ ಅನುಭವಿಸಿದ್ದರು.
ಜೈಲಿನಿಂದ ಹೊರ ಬಂದ ಬಳಿಕ ಕಮರ್ಷಿಯಲ್ ಕಾಂಪ್ಲೆಕ್ಸ್ ಗಳಲ್ಲಿ ಕಳ್ಳತನ ಆರಂಭಿಸಿದ್ದ.
ಈತನ ಮೇಲೆ 8 ಪ್ರಕರಣಗಳಿದ್ದು, ಬಂಧಿತನಿಂದ 10 ಸಾವಿರ ನಗದು ವಶಕ್ಕೆ ಪಡೆದುಕೊಂಡಿದ್ದಾರೆ.