Bangalore | ಶಿಕ್ಷಣ ಬದುಕನ್ನ ಬದಲಾಯಿಸುವಂತಹ ಸಾಧನ : ಸಿ.ಟಿ.ರವಿ
ಬೆಂಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಈ ಮಾತನಾಡಿ, ಶಿಕ್ಷಣ ಅನ್ನೋದು ಬದುಕನ್ನ ಬದಲಾಯಿಸುವಂತಹ ಸಾಧನ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿಯ ಯಲಚಗುಪ್ಪೆ ಗ್ರಾಮದಲ್ಲಿ ಬಂಟರ ಸಂಘದ ಬಿ.ಎಸ್.ಆರ್.ಎನ್.ಎಸ್ ವಿದ್ಯಾನಿಕೇತ-2 ನೂತನ ಶಾಲಾ ಕಟ್ಟಡದ ಸಂಕೀರ್ಣ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ನೂತನ ಶಾಲಾ ಕಟ್ಟಡವನ್ನು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿ.ಟಿ.ರವಿ, ಬಂಟರ ಸಂಘ ತಾನು ಮಾಡುತ್ತಿರುವ ಹತ್ತಾರು ಕಾರ್ಯಗಳ ನಡುವೆ ಶಿಕ್ಷಣ ಕ್ಷೇತ್ರವನ್ನ ಆದ್ಯತೆಯಾಗಿ ತೆಗೆದುಕೊಂಡು ಸಮಾಜದಲ್ಲಿ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದಕ್ಕೋಸ್ಕರ ನಾನು ವಿಶೇಷವಾದತಂಹ ಧನ್ಯವಾದ ತಿಳಿಸೋಕೆ ಬಯಸುತ್ತೇನೆ. ಶಿಕ್ಷಣವನ್ನ ಬಿಟ್ಟು ದೇಶ ಕಟ್ಟೋಕೆ ಸಾಧ್ಯ ಇಲ್ಲ. ದುರ್ದೈವದ ಸಂಗತಿ ಹತ್ತಾರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಸುಸಂಸ್ಕೃತ ಸಭ್ಯ ರಾಷ್ಟ್ರವಾಗಿದ್ದ ಭಾರತವನ್ನ ಪರಕೀಯರ ಆಕ್ರಮಣದಿಂದ ನಮ್ಮ ಸಂಪತ್ತನ್ನ ಕಳೆದುಕೊಂಡ್ವಿ, ನಮ್ಮ ಸಭ್ಯತೆಯನ್ನ ಕಳೆದುಕೊಂಡ್ವಿ, ನಮಗೆ ನಮ್ಮತನದ ಬಗ್ಗೆಯೆ ಅರಿವಿಲ್ಲದಂತಹ ಮೆಕಾಲೆ ಶಿಕ್ಷಣವನ್ನ ತಂದ್ರು ಅರ್ಧ ಸತ್ಯವನ್ನ ನಮಗೆ ಬೊಧಿಸಿದ್ರು.

ನಮ್ಮ ಶೌರ್ಯದ ಸಾಹಸದ ವಿಷಯವನ್ನ ಮರೆಮಾಚಿದ್ರು. ನಮ್ಮದು ಕೇವಲ ಸೋಲಿನ ಇತಿಹಾಸ, ಹೊರಗಿನವರೇ ಬಂದು ಆಳಿದ್ದಾರೆ. ಆಳುವ ಸಾಮರ್ಥ್ಯ ಇಲ್ಲದ ಭಾರತೀಯರು, ಆಳಿಸಿಕೊಳ್ಳಲು ಮಾತ್ರ ನಿಮಗೆ ಗೊತ್ತಿರೋದು. ಆಳುವ ಸಾಮರ್ಥ್ಯ ಇಲ್ಲ ಅನ್ನೋದನ್ನ ನಮ್ಮ ತಲೆಗೆ ತುಂಬಿದ್ರು ನಾವು ಅದನ್ನೇ ಸತ್ಯ ಎಂದು ನಂಬಿದ್ವಿ. ವಾಸ್ತವಿಕ ಸತ್ಯ ಬೇರೆನೇ ಇತ್ತು.
ಆದ್ರೆ ಭಾರತ ಈಗ ಬದಲಾಗುತ್ತಿದೆ. ಶಿಕ್ಷಣದ ಮೂಲಕ ಭಾರತವನ್ನ ಮತ್ತೆ ಕಟ್ಟಬೇಕು ಅನ್ನುವಂತಹ ಸಂಕಲ್ಪದೊಂದಿಗೆ ನಾವು ಜಗತ್ತಿನ ಸವಾಲನ್ನ ಎದುರಿಸುವುದಕ್ಕೆ ತಯಾರಾಗಿದ್ದೇವೆ. ಇಂಥ ಸಂದರ್ಭದಲ್ಲಿ RNS ವಿದ್ಯಾನಿಕೇತನ ಸಂಸ್ಥೆ ಕೇವಲ ಶಿಕ್ಷಣ ಮಾತ್ರ ಕೊಡೋದಲ್ಲ. ಶೀಲವಿತ್ತವಾದ ಶಿಕ್ಷಣವನ್ನ ಕೊಡಬೇಕು, ಚಾರಿತ್ರ್ಯವಂತ ಸಮಾಜವನ್ನ ನಿರ್ಮಾಣ ಮಾಡುವುದಕ್ಕೆ ಬೇಕಾದಂತಹ ಶಿಕ್ಷಣವನ್ನ ನೀಡಬೇಕು. ಯಾಕೆ ಅಂದ್ರೆ ಭಾರತೀಯರು ಗೌರವಿಸಿದ್ದು ಪೂಜಿಸಿದ್ದು ಸಂಪತ್ತನ್ನಲ್ಲ, ಚಾರಿತ್ರ್ಯವಂತರನ್ನ, ಶೀಲವನ್ನ ತ್ಯಾಗವನ್ನ ಸೇವೆಯನ್ನ. ಈ ರೀತಿಯ ಮನೋಭಾವೆನೆಯನ್ನ ಬೆಳೆಸುವಂತಹ ಶಿಕ್ಷಣವನ್ನ ನೀಡಬೇಕು ಎಂದು ಮನವಿ ಮಾಡಿಕೊಂಡರು..








