ADVERTISEMENT
Saturday, August 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

BIGGBOSS 8 : ಕಿಚ್ಚನ ಎದುರಲ್ಲೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ ಚಕ್ರವರ್ತಿ  

Namratha Rao by Namratha Rao
June 28, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

Related posts

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

August 15, 2026
ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

August 15, 2026

BIGGBOSS 8 : ಕಿಚ್ಚನ ಎದುರಲ್ಲೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ ಚಕ್ರವರ್ತಿ

ಸದಾ ನೇರ ನುಡಿ , ವಿಭಿನ್ನ ವ್ಯಕ್ತಿತ್ವ , ಜೊತೆಗೆ ಬುದ್ಧವಂತಿಕೆ , ಪದಗಳ ಮೇಲಿನ ಹಿಡಿತ, ವಾಕ್ ಚಾತುರ್ಯದಿಂದಾಗಿ ಗುರುತಿಸಿಕೊಂಡಿರುವ ಪತ್ರಕರ್ತ , ಸಾಮಾಜಿಕ ಚಿಂತಕ ಚಂದ್ರಚೂಡ್ ಚಕ್ರವರ್ತಿ  ಅವರು ಇದ್ದದ್ದನ್ನ ಇದ್ದಂತೆಯೇ ನುಡಿಯುತ್ತಾರೆ.. ಕೆಲವರ ಬಳಿ ಇದೇ  ಗುಣದಿಂದ ನಿಷ್ಠೂರವೂ ಆಗಿದ್ದಾರೆ..

ಇದೀಗ ಶೋ ಮತ್ತೆ ಆರಂಭವಾದ ಬಳಿಕ ನಡೆದ ಮೊದಲನೇ ವಾರದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ  ಸುದೀಪ್ ಅವರ ಮುಂದೆಯೇ ಲ್ಯಾಗ್ ಮಂಜು ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ..  ಮೊದಲನೇಯದಾಗಿ ಮಾತು ಆರಂಭಿಸಿದ ಚಕ್ರವರ್ತಿಯವರು, ನನಗೆ ಮೂರು ವಿಷಯ ಕಾಡುತ್ತಿದೆ. ಮಂಜು ಅವರು ಎಲಿಮಿನೇಷನ್ ವೇಳೆ ಹಳೆಯದನ್ನು ಯಾವುದನ್ನೂ ಮಾತನಾಡಬಾರದು ಬೆಂಕಿಯಲ್ಲಿ ಸುಟ್ಟಾಗಿದೆ ಎಂದರು.

ನಂತರ ನನ್ನ ತಂದೆ, ತಾಯಿ ಹಳ್ಳಿಯ ಮುಗ್ಧ ಜನ.. ನನಗೆ ಅವರು ಚಕ್ರವರ್ತಿ ಹಾಗೂ ಪ್ರಶಾಂತ್ ಸಂಬರ್ಗಿ ಕೆಟ್ಟವರು, ಅವರ ಜೊತೆ ಸೇರಬೇಡ ಎಂದು ಹೇಳಿ ಕಳುಹಿಸಿದ್ದಾರೆ ಎಂದು ತಿಳಿಸಿದ್ದರು. ನಾನು ಅವರ ತಂದೆ, ತಾಯಿಗೆ ಗೌರವ ಕೊಡುತ್ತೇನೆ. ಅವರು ನನ್ನ ಜೊತೆ ಸೇರಬೇಡ ಎಂದ ಮೇಲೆ ಮಂಜುರವರು ನನಗೆ ಅಣ್ಣಾ ಎಂದು ಕರೆಯಬಾರದು ಎಂದು ಚಕ್ರವರ್ತಿಯವರು ಕೆಂಡಕಾರಿದ್ದಾರೆ.

ಅಲ್ಲದೇ ನನ್ನ ತಂದೆ ತಾಯಿ ಕೂಡ ನನಗೆ ಒಂದು ಹೇಳಿ ಕಳುಹಿಸಿದ್ದಾರೆ, ಎಲಿಮಿನೇಷನ್ ರೌಂಡ್ ವೇಳೆ ಹೇಳಬೇಕಾಗಿತ್ತು. ಆದರೆ ಈಗ ಟೈಮ್ ಬಂದಿದೆ.  ಕರ್ನಾಟಕದಲ್ಲಿ ಸುಮಾರು 363ಕ್ಕೂ ಹೆಚ್ಚು ಭಾಷೆಯ ಸೊಗಡುಗಳಿದೆ. ಈ ಎಲ್ಲ ಭಾಷೆಯ ಸೊಗಡಿನಲ್ಲಿಯು ನುಗ್ಗೆ ಕಾಯಿಗೂ ಹಾಗೂ ಮಾವಿನ ಹಣ್ಣಿಗೂ ಒಂದು ಸಂಬಂಧವಿದೆ.

ಒಂದು ಹೆಣ್ಣು ಮಗಳಿಗೆ ನಿನ್ನೆ ನುಗ್ಗೆ ಕಾಯಿ ತಿನ್ನಿಸಿದೆ, ಇಂದು ಮಾವಿನ ಹಣ್ಣು ತಿನ್ನಿಸುತ್ತಿದ್ದಾನೆ ಎಂದರೆ ಇದು ಸಿನಿಮಾದಲ್ಲಿ ಬಂದಿರುವುದು ಮಾತ್ರವಲ್ಲ ಒಂದು ಸೈಟಿಫಿಕ್ ರೀಸನ್ ಇದೆ. ಎಲ್ಲ ಪ್ರಾಂತ್ಯಗಳಲ್ಲಿಯೂ ಇದು ಗಂಡ ಹೆಂಡತಿಯರ ನಾಟಕ.

ನಂತರ ಬಾರೇ ಸರಸಕ್ಕೆ ಎಂದು ಸ್ನೇಹಿತರನ್ನು ಕರೆಯುವುದಿಲ್ಲ. ಅಲ್ಲದೇ ನನ್ನನ್ನೇ ಸ್ವಲ್ಪದಿನ ಭಾವನಾಗಿ ಮಾಡಿಕೊಂಡಿದ್ದರು. ನನ್ನ ಜೊತೆ ಕೊಟ್ಟು ತೆಗೆದುಕೊಳ್ಳುವ ವಿಷಯ ಕೂಡ ನಡೆದಿತ್ತು. ಲೇ ಹೆಂಡ್ತಿ ಬಾರೇ ಎಂದು ಮಾತನಾಡಿದ್ದು, ಇದನ್ನು ಜಗತ್ತು ಮಾತನಾಡಿದೆ, ಕರ್ನಾಟಕವೂ ಮಾತನಾಡಿದೆ, ನಾನು ಮಾತನಾಡಿದ್ದೇನೆ.

ಒಂದು ಹೆಣ್ಣನ್ನು ಒಂದು ಶೋ ಗೋಸ್ಕರ ಈ ಮನುಷ್ಯ ಹೇಗೆ ಹೆಂಡತಿಯನ್ನಾಗಿ ಮಾಡಿಕೊಳ್ಳುತ್ತಾನೆ..?, ಅವರರವರ ಇಷ್ಟ ಇರಬಹುದು, ಆದರೆ ನಾವು ಅದರ ಪಾಲುದಾರರಲ್ಲ. ಆದರೆ ನಾನು ಸದಸ್ಯ ಎಂದ ಮೇಲೆ ನಾನು ನನ್ನ ಅಭಿಪ್ರಾಯವನ್ನು ಒಳಗಡೆಯು ಹೇಳಿದ್ದೇನೆ. ಇದು ಕೃತಕವಾಗಿ ಕಾಣಿಸುತ್ತಿದೆ ಅಂತ ಅದನ್ನೇ ಹೊರಗಡೆಯು ಹೇಳಿದ್ದೇನೆ.

ಇದೇ ಮಂಜು ಪಾವಗಡರವರಿಗೆ ನೀನು ಹಳ್ಳಿ ಹಕ್ಕಿ, ಹಳ್ಳಿ ಪ್ರತಿಭೆ ತೆನಾಲಿ ರಾಮ ಆಗಬೇಕು. ಇದನ್ನು ಮಾಡಬೇಡ ಎಂದು ಹೇಳಿದ್ದೇನೆ. ಅಲ್ಲದೇ ನಿನ್ನೆಯಿಂದ ನನಗೆ ನೀನು ಹಾಗೇ ಹೋಗಿ ಬಿಡು ಎಂದು ಪದೇ ಪದೇ ಹೇಳುತ್ತಿದ್ದಾರೆ. ಬಿಗ್‍ಬಾಸ್ ಯಾರಪ್ಪನ ಆಸ್ತಿ. ಬಿಗ್‍ಬಾಸ್‍ನನ್ನು ಯಾರು ಯಾರಿಗೂ ಬರೆದುಕೊಟ್ಟಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ನನ್ನ ತಂದೆ ತಾಯಿ ನನಗೆ ಸರಸಕ್ಕೆ ಕರೆಯುವುದನ್ನು ಕಲಿಸಿಲ್ಲ. ಮಾವಿನ ಹಣ್ಣಿನ ಜೋಕ್‍ ಗಳ ತರಹ, ಪತ್ತರವಳ್ಳಿ ಎಂಬ ಪದ ಇದೆ. ಪತ್ತರವಳ್ಳಿ ಎಂದರೆ ಕರ್ನಾಟಕದ ಡಿಕ್ಷನರಿಯಲ್ಲಿ ಆರು ಉಪಭಾಷೆಗಳಲ್ಲಿ ಬರುತ್ತದೆ.

ಅದರ ಅರ್ಥ ಬೇಲಿ ಸಂದಿಯಲ್ಲಿ ನಡೆಯುವ ಕಾಮ. ಅದು ನಾನು ಹುಟ್ಟಾಕಿರುವುದಲ್ಲ, ಅವರು ಮನೆಯಲ್ಲಿ ಕರೆಯುತ್ತಿರುವ ಪದ.  ಹೊರಗಡೆ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಇಲ್ಲೂ ಹಾಗೆಯೇ ಇರಬೇಕಾಗಿತ್ತು, ಈಗ ಸರಿಪಡಿಸಿಕೊಳ್ಳುತ್ತಿದ್ದಾರೆ ಅದನ್ನು ಮೆಚ್ಚುತ್ತೇನೆ.

ಒಂದು ಹಳ್ಳಿಯ ಹುಡುಗ ಹೇಗೆ ಹೀಗೆ ನಡೆದುಕೊಳ್ಳಲು ಸಾಧ್ಯ. ಯಾರ ಕಥೆಗಳನ್ನು ಕೇಳುವುದಿಲ್ಲ, ಯಾರ ಪ್ರತಿಭೆಗಳನ್ನು ಕೇಳುವುದಿಲ್ಲ, ಯಾರ ಮಾತನ್ನು ಕೇಳುವುದಿಲ್ಲ. ತನ್ನದೇ ತೃತೀಯ ದರ್ಜೆಗಳ ಜೋಕ್‍ ಗಳನ್ನು ನಾವು ಕೇಳಬೇಕು ಎಂದು ಹರಿಹಾಯ್ದಿದ್ದಾರೆ.

ನನಗೆ ಈ ಮನೆಯಲ್ಲಿ ಮುದ್ದಾದ ಪ್ರೀತಿಯ ಜೋಡಿ ಕಂಡಿದೆ. ಒಂದು ಮುದ್ದಾದ ಸ್ನೇಹದ ಜೋಡಿ ಕಂಡಿದೆ, ಒಂದಷ್ಟು ವಿಶ್ವಾಸಗಳು ಕಂಡಿದೆ, ತಂಗಿ ಕಂಡಿದೆ. ನಾನು ಅದನ್ನು ಗೌರವಿಸುತ್ತೇನೆ. ಆದರೆ ಆಟದ ಕಾರಣಕ್ಕೆ ನನ್ನ ಮಾನವೀಯತೆಯನ್ನು ನನ್ನ ಓದನ್ನು ನನ್ನ ಜ್ಞಾನವನ್ನು ಕಳೆದುಕೊಳ್ಳಲು ತಯಾರಿಲ್ಲ. ಅವರ ತಂದೆ, ತಾಯಿ ಹೇಳಿ ಕಳುಹಿಸಿದ್ದಾರೆ ಅಲ್ವಾ ಸರ್ ನಾನು ಎಷ್ಟು ಸಂಗಡ ಈ ಮನೆಯಲ್ಲಿ ಇರುತ್ತೇನೋ ಅಷ್ಟು ಹೊತ್ತು ನನ್ನ ಸಂಗಡ ಮಾಡಬಾರದು ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಗೌರವವಾರ್ಥವಾಗಿ ಹೇಳುತ್ತಿದ್ದೇನೆ ಬಿಗ್‍ಬಾಸ್ ಮನೆ ಯಾರಿಗೂ ಸೇರಿದ್ದಲ್ಲ. ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್‍ ಈ ಮನೆಯ ಸದಸ್ಯರು, ಈ ಮನೆಯಲ್ಲಿ ಯಾವುದೇ ಕೃತಕತೆ ನಡೆದರೂ ನನ್ನ ಯುದ್ಧ ಆರಂಭ. ಅದು ಒಂದು ಕ್ಷಣ ಇದ್ದರೂ ಸರಿ ಎಂದು ತೀವ್ರವಾಗಿ ವಾಗ್ದಾಳಿ ನಡೆಸಿ ಮಂಜಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Tags: bbk8biggbosss kannada 8KICCHA SUDEEP
ShareTweetSendShare
Join us on:

Related Posts

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

ನಮಗೆ ಯುದ್ಧ ಬೇಡ ಶಾಂತಿ ಬೇಕು, ಆದರೆ ಇದು ನಮ್ಮ ಬಲಹೀನತೆಯಲ್ಲ: ಸ್ವಾತಂತ್ರ್ಯ ದಿನದಂದು ಭಾರತಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಎಚ್ಚರಿಕೆ

by Shwetha
August 15, 2026
0

ಇಸ್ಲಾಮಾಬಾದ್: ನಮಗೆ ಯುದ್ಧ ಬೇಕಾಗಿಲ್ಲ, ನಾವು ಶಾಂತಿಯನ್ನು ಮಾತ್ರ ಬಯಸುತ್ತೇವೆ. ಆದರೆ, ಶಾಂತಿಗಾಗಿ ನಾವು ಕೈಜೋಡಿಸುತ್ತಿರುವುದನ್ನು ಯಾರೂ ನಮ್ಮ ಬಲಹೀನತೆ ಎಂದು ಭಾವಿಸಬಾರದು ಎಂದು ಪಾಕಿಸ್ತಾನದ ಪ್ರಧಾನಿ...

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

ರಾಹುಲ್ ಗಾಂಧಿಯವರೇ ನೀವು ಯಾವಾಗ ಪ್ರಬುದ್ಧರಾಗುತ್ತೀರಿ- ಮತದಾರರ ತೀರ್ಪನ್ನು ಅಪಹಾಸ್ಯ ಮಾಡಬೇಡಿ: ದೇಶ ಮುನ್ನಡೆಸಲು ಪ್ರಬುದ್ಧತೆ ಬೇಕು, ನಾಟಕವಲ್ಲ ಎಂದ ಜೋಶಿ!

by Shwetha
August 15, 2026
0

ನವದೆಹಲಿ: ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರನ್ನು ಬಂಚ್ ಆಫ್ ಜೋಕರ್ಸ್ ಎಂದು ಜರಿದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್...

‘ಖರ್ಗೆ ಅವರಿಗೆ ಆದ ಅಪಮಾನ ದೇಶಕ್ಕೆ ಆದ ಅಪಮಾನ’: ಡಿಕೆಶಿ ಕಿಡಿ

‘ಖರ್ಗೆ ಅವರಿಗೆ ಆದ ಅಪಮಾನ ದೇಶಕ್ಕೆ ಆದ ಅಪಮಾನ’: ಡಿಕೆಶಿ ಕಿಡಿ

by Shwetha
August 15, 2026
0

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಹಿರಂಗ ಸಭೆ ನಡೆದ ಸ್ಥಳವನ್ನು ಶುದ್ಧೀಕರಣ ಮಾಡಲಾಗಿದೆ ಎನ್ನಲಾದ ಘಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಆಕ್ರೋಶ...

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

ತಮ್ಮ ಗಮನಕ್ಕೇ ತರದೆ ಗುಟ್ಕಾ ನಿಷೇಧ ಆದೇಶ ಹೊರಡಿಸಿದ್ದಕ್ಕೆ ಸಿಎಂ ಗರಂ: ಶೀಘ್ರವೇ ರದ್ದಾಗಲಿದೆ ಗುಟ್ಕಾ ನಿಷೇಧ ಆದೇಶ

by Shwetha
August 15, 2026
0

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಹೊರಡಿಸಲಾಗಿದ್ದ ಗುಟ್ಕಾ ಮಾರಾಟ ನಿಷೇಧ ಆದೇಶವನ್ನು ತಕ್ಷಣವೇ ವಾಪಸ್ ಪಡೆಯುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ...

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್  ಆಕ್ರೋಶ!

ಕಾಂಗ್ರೆಸ್ ಹೇಡಿತನಕ್ಕೆ ದೇಶ ತುಂಡಾಯಿತು, 1947ರಲ್ಲೇ ಮೋದಿ ಪ್ರಧಾನಿಯಾಗಿದ್ದರೆ ಭಾರತ ಸುರಕ್ಷಿತವಾಗಿರುತ್ತಿತ್ತು: ಸಿಎಂ ಯೋಗಿ ಆದಿತ್ಯನಾಥ್ ಆಕ್ರೋಶ!

by Shwetha
August 15, 2026
0

ಲಕ್ನೋ: ಭಾರತದ ವಿಭಜನೆ ಮತ್ತು ಆ ಸಮಯದಲ್ಲಿ ನಡೆದ ಅತ್ಯಂತ ಭೀಕರವಾದ ರಕ್ತಪಾತಕ್ಕೆ ಕಾಂಗ್ರೆಸ್ ಪಕ್ಷದ ಅಧಿಕಾರದ ದಾಹವೇ ನೇರ ಕಾರಣ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram