Bangalore – ಪತಿ ಅಕ್ರಮ ಸಂಬಂಧ – ಪತ್ನಿ ಆತ್ಮಹತ್ಯೆ
ಬೆಂಗಳೂರು : ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ರಾಮಮೂರ್ತಿನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಂದಾ ಪುರೋಹಿತ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಚಂದಾ ಪುರೋಹಿತ್ ಅವರ ಪತಿ ನರೇಂದರ್ ಸಿಂಗ್ ಅವರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಇಬ್ಬರು 12 ವರ್ಷಗಳ ಹಿಂದೆ ವಿವಾಹವಾಗಿದ್ದು, 9 ಮತ್ತು 4 ವರ್ಷದ ಗಂಡು ಮಕ್ಕಳಿದ್ದಾರೆ.
ರಾಜಸ್ಥಾನ ಮೂಲದವರಾದ ಇವರು ಬೆಂಗಳೂರಲ್ಲೇ ಹುಟ್ಟಿ ಬೆಳೆದಿದ್ದರು.

ಮದುವೆ ಬಳಿಕ ಬೇರೊಬ್ಬ ಮಹಿಳೆ ಜೊತೆಗೆ ನರೇಂದರ್ ಸಿಂಗ್ ಅಕ್ರಮ ಸಂಬಂಧ ಹೊಂದಿದ್ದು, ಈ ಹಿಂದೆ ಕೂಡ ಆಕೆಯ ಜೊತೆಗೆ ಟ್ರಿಪ್ ಹೋಗಿದ್ದನಂತೆ.
ಈ ವೇಳೆ ಪತಿ ಕಾಣೆಯಾದ ಬಗ್ಗೆ ಪತ್ನಿ ಚಂದಾ ಪುರೋಹಿತ್ ದೂರು ನೀಡಿದ್ದರು. ಆ ವೇಳೆ ಪೊಲೀಸರು ನರೇಂದರ್ ಸಿಂಗ್ ಅವರಿಗೆ ಬುದ್ಧಿ ಮಾತೇಳಿ ಕಳುಹಿಸಿದ್ದರು. ಆದ್ರೆ ಇದೀಗ ಮತ್ತೆ ಆ ಸಂಬಂಧ ಮುಂದುವರೆದಿದ್ದು, ಇದರಿಂದ ಬೇಸತ್ತ ಚಂದಾ ಪುರೋಹಿತ್ ಅವರು ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.