Bangalore | ರಾತ್ರೋರಾತ್ರಿ ಪಬ್ ಗಳ ಮೇಲೆ ದಾಳಿ
ಬೆಂಗಳೂರು : ಅತಿಯಾದ ಡಿಜೆ ಸೌಂಡ್ ಹಾಕಿ ಮೋಜು ಮಸ್ತಿ ಮಾಡುತ್ತಿದ್ದ ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ಮಧ್ಯರಾತ್ರಿ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿನ ಬೋ ಟೈ, ಇಕಿಗೈ ಮತ್ತು ಸ್ಕೈ ಬಾರ್ ಸೇರಿದಂತೆ ಹಲವು ಪಬ್ ಗಳ ಮೇಲೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಕೇಂದ್ರ ವಿಭಾಗದ ಪೊಲೀಸರ ತಂಡ ದಾಳಿ ನಡೆಸಿ ಕೇಸ್ ದಾಖಲಿಸಿಕೊಂಡಿದೆ.

ಈ ದಾಳಿ ವೇಳೆ ಅಪ್ರಾಪ್ತರಿಗೆ ಪಬ್ ಗೆ ಅವಕಾಶ ನೀಡಿದ್ದು ಮಾತ್ರವಲ್ಲದೇ ಮದ್ಯ ಸೇವನೆಗೆ ಅವಕಾಶ ನೀಡಿದ್ದು ಬೆಳಕಿಗೆ ಬಂದಿದೆ.
ನಿಯಮ ಉಲ್ಲಂಘಿಸಿದ ಪಬ್ ಗಳ ಮೇಲೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.