ಬೆಂಗಳೂರು : 40 ಲಕ್ಷಿಕ್ಕಿಂತ ಕಡಿಮೆ ಜನಸಂಖ್ಯೆ ವಿಭಾಗದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ‘ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ’ ಅಂದರೆ ಅತ್ಯುತ್ತಮ ಸ್ವಯಂ ಸುಸ್ಥಿರ ಮೆಗಾ ಸಿಟಿ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಕುರಿತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾಶಂಕರ್ ಮಿಶ್ರಾ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಬಯೋಮ್ಯಾನ್ ಮೂಲಕ ಮನೆಯಲ್ಲೇ ಗೊಬ್ಬರ ತಯಾರಿ ವ್ಯವಸ್ಥೆಯಿಂದಾಗಿ ಬೆಂಗಳೂರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಮೂಲಕ ಬೆಸ್ಟ್ ಸೆಲ್ಫ್ ಸಸ್ಟೇನೆಬಲ್ ಮೆಗಾ ಸಿಟಿ ಬಿರುದು ಬೆಂಗಳೂರಿಗೆ ಲಭಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನಾಗರಿಕರೇ ನಡೆಸುವ ಕಾಂಪೋಸ್ಟ್ ಮಾರುಕಟ್ಟೆ ಅಥವಾ ಕಾಂಪೋಸ್ಟ್ ಸಂದೇಶಗಳಲ್ಲಿ ವಿವಿಧ ರೀತಿಯ ಮಿಶ್ರ ಗೊಬ್ಬರ ತಯಾರಿಕೆಯನ್ನು ಪ್ರದರ್ಶಿಸಲಾಗುತ್ತದೆ. ಇದು ದೇಶದ ಉಳಿದ ಭಾಗಗಳಿಗೆ ಸ್ಪೂರ್ತಿದಾಯಕ ಮಾದರಿಯಾಗಿದೆ. ನಗರದ ಸ್ಥಳೀಯ ಸಂಸ್ಥೆ(ಯುಎಲ್ ಬಿ) ಒಡಿಎಫ್++ ಟ್ಯಾಗ್ ನ್ನು ಮುಡಿಗೇರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.
ತ್ಯಾಜ್ಯ ನಿರ್ವಹಣೆ ಕುರಿತು ಕೇಂದ್ರೀಕರಿಸುವುದು ಹಾಗೂ ಮನೆ ಗೊಬ್ಬರದ ಕುರಿತು ಉತ್ತೇಜನ ನೀಡುತ್ತಿರುವುದಕ್ಕೆ ನಮ್ಮ ಬೆಂಗಳೂರಿಗೆ ಈ ಪ್ರಶಸ್ತಿ ಲಭಿಸಿದೆ.








