Bangalore | ಕರ್ನಾಟಕದಲ್ಲೂ ‘ಮಾರಾಟ ಪರ್ವ’ ಶುರು
ಬೆಂಗಳೂರು : ಮೋದಿಯವರ ಆದರ್ಶದಂತೆ ಕರ್ನಾಟಕದಲ್ಲೂ ‘ಮಾರಾಟ ಪರ್ವ’ ಶುರು ಮಾಡಿದೆ #40ಪರ್ಸೆಂಟೇಜ್ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕಲ್ಯಾಣ ಕರ್ನಾಟಕದ ರಸ್ತೆ ಸಾರಿಗೆ ಸಂಸ್ಥೆ ಮತ್ತು ವಾಯುವ್ಉ ಕರ್ನಾಟಕ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ ಇರುವ ಲಾಭದಾಯದ ಮಾರ್ಗಗಳನ್ನು ಸರ್ಕಾರ ಖಾಸಗಿಯವರಿಗೆ ಬಿಟ್ಟು ಕೊಡಲು ತೀರ್ಮಾನಿಸಿದೆ. ಈ ಸಂಬಂದ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಮೋದಿಯವರ ಆದರ್ಶದಂತೆ ಕರ್ನಾಟಕದಲ್ಲೂ ‘ಮಾರಾಟ ಪರ್ವ’ ಶುರು ಮಾಡಿದೆ #40ಪರ್ಸೆಂಟೇಜ್ ಸರ್ಕಾರ. ಹೈಕೋರ್ಟ್ ತಡೆಯಾಜ್ಞೆ ಇದ್ದರೂ ಸರ್ಕಾರಿ ಸಾರಿಗೆ ಸಂಸ್ಥೆಗಳ ಹಿತಕ್ಕೆ ಕೊಳ್ಳಿ ಇಟ್ಟು ಲಾಭದಾಯಕ ಮಾರ್ಗಗಳನ್ನು ಖಾಸಗಿಯವರಿಗೆ ಬಿಟ್ಟು ಕೊಡಲು ಮುಂದಾಗಿದೆ ಸರ್ಕಾರ. ಖಾಸಗಿ ಲಾಭಿಯೊಂದಿಗೆ ಎಷ್ಟು ಕಮಿಷನ್ ದೋಚುವ ಯೋಜನೆ ಇದೆ ಶ್ರೀರಾಮುಲು ಅವರೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್‌ನ ಹಳೆಯ ಹಗರಣ ಕೆದಕುತ್ತೇವೆ ಎನ್ನುವ ಬಿಜೆಪಿಯ ಪ್ರಯತ್ನವು ನೀರಿಲ್ಲದ ಬಾವಿಗೆ ಕೊಡ ಇಳಿಸಿದಂತೆಯೇ ಸರಿ! ಆದರೆ ಈಗ ಹಳೆಯ ಹಗರಣಗಳ ಭೂತ ಮೇಲೆದ್ದು ಬಂದು ಕಾಡ್ತಿರೋದು ಕಾಂಗ್ರೆಸ್‌ಗಲ್ಲ ಸ್ವತಃ ಬಿಜೆಪಿಗೆ. ಮಾಜಿ #PayCM ಬಿ.ಎಸ್.ಯಡಿಯೂರಪ್ಪ & ಕಟುಂಬದ ಅಕ್ರಮದ ತನಿಖೆ ಬಗ್ಗೆ ಹಾಲಿ #PayCM ಮೌನವ್ರತ ಮಾಡ್ತಿರೋದೇಕೆ?

ಕೋಮು ಗಲಭೆ, ಪೊಲೀಸರ ಮೇಲಿನ ಹಲ್ಲೆ ಪ್ರಕರಣಗಳನ್ನು ವಾಪಸ್ ಪಡೆಯುವ ನಿರ್ಧಾರದ ಮೂಲಕ #40ಪರ್ಸೆಂಟೇಜ್ ಸರ್ಕಾರ ಯಾವ ಸಂದೇಶ ನೀಡಲು ಹೊರಟಿದೆ? ಪೊಲೀಸರ ನೈತಿಕ ಸ್ಥೈರ್ಯ ಕಸಿಯುವ ಈ ನಿರ್ದಾರ ರಾಜ್ಯದ ಕಾನೂನು ಸುವ್ಯವಸ್ಥೆಯ ಮೇಲೆ ಬೀರುವ ಪರಿಣಾಮದ ಬಗ್ಗೆ ಗೃಹಸಚಿವರಿಗೆ ಅರಿವಿದೆಯೇ? ಹಿಂದಿನ ಗೃಹಮಂತ್ರಿ ಇಂದಿನ #PayCM ಅವರಿಗೂ ಪ್ರಜ್ಞೆ ಇಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಾಂಗ್ರೆಸ್ ನಾಯಕರನ್ನು ಅರೆಸ್ಟ್ ಮಾಡಲೂ ಸಹ #40ಪರ್ಸೆಂಟೇಜ್ ಸರ್ಕಾರ ಕ್ಕೆ ಯೋಗ್ಯತೆ ಇಲ್ಲ. ಬ್ರೇಕ್ ಇಲ್ಲದ ಭ್ರಷ್ಟಾಚಾರ ಬ್ರೇಕ್ ಇಲ್ಲದ ಡಕೋಟಾ ಬಸ್ಸು! ಡಬಲ್ ಇಂಜಿನ್ ಸರ್ಕಾರ ಡಕೋಟಾ ಬಸ್ಸು ಕಳಿಸಿದೆ.
#PayCM ಅವರೇ, ಕಾಂಗ್ರೆಸ್ ನಾಯಕರನ್ನು ಬಂಧಿಸಲು ನೀವು ಕಳಿಸಿದ ಬಸ್ಸು ಥೇಟ್ ನಿಮ್ಮ #40ಪರ್ಸೆಂಟೇಜ್ ಸರ್ಕಾರ ವನ್ನೇ ಪ್ರತಿನಿಧಿಸುತ್ತಿತ್ತು. ಮುಂದೆ ಚಲಿಸದ ಬಸ್ಸು – ಮುನ್ನೆಡೆಯದ ಸರ್ಕಾರ. ಬ್ರೇಕ್ ಇಲ್ಲದ ಬಸ್ಸು – ಬ್ರೇಕ್ ಇಲ್ಲದ ಭ್ರಷ್ಟಾಚಾರ. ಕೆಟ್ಟು ಹೋದ ಗೇರ್ – ಕೆಟ್ಟು ಹೋದ ಆಡಳಿತ. ಡಬಲ್ ಇಂಜಿನ್ ಅಲ್ಲ – ಡಕೋಟಾ ಇಂಜಿನ್ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.