Bangalore : ಗೋವಿಂದರಾಜನಗರ ಕ್ಷೇತ್ರದಲ್ಲಿ ಹಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿರುವ ಬಿಬಿಎಂಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡವನ್ನು ಸಚಿವ ವಿ.ಸೋಮಣ್ಣರವರು ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು ಬಡವರ ಸಂಕಷ್ಟಗಳನ್ನು ಅರಿತು ಬಡವರಿಗಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಎಂ.ಸಿ ಲೇಔಟ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಆದಿಚುಂಚನಗಿರಿ ಶ್ರೀಗಳ ಹೆಸರನ್ನು ಇಡಬೇಕು ಎಂಬ ಇಂಗಿತವಿದೆ.
ಶ್ರೀಗಳಿಗೂ ನಮಗೂ ಅವಿನಾಭಾವ ಸಂಬಂಧವಿದೆ. ಇಂದು ಈ ಮಹತ್ವದ ಸ್ಥಾನದಲ್ಲಿರಲೂ ಅವರ ಆಶೀರ್ವಾದವೇ ಕಾರಣ.
ರಾಜಕೀಯ ಸಾಕು ಎಂದು ಅಸಮಾಧಾನಗೊಂಡಾಗ ಧೈರ್ಯ ತುಂಬಿದವರು ಆದಿಚುಂಚನಗಿರಿ ಶ್ರೀಗಳು ಮತ್ತು ಸಿದ್ದಗಂಗೆಯ ಶ್ರೀಗಳು.
೮.೩ ಕಿಲೋ ಮೀಟರ್ ಉದ್ದದ, ೬೬ ಕಿಲೋ ವ್ಯಾಟ್ ನ ಹೈಟೆನ್ಶನ್ ಲೈನ್ ಅನ್ನು ೧೪೫ ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಡ್ ರಸ್ತೆಯಿಂದ ಮೈಸೂರು ರಸ್ತೆ ಬಿಹೆಚ್‌ಇಎಲ್ ವರೆಗೂ ಹಾಕಲಾಗಿದ್ದು ಸಾವಿರ ಕೋಟಿ ರೂಪಾಯಿ ಆಸ್ತಿಯನ್ನು ಬಳುವಳಿಯಾಗಿ ಕೊಟ್ಟಿದ್ದೇವೆ.
ಇಡೀ ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಿಂದ ಏಕಕಾಲದಲ್ಲಿ ೪೦೦ ಕೋಟಿ ತಂದಿರುವ ಉದಾಹರಣೆ ಇದ್ದರೆ ಅದು ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಿಂದ ಮಾತ್ರ.
ಮನೆಗಳು ಮಾರಾಟವಾಗಬಾರದು ಎಂಬ ಏಕೈಕ ಕಾರಣಕ್ಕೆ ಹಕ್ಕುಪತ್ರಗಳನ್ನು ಹೆಣ್ಣುಮಕ್ಕಳ ಹೆಸರಿಗೆ ಮಾಡಿದ್ದೇವೆ, ದಯಮಾಡಿ ಹಕ್ಕುಪತ್ರಗಳನ್ನು ಮಾರಾಟ ಮಾಡಬೇಡಿ ಎಂದು ಮನವಿ ಮಾಡಿದರು.

ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದ ಸಿಎಂ ಯೋಗಿ ಆದಿನ್ಯಾಥ್ ಅವ್ರು ನಮ್ಮ ಪರಿಕಲ್ಪನೆಯಂತೆಯೇ ೫ ಲಕ್ಷ ಮನೆಗಳನ್ನು ಲಖನೌ, ಕಾಶಿಯಲ್ಲೂ ಮನೆ ನಿರ್ಮಾಣದ ಕಟ್ಟುವ ಯೋಜನೆಯನ್ನು ಆರಂಭಿಸಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು, ಕೇರಳದಲ್ಲೂ ಸಹ ಇಂತಹ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇಡೀ ರಾಜ್ಯದಲ್ಲಿ ೪.೫ ಲಕ್ಷಕ್ಕೂ ಮೇಲ್ಪಟ್ಟು ಕುಟುಂಬಗಳಿಗೆ ಮನೆಗಳನ್ನು ಕೊಡುತ್ತಿದ್ದೇವೆ.
ಗದಗದಲ್ಲಿ ೩ ಸಾವಿರ ಮನೆ ಒಂದೆ ಭಾಗದಲ್ಲಿವೆ. ಬೆಂಗಳೂರಿನಲ್ಲಿ ೫೧,೮೦೦ ಮನೆಗಳನ್ನು ರಾಜೀವ್ ಗಾಂಧಿ ಇಲಾಖೆಯಿಂದ ನಿರ್ಮಾಣ ಮಾಡಲಾಗುತ್ತಿದೆ.
ಮಾನವೀಯತೆ ಎಂಬುದು ಇದ್ದವರಿಗೆ ಬಡವರ ಸಂಕಷ್ಟಗಳು ಅರ್ಥವಾಗುತ್ತವೆ. ಅವರ ನೋವು ಎಂತಹದ್ದು ಎಂಬುದರ ಅರಿವಾಗುತ್ತದೆ.
ಆತ್ಮೀಯತೆ, ನಂಬಿಕೆ, ಕೃತಜ್ಞತೆ ಎಂಬುದು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಅಚಲವಾಗಿದೆ. ನನ್ನ ಕಾರ್ಯವೈಖರಿಯ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.
ಇದೇ ವೇಳೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಣ್ವ ಆಸ್ಪತ್ರೆ ಸಂಸ್ಥಾಪಕರಾದ ಡಾ. ವೆಂಕಟಪ್ಪ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತರಾದ ಶ್ರೀ ವೆಂಕಟೇಶ್, ನಿರ್ದೇಶಕರಾದ ಕ್ರಾಂತಿರಾಜು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.