SA vs IND | ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ..!?
1 min read
Bangalore will-rain-play-spoilsport-5th-t20i saaksha tv
SA vs IND | ಬೆಂಗಳೂರಿನ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ..!?
ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಗೆಲುವೊಂದೆ ಧ್ಯೇಯದೊಂದಿಗೆ ಕಣಕ್ಕಿಳಿಯಲಿವೆ.
ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಉಭಯ ತಂಡಗಳು ಸದ್ಯ 2-2ರಲ್ಲಿ ಸಮಬಲ ಸಾಧಿಸಿವೆ.
ಹೀಗಾಗಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ಆದರೆ, ಈ ಅಂತಿಮ ಕದನಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ಇದೆ.

ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಈ ಮಧ್ಯೆ ಹಲವು ರಣಜಿ ಪಂದ್ಯಗಳಿಗೂ ಮಳೆ ಅಡ್ಡಿಪಡಿಸಿತು.
ಅಕ್ವಿಡೆಕ್ಟ್ ಪ್ರಕಾರ, ಭಾನುವಾರ ಸಂಜೆ ಗುಡುಗು ಮತ್ತು ಮಿಂಚು ಬರುವ ಸಾಧ್ಯತೆಯಿದೆ.
ಸದ್ಯ ಬೆಂಗಳೂರಿನಲ್ಲಿ 28 ಡಿಗ್ರಿ ತಾಪಮಾನ ದಾಖಲಾಗಿದೆ.
ಗಾಳಿಯಲ್ಲಿ ಆರ್ದ್ರತೆ 84 ಪ್ರತಿಶತ ದಾಖಲಾಗಿದೆ.
ಅಂತೆಯೇ, ಪಂದ್ಯದ ಸಮಯದಲ್ಲಿ ತೇವಾಂಶವು 92% ಮತ್ತು 93% ರ ನಡುವೆ ಇರುವ ಸಾಧ್ಯತೆಯಿದೆ.