ಡೆಲ್ಟಾಪ್ಲಸ್ ಭೀತಿ : ಇಂದಿನಿಂದ ಬಾಂಗ್ಲಾದೇಶದಲ್ಲಿ ಲಾಕ್ ಡೌನ್ ಜಾರಿ
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ..
ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಈ ಕೊರೊನಾ ಹಾವಳಿ ನಡುವೆ ಇಡೀ ವಿಶ್ವದಲ್ಲಿ ಬ್ಲಾಕ್ ಫಂಗಸ್ ಕಾಟ ಶುರುವಾಗಿತ್ತು.. ಅಲ್ಲದೇ ಡೆಲ್ಟಾ ಆತಂಕವೂ ಎದುರಾಗಿದೆ.. ಈಗಾಗಲೇ ಡೆಲ್ಟಾ ಪ್ಲಸ್ ಮಾದರಿಯ ರೂಪಾಂತರಿ ಕೋವಿಡ್ ಅನೇಕ ಜೀವಗಳ ಬಲಿಪಡೆದುಕೊಂಡಿದೆ.. ಭಾರತ ಹಾಗೂ ಕರ್ನಾಟಕದಲ್ಲೂ ಇದು ಕಾಣಿಸಿಕೊಂಡಿದೆ.. ಆದ್ರೆ ಈಗಾಗಲೇ ಸಂಪೂರ್ಣವಾಗಿ ಕೊರೊನಾ ನಿಯಂತ್ರಣಕ್ಕೆ ಬಮದಿದ್ದ ದೇಶಗಳಲ್ಲಿಯೂ ಇದೀಗ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಅನೇಕ ದೇಶಗಳಲ್ಲಿ ಮತ್ತೆ ಲಾಕ್ ಡೌನ್ ವಿಧಿಸಲಾಗ್ತಿದೆ..
ಇದೀಗ ಇಂದಿನಿಂದ ಬಾಂಗ್ಲಾದೇಶದಲ್ಲಿ ಲಾಕ್‍ಡೌನ್ ಜಾರಿಯಾಗಿದೆ. ದೇಶಾದ್ಯಂತ ಕೊರೊನಾ ನಿಯಂತ್ರಣ ಮಾಡಲು ಒಂದು ವಾರ ಲಾಕ್‍ಡೌನ್ ಮಾಡಲು ಸರ್ಕಾರ ಮುಂದಾಗಿದೆ. ಶುಕ್ರವಾರ 5,869 ಸೋಂಕು ಮತ್ತು 108 ಸಾವಿನ ಪ್ರಕರಣ ವರದಿಯಾದ ಬೆನ್ನಲ್ಲೇ ಲಾಕ್‍ಡೌನ್ ನಿರ್ಧಾರಕ್ಕೆ ಬರಲಾಗಿದೆ. 85 ದೇಶಗಳಲ್ಲಿ ಪತ್ತೆಯಾಗಿರುವ ಡೆಲ್ಟಾಪ್ಲಸ್ ಅತ್ಯಂತ ಅತಿ ವೇಗವಾಗಿ ಹರಡುವ ರೂಪಾಂತರಿ ವೈರಸ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಹೇಳಿದೆ.
BIGGBOSS 8 : ಕಿಚ್ಚನ ಎದುರಲ್ಲೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ ಚಕ್ರವರ್ತಿ
ಸ್ನೇಹಿತರ ಜೊತೆ ಸೇರಿ ಪ್ರೇಯಸಿ ಮೇಲೆ ಸಾಮೂಹಿಕ ಅತ್ಯಾಚಾರ..!
ಮ್ಯಾನ್ಮಾರ್ ಸಂಘರ್ಷ : ಮಿಜೋರಾಂಗೆ ನುಸುಳಿದ 10,025 ಮ್ಯಾನ್ಮಾರ್ ಪ್ರಜೆಗಳು, ಒಂದೇ ವಾರದಲ್ಲಿ 700 ಮಂದಿ ಆಗಮನ
“ಮೊದಲು ಲಸಿಕೆ, ಆಮೇಲೆ ‘ಮನ್ ಕೀ ಬಾತ್” – ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ