Bangalore | ಆರೋಗ್ಯ ಸಚಿವ ಸುಧಾಕರ್ ಗೆ ಕೊರೊನಾ ಪಾಸಿಟಿವ್
ಹೋಮ್ ಐಸೋಲೇಷನ್ ನಲ್ಲಿ ಸಚಿವರಿಗೆ ಚಿಕಿತ್ಸೆ
ಪಾಸಿಟಿವ್ ಕುರಿತಾಗಿ ಟ್ವಿಟ್ಟರ್ ನಲ್ಲಿ ಸಚಿವರಿಂದ ಮಾಹಿತಿ
ಡಾ.ಕೆ.ಸುಧಾಕರ್ ಗೆ ಸಣ್ಣ ಪ್ರಮಾಣದ ಜ್ವರದ ಲಕ್ಷಣ
ಬೆಂಗಳೂರು : ದೇಶದಲ್ಲಿ ಕೊರೊನಾ ಸೋಂಕು ನಾಲ್ಕನೇ ಅಲೆಯ ಆತಂಕ ಹೆಚ್ಚಾಗುತ್ತಿದೆ.
ಈ ನಡುವೆ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೊರೊನಾ ಸೋಂಕು ವಕ್ಕರಿಸಿದೆ.
ತಾವು ಕೊರೊನಾ ಪಾಸಿಟಿವ್ ಆಗಿರುವುದರ ಬಗ್ಗೆ ಸಚಿವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೂರು ಅಲೆಗಳ ಸಂದರ್ಭದಲ್ಲೂ ಕೋವಿಡ್ ಸೋಂಕಿನಿಂದ ಪಾರಾಗಿದ್ದ ನಾನು ಈಗ ಸೋಂಕಿಗೆ ತುತ್ತಾಗಿದ್ದೇನೆ.
ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ.
ಕೆಲ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಹೋಮ್ ಐಸೋಲೇಷನ್ ನಲ್ಲಿ ಇದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಡಾ.ಸುಧಾಕರ್ ಬರೆದುಕೊಂಡಿದ್ದಾರೆ.