Bangalore | ನಾಳೆ ಬೆಂಗಳೂರಿನಲ್ಲಿ ಭಾರಿ ಮಳೆ
ಭಾನುವಾರ ರಾತ್ರಿ ಸುರಿದಿದ್ದ ಮಳೆಗೆ ಬೆಂಗಳೂರು ನಗರ ತತ್ತರಿಸಿತ್ತು. ಆದ್ರೆ ಸೋಮವಾರ ಬೆಳಗ್ಗೆ ಬಿಸಿಲು ಜನರಿಗೆ ಚುರುಕು ಮುಟ್ಟಿಸುತ್ತಿತ್ತು.
ಸಂಜೆ ಆಗುತ್ತಿದ್ದಂತೆ ವಾತಾವರಣ ಬದಲಾಗಿ ಗುಡುಗು-ಮಿಂಚು ಸಹಿತ ಮಳೆಯಾಗಿದ್ದು, ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಈ ನಡುವೆ ಸಿಲಿಕಾನ್ ಸಿಟಿಯಲ್ಲಿ ಇಂದು ಮತ್ತು ನಾಳೆ ಸಹ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನ ಬೆಳ್ಳಂದೂರು, ಮಾರತ್ಹಳ್ಳಿ, ಏರ್ಪೋರ್ಟ್ ರೋಡ್, ಮಹದೇವಪುರ ವ್ಯಾಪ್ತಿಯ ರಸ್ತೆಗಳಲ್ಲಿ ಎರಡರಿಂದ ಮೂರು ಅಡಿಗಳಷ್ಟು ನೀರು ಹರಿದ ಪರಿಣಾಮ ವಾಹನ ಸವಾರರು ಹೈರಾಣಾಗಿದ್ದಾರೆ.
ಇತ್ತ ನಿರಂತರ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳಲ್ಲಿರುವ ಗುಂಡಿಗಳ ಸಂಖ್ಯೆಹೆಚ್ಚಾಗುತ್ತಿವೆ.
ಅಂಡರ್ ಪಾಸ್ ಗಳು ಜಲಾವೃತಗೊಳ್ಳುತ್ತಿರುವ ಹಿನ್ನೆಲೆ ವಾಹನ ಸವಾರರು ಸುತ್ತಿ ಬಳಸಿ ಮನೆ, ಕಚೇರಿ ತಲುಪುವಂತಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ 28 ಮತ್ತು ಕನಿಷ್ಠ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.