Bangalore | ಎಲ್ಲಿಗೆ ಬಂತು ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ?
ನಮ್ಮ ದೇಶದಲ್ಲಿ ಭ್ರಷ್ಟಾಚಾರ ಸರ್ವೇ ಸಾಮಾನ್ಯ . ಇಲ್ಲಿ ಎಲ್ಲದಕ್ಕೂ ದುಡ್ಡೇ ದೊಡ್ಡಪ್ಪ.
ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಅನೇಕ ಕಡೆ ಮನೆ, ಆಫೀಸ್ ಗಳಿಗೆ ನೀರು ನುಗ್ಗಿ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ವಿಶ್ವದ ಎದುರು ಬ್ರ್ಯಾಂಡ್ ಬೆಂಗಳೂರು ಮಾನ ಹರಾಜಾಗಿತ್ತು.
ಈ ನಡುವೆ ಉತ್ತರ ಕುಮಾರರಂತೆ ನಮ್ಮ ಸಚಿವರು “ಇನ್ನೇನು ಹೊಸ ರಾಜಕಾಲುವೆ ನಿರ್ಮಾಣ ಆಗುತ್ತೆ.
ಅಕ್ರಮವಾಗಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿದ ಮನೆಗಳನ್ನು ಬಡವ ಬಲ್ಲಿದ ಅಂತ ನೋಡದೆ ಕಾನೂನು ರೀತಿ ತೆರವು ಮಾಡಲಾಗುದು ಎಂದಿದ್ದರು. ಇದನ್ನ ಕೇಳಿದಾಗಲೇ ಮನಸ್ಸು ತಂಪಾಗಿತ್ತು.
ಮೊದಲ ದಿನ ರಾಜಾರೋಷವಾಗಿ ಬಡವರ ಮನೆಯ ಮೇಲೆ ಮುಲಾಜಿಲ್ಲದೆ ರಾಜಕಾಲುವೆಯ ಅತಿಕ್ರಮ ಜಾಗವನ್ನು ತೆರವು ಮಾಡಲಾಯಿತು.
ಆದರೆ ದಿನ ಕಳೆದಂತೆ ಈ ತೆರವು ಕಾರ್ಯಾಚರಣೆ ಆಮೆ ರೀತಿಯಲ್ಲಿ ಸಾಗಿ ಸಿರಿವಂತ ಮತ್ತು ಪ್ರಭಾವಿ ವ್ಯಕ್ತಿಗಳ ಅತಿಕ್ರಮ ಜಾಗವನ್ನು ಕಾಟಾಚಾರಕ್ಕೆ ಮಾಡಲಾಗುತ್ತಿದ್ದು ಕೋರ್ಟ್ ಮೂಲಕ ಸ್ಟೇ ತರಲು ಅನುಕೂಲ ಮಾಡಲಾಗುತ್ತಿದೆ ಅಂತ ಮೇಲ್ನೋಟಕ್ಕೆ ಕಾಣುತ್ತಿದೆ.
ನಿಜವಾಗಿಯೂ ನಮ್ಮ ಬಿ ಬಿ ಎಂ ಪಿ ಗೆ ರಾಜಕಾಲುವೆ ಒತ್ತುವರಿ ತೆರವಿಗೆ ಮನಸಿದ್ದರೆ ಒಂದೇ ದಿನ ಕೋರ್ಟ್ ಮೂಲಕ ಕಾನೂನು ರೀತಿ ನೋಟೀಸ್ ಜಾರಿ ಮಾಡಿ ಅತಿಕ್ರಮ ಜಾಗವನ್ನು ರಾಜಕಾಲುವೆ ನಿರ್ಮಾಣಕ್ಕೆ ತೆರವು ಮಾಡಲಿ ಸಾಧ್ಯವಿಲ್ಲವೇ..?
ಹೋಗ್ಲಿ ಬಿಡಿ ನಿಮ್ಮ ಆರ್ಭಟ ಬರಿ ಬಡವ ಮೇಲೆ ಮಾತ್ರ ಸಾಧ್ಯ ಅಂತ ಗೊತ್ತಿದೆ. ಆದರೂ ಈ ರಾಜ ಕಾಲುವೆ ಅತಿಕ್ರಮಣಕ್ಕೆ ಸಹಕಾರ ನೀಡಿದ ನಿಮ್ಮ ಅಧಿಕಾರಿಗಳನ್ನು ಸೆಲೆಕ್ಟ್ ಮಾಡಿ ಅವರ ಅಸ್ತಿ ಮುಟ್ಟುಗೋಲಿಗೆ ಯಾಕೆ ಕ್ರಮ ಕೈಗೊಳ್ಳಬಾರದು ?
ಅತಿಕ್ರಮವಾಗಿ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಾಣಕ್ಕೆ ಬಿ ಬಿ ಎಂ ಪಿ ಅಧಿಕಾರಿಗಳು ಮೂಲ ಕಾರಣಿಗಳರಲ್ಲವೆ ?