Bangalore | ಧಗಧಗಿಸಿದ ಕಾರು ಗ್ಯಾರೇಜ್ bangalore-fire accident car garage saaksha tv
ಬೆಂಗಳೂರು : ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾರು ಗ್ಯಾರೇಜ್ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ವಿವೇಕನಗರದ ಹೊನ್ನಾರ್ ಪೇಟ್ ನಲ್ಲಿ ನಡೆದಿದೆ.
ಬೆಂಕಿಯ ಕೆನ್ನಾಲಿಗೆಗೆ ಕಾರು ಗ್ಯಾರೇಜ್ ಸಂಪೂರ್ಣ ಭಸ್ಮವಾಗಿದ್ದು, ಮೂರು ಬೈಕ್, ನಾಲ್ಕು ಕಾರುಗಳು ಬೆಂಕಿಗಾಹುತಿಯಾಗಿವೆ.
ನಾಸೀರ್ ಎಂಬುವವರ ಮಾಲೀಕತ್ವದ ಗ್ಯಾರೇಜ್ ಇದಾಗಿದ್ದು, ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ.
ಇನ್ನು ಗ್ಯಾರೇಜ್ ನಲ್ಲಿ ಎರಡು ಸಿಲಿಂಡರ್ ಗಳಿದ್ದು, ಬೆಂಕಿ ಹೆಚ್ಚಾದ ಪರಿಣಾಮ ಸ್ಫೋಟಗೊಂಡಿವೆ. ಇದರ ಶಬ್ಧಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಸತತ ಒಂದುವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿ ನಂದಿಸಿದ್ದಾರೆ.