ಮ್ಯಾನ್ಮಾರ್ ಸಂಘರ್ಷ : ಮಿಜೋರಾಂಗೆ ನುಸುಳಿದ 10,025 ಮ್ಯಾನ್ಮಾರ್ ಪ್ರಜೆಗಳು, ಒಂದೇ ವಾರದಲ್ಲಿ 700 ಮಂದಿ ಆಗಮನ
ಮ್ಯಾನ್ಮಾರ್…. ಸದ್ಯಕ್ಕೆ ಮ್ಯಾನ್ಮಾರ್ ಅನ್ನೋ ಹೆಸರು ಕೇಳಿದ್ರೆ ಮಿಲಿಟರಿ ಸರ್ಕಾರ , ಜನರ ಮೇಲಿನ ದೌರ್ಜನ್ಯ , ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಅವೈಜ್ಞಾನಿಕಲವಾಗಿ ರಚನೆಯಾಗಿರುವ ಮಿಲಿಟರಿ ಸರ್ಕಾರದ ವಿರುದ್ಧ ಜನರ ಹೋರಾಟ, ರಸ್ತೆಯಲ್ಲಿ ಹಿಂಸಾತ್ಮಕ ಪ್ರತಿಭಟನೆ, ಸಾವು ನೋವು , ನೆತ್ತರೂ , ಆತಂಕದ ವಾತಾವರಣ ಬರೀ ಇದೆ ಕಂಡುಬರುತ್ತಿದೆ..
ಆಂಗ್ ಸಾನ್ ಸೂಕಿ ಸೇರಿದಂತೆ ಅನೇಕ ರಾಜಕೀಯ ನಾಯಕರನ್ನ ಅಲ್ಲಿನ ಮಿಲಿಟರಿ ಸರ್ಕಾರ ಬಂಧಿಸಿದೆ.. ಮಿಲಿಟರಿ , ಸಾಮಾನ್ಯ ಜನರ ನಡುವಿನ ಸಂಘರ್ಷದಲ್ಲಿ ನೂರಾರು ಜನರ ಜೀವ ತೆಗೆದಿದೆ ಅಲ್ಲಿನ ಸೇನೆ…
ಇನ್ನೂ ಅಲ್ಲಿನ ಭೀಕರ ವಾತಾವರಣದಿಂದಾಗಿ ಜನ ದೇಶ ಬಿಟ್ಟು ಹತ್ತಿರ ಥೈಲ್ಯಾಂಡ್ ಹಾಗೂ ಭಾರತಕ್ಕೆ ಓಡಿ ಬಂದಿದ್ದಾರೆ.. ಈ ನಡುವೆ ಕಳೆದ ಕೆಲವು ವಾರಗಳಲ್ಲಿ ಮ್ಯಾನ್ಮಾರ್ ನ 700ಕ್ಕೂ ಹೆಚ್ಚು ನಿರಾಶ್ರಿತರು ಭಾರತದ ಮಿಜೋರಾಂ ತಲುಪಿದ್ದು, ಅವರಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದೆ.
ಆಶ್ರಯ ಪಡೆದವರಲ್ಲಿ ಮ್ಯಾನ್ಮಾರ್ ನಾಗರಿಕರು, ಗರ್ಭಿಣಿಯರು, ಮಕ್ಕಳು ಮತ್ತು ಹಿರಿಯ ನಾಗರಿಕರಿದ್ದಾರೆ. ಮ್ಯಾನ್ಮಾರ್‌ನಲ್ಲಿ ಫೆಬ್ರುವರಿಯಲ್ಲಿ ನಡೆದ ಸೇನಾ ದಂಗೆಯ ಬಳಿಕ ಅಲ್ಲಿನ ಒಟ್ಟು 10,025 ಪ್ರಜೆಗಳು ಮಿಜೋರಾಂಗೆ ನುಸುಳಿದ್ದಾರೆ. ರಾಜ್ಯದಲ್ಲಿ ಆಶ್ರಯ ಪಡೆದವರ ಪೈಕಿ ಕನಿಷ್ಠ 22 ಮಂದಿ ಮ್ಯಾನ್ಮಾರ್ ಸಂಸತ್ ಸದಸ್ಯರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ..
ಅಲ್ಲದೇ ಮ್ಯಾನ್ಮಾರ್‌ನ ಚಿನ್ ರಾಜ್ಯದ ಮುಖ್ಯಮಂತ್ರಿ ಸಲಾಯ್ ಲಿಯಾನ್ ಲುವಾಯಿ ಜೂನ್ 14ರಂದು ಮಿಜೋರಾಂಗೆ ಬಂದಿದ್ದಾರೆ ಎಂಬ ಮಾಹಿತಿಯೂ ಸಿಕ್ಕಿದೆ. ಅಲ್ಲದೇ ಮಿಜೋರಾಂನ 11 ಜಿಲ್ಲೆಗಳ ಪೈಕಿ 10ರಲ್ಲಿ ಮ್ಯಾನ್ಮಾರ್ ನಿರಾಶ್ರಿತರು ವಾಸಿಸುತ್ತಿದ್ದಾರೆ ಎನ್ನಲಾಗಿದೆ.