Bangalore | ಬೆಂಗಳೂರು ವಿವಿಯ ಭೂಮಿಯನ್ನು ಕಬಳಿಸುವವರಿಗೆ ಸರ್ಕಾರವೇ ರಕ್ಷಣೆ
ಬೆಂಗಳೂರು : ಬೆಂಗಳೂರು ವಿವಿಯ ಭೂಮಿಯನ್ನು ಕಬಳಿಸುವವರಿಗೆ ಸರ್ಕಾರವೇ ರಕ್ಷಣೆ ನೀಡುತ್ತಿರುವುದು ದುರಂತ ಎಂದು ರಾಜ್ಯ ಕಾಂಗ್ರೆಸ್ ಘಟಕ ಕುಟುಕಿದೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಅಪರಿಚಿತರ ಗುಂಪಿನಿಂದ ವಿವಿಯ ಭೂಮಿ ಕಬಳಿಕೆ ಯತ್ನ ನಡೆದಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಬೆಂಗಳೂರು ವಿವಿಯ ಭೂಮಿಯನ್ನು ಕಬಳಿಸುವವರಿಗೆ ಸರ್ಕಾರವೇ ರಕ್ಷಣೆ ನೀಡುತ್ತಿರುವುದು ದುರಂತ.
ಸಚಿವ ಡಾ. ಅಶ್ವಥ್ ನಾರಾಯಣ್ ಅವರೇ, ವಿವಿ ಜಾಗ ಉಳಿಸಲು ಕ್ರಮ ಕೈಗೊಳ್ಳದಿರುವುದೇಕೆ? ಒತ್ತುವರಿದಾರರಿಗೆ ನಿಮ್ಮ ಬೆಂಬಲವಿದೆಯೇ? ಒತ್ತುವರಿಗಳನ್ನು ತೆರವುಗೊಳಿಸಿ ಬೆಲೆ ಬಾಳುವ ವಿವಿ ಭೂಮಿಯನ್ನು ಉಳಿಸಲು ಸರ್ಕಾರ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದೆ.
ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ 'ಜನಸ್ಪಂದನ'ಎಂದು ಹೆಸರು ಬದಲಿಸಿದೆಯಂತೆ!
ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ?ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು "ಜನಸ್ಪಂದನೆ" ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ @BJP4Karnataka?
— Karnataka Congress (@INCKarnataka) September 8, 2022
ಇನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳೆಲ್ಲವನ್ನೂ ಈಡೇರಿಸಿದ್ದರೆ ಸ್ವರ್ಗಲೋಕದ ಇಂದ್ರನೂ ನಾಚಿಕೊಂಡು ಪೀಠ ತ್ಯಜಿಸುತ್ತಿದ್ದ!!
ಈಡೇರಿಸದಿದ್ದಕ್ಕೆ ಈಗ ಬಿಜೆಪಿಯವರು ಪೀಠ ತ್ಯಜಿಸುವರೇ? ಪ್ರತಿ ವಾರ್ಡಿಗೂ ವಾಯು ತಪಾಸಣೆ ಕೇಂದ್ರ ಸ್ಥಾಪಿಸುತ್ತೇವೆ ಎಂದಿದ್ದು ಗಾಳಿಮಾತಿನಂತೆಯೇ ಮರೆಯಾಗಿದ್ದೇಕೆ ಬಿಜೆಪಿ ?
ಇನ್ನು ಜನಸ್ಪಂದನ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡಿ, ಜನಬೆಂಬಲ ಇಲ್ಲ ಎಂದು ಅರಿತುಕೊಂಡ ಬಿಜೆಪಿ ಈಗ ‘ಜನಸ್ಪಂದನ’ಎಂದು ಹೆಸರು ಬದಲಿಸಿದೆಯಂತೆ!
ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ? ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೆ ಇನ್ನೆಲ್ಲೋ ಬಸ್ಸು ಲಾರಿಗಳಲ್ಲಿ ಜನರನ್ನು ಕರೆತಂದು “ಜನಸ್ಪಂದನೆ” ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದೆಯೇ ಬಿಜೆಪಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
Bangalore The government is protecting those who are grabbing the land of Bangalore University