Bangalore : ಉಸಿರುಗಟ್ಟಿಸಿ ವೃದ್ಧೆಯ ಕೊಲೆ
ಬೆಂಗಳೂರು : ಉಸಿರುಗಟ್ಟಿಸಿ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದ ಅಂಬಾ ಭವಾನಿ ದೇವಸ್ಥಾನದ ಬಳಿ ನಡೆದಿದೆ.
60 ವರ್ಷದ ಪ್ರಸನ್ನ ಕುಮಾರಿ ಕೊಲೆಯಾದ ವೃದ್ಧೆಯಾಗಿದ್ದಾರೆ.
ನಿನ್ನೆ ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಆರೋಪಿಗಳು ಕೊಲೆ ಮಾಡಿ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ವಿದ್ಯಾರಣ್ಯಪುರ ಪೊಲೀಸರಿಂದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಕೊಲೆಯಾದ ಪ್ರಸನ್ನ ಕುಮಾರಿ ಶಿಕ್ಷಕಿಯಾಗಿದ್ದರು. ವಿಜಯವಾಡ ಮೂಲದ ಪ್ರಸನ್ನ ಕುಮಾರಿ.
ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಇತ್ತೀಚಿಗೆ ನಿವೃತ್ತಿಯಾಗಿದ್ದರು.
ಒಂಟಿಯಾಗಿ ಜೀವನವನ್ನ ಸಾಗಿಸ್ತಿದ್ದರು.
ನಿನ್ನೆ ಸಂಜೆಯ ಸಮಯದಲ್ಲಿ ಆಗಂತುಕರು ಮನೆಗೆ ಬಂದು ಕೊಲೆಗೈದಿದ್ದಾರೆ.
ಇಬ್ಬರು ಆಗಂತುಕರು ಬಂದು ಕೃತ್ಯ ಎಸಗಿರೋ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸದ್ಯ ಸಿಸಿ ಟಿವಿ ಆಧರಿಸಿ ಆರೋಪಿಗಳ ಪತ್ತೆಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ.