Bangalore | ಸಾಯ್ತೀನಿ ಅಂತ ಕೆರೆಯಲ್ಲಿ ಕುಳಿತ ಮಹಿಳೆ!

1 min read
bangalore-quarrels between husband and wife wife threatens to kill herself saaksha tv

bangalore-quarrels between husband and wife wife threatens to kill herself saaksha tv

Bangalore | ಸಾಯ್ತೀನಿ ಅಂತ ಕೆರೆಯಲ್ಲಿ ಕುಳಿತ ಮಹಿಳೆ!

ಗಂಡನ ಜೊತೆ ಜಗಳ ‘ಸಾಯ್ತೀನಿ ಸಾಯ್ತೀನಿ’ ಅಂದ ಪತ್ನಿ

ಕೊರಮಂಗಲದ ಕೆರೆಯಲ್ಲಿ ಹೋಗಿ ಕುಳಿತ ಮಹಿಳೆ|

ಬೆಳ್ಳಂ ಬೆಳಗ್ಗೆ ಕೆರೆ ಮಧ್ಯೆ ನೀರಲ್ಲಿ ಕೂತ ಮಹಿಳೆ

ಮಹಿಳೆಯ ಮನವೊಲಿಸಿ ಕರೆತಂದ ಪೊಲೀಸರು

 ಮಹಾಭಾರತದಲ್ಲಿ ಜೀವಭಯದಿಂದ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಹೋಗಿ ಅವಿತುಕೊಳ್ಳುತ್ತಾನೆ ಈ ಪೌರಾಣಿಕ ಕಥೆ ನಮಗೆಲ್ಲಾ ಗೊತ್ತಿದೆ.

ಅದೇ ಇಲ್ಲಿ ಒಬ್ಬ ಮಹಿಳೆ ತನ್ನ ಗಂಡನ ಜೊತೆ ಜಗಳವಾಡಿ ಸಾಯ್ತೀನಿ ಅಂತಾ ಕರೆಯಲ್ಲಿ ಕುಳಿತ್ತಿದ್ದಾರೆ.

ಬೆಂಗಳೂರಿನ ಕೊರಮಂಗಲದ ಮೇಡರಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮೇಡರಪಾಳ್ಯದ ಗಂಡ ಹೆಂಡತಿ ಇಂದು ಬೆಳಿಗ್ಗೆ ವಾಕಿಂಗ್ ಗೆ ಹೋಗಿದ್ದಾರೆ.

ಈ ವೇಳೆ ಇಬ್ಬರ ಮಧ್ಯೆ ಜಗಳವಾಗಿದೆ.

bangalore-quarrels between husband and wife wife threatens to kill herself saaksha tv
bangalore-quarrels between husband and wife wife threatens to kill herself saaksha tv

ಇದರಿಂದ ಮುನಿಸಿಕೊಂಡ ಹೆಂಡತಿ ಸಾಯ್ತೀನಿ ಅಂತಾ ಸೀದ ಹೋಗಿ ಕೋರಮಂಗಲ ಕೆರೆಯ ಮಧ್ಯ ಭಾಗದಲ್ಲಿ ಕುಳಿತುಕೊಂಡಿದ್ದಾರೆ.

ಬೆಳಿಗ್ಗೆ ಏಳು ಗಂಟೆಗೆ ನೀರಿನಲ್ಲಿ ಕುಳಿತ ಮಹಿಳೆ 9 ಗಂಟೆಯವರೆಗೂ ಅಲ್ಲೇ ಇದ್ದರು.

ಇದನ್ನ ಗಮನಿಸಿದ ಸ್ಥಳೀಯರು, ಆಕೆಯ ಕಷ್ಟವನ್ನ ಕೇಳಿದ್ದಾರೆ. ಅಲ್ಲದೇ ಬುದ್ಧಿ ಮಾತುಗಳನ್ನು ಕೂಡ ಹೇಳಿದ್ದಾರೆ.

ಆದ್ರೆ ಆಕೆ ಮಾತ್ರ ಜಪ್ಪಯ್ಯಾ ಅಂದ್ರೂ ಕೆರೆಯಿಂದ ಮೇಲೆ ಬರಲಿಲ್ಲ. ಅಂತಿಮವಾಗಿ ಕೋರಮಂಗಲ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಆಗ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮನವೊಲಿಸಿದ್ದಾರೆ.

ಕೊನೆಗೆ ಬರೋಬ್ಬರಿ ಎರಡು ಗಂಟೆಗಳ ಬಳಿಕ ಆ ಮಹಿಳೆ ಕೆರೆಯಿಂದ ಎದ್ದು ದಡಕ್ಕೆ ಬಂದಿದ್ದಾರೆ.  

bangalore-quarrels between husband and wife wife threatens to kill herself

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd