ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆಯ ವಿರುದ್ಧ ಸಿಸಿಬಿ ಪೊಲೀಸರು ಸಮರ ಸಾರಿರುವ ಬೆನ್ನಲ್ಲೇ, ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಪೊಲೀಸರು ಭರ್ಜರಿ ಭೇಟೆಯಾಗಡಿದ್ದಾರೆ.
8 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 28 ಡ್ರಗ್ಸ್ ಪೆಡ್ಲರ್‍ಗಳನ್ನು ಹೆಡೆಮುರಿ ಕಟ್ಟಿದ ಪೊಲೀಸರು, 1.57 ಕೋಟಿ ಮೌಲ್ಯದ ವಿವಿಧ ಬಗೆಯ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಪೂರ್ವ ವಿಭಾಗದ ಪೊಲೀಸರು 11 ಆರೋಪಿಗಳನ್ನು ಬಂಧಿಸಿ 90 ಲಕ್ಷ ಮಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಆಗ್ನೇಯ ವಿಭಾಗದ ಪೊಲೀಸರು 17 ಆರೋಪಿಗಳನ್ನು ಬಂಧಿಸಿ 67 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಜಪ್ತಿಯಾದ ಒಟ್ಟು ಮಾದಕ ವಸ್ತುಗಳ ತೂಕ ಬರೋಬ್ಬರಿ 250 ಕೆ.ಜಿಯಷ್ಟಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಇದರಲ್ಲಿ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲ ಇಬ್ಬರು ಹೈಟೆಕ್ ಡ್ರಗ್ಸ್ ಪೆಡ್ಲರ್‍ಗಳನ್ನು ಬಂಧಿಸಿ ಎಂಡಿಎಂಎ ಟ್ಯಾಬ್ಲೆಟ್, ಕ್ರಿಸ್ಟೆಲ್, ಬ್ರೌನ್ ಶುಗರ್, ವಿಡ್ ಆಯಿಲನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಬಾಣಸವಾಡಿ, ರಾಮಮೂರ್ತಿನಗರ, ಡಿ.ಜೆ ಹಳ್ಳಿ ಠಾಣಾ ವ್ಯಾಪ್ತಿಗಳಲ್ಲಿ ಗಾಂಜಾ ಮಾರಾಟಗಾರರನ್ನು ಬಂಧಿಸಿ 48 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಬಂಧಿತ ಆರೋಪಿಗಳ ಪೈಕಿ ಕೆಲವರು ತಾವೇ ಮಾದಕ ವ್ಯಸನಿಗಳಾಗಿದ್ದು, ಸುಲಭವಾಗಿ ಹಣ ಸಂಪಾದಿಸಲು ಡ್ರಗ್ ಪೆಡ್ಲರ್‍ಗಳಾಗಿ ಬದಲಾಗಿದ್ದಾರೆ. ಶಾಲಾ-ಕಾಲೇಜುಗಳ ಬಳಿ ವಿದ್ಯಾರ್ಥಿಗಳಿಗೆ, ಯುವ ಸಮುದಾಯಕ್ಕೆ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗ್ನೇಯ ವಿಭಾಗ ಹಾಗೂ ಪೂರ್ವ ವಿಭಾಗದ ಪೊಲೀಸರ ಕಾರ್ಯಾಚರಣೆ ಮೆಚ್ಚುಗೆ ವ್ಯಕ್ತಪಡಿಸಿರುವ ಪೊಲೀಸ್ ಆಯುಕ್ತ ತಲಾ 50 ಸಾವಿರ ಬಹುಮಾನ ಘೋಷಿಸಿದ್ದಾರೆ.
Astrology : ” 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ “
" 27 ಜನ್ಮ ನಕ್ಷತ್ರಗಳ ಗುಣಲಕ್ಷಣ ಅರ್ಥ ಸಹಿತ ಸಂಪೂರ್ಣ ಮಾಹಿತಿಗಳ ವಿವರಣೆ ತಿಳಿಯಿರಿ " ಭಾಗ 3 19. ಮೂಲಾ ನಕ್ಷತ್ರ ಚಿಹ್ನೆ- ಕಟ್ಟಿರುವ ಬೇರುಗಳ...