ಲೈವ್ ನಲ್ಲಿ ಪ್ರಸಾರವಾಗುವಾಗ್ಲೇ ನಟಿ ಮನೆ ಮೇಲೆ ರೇಡ್ ಮಾಡಿ, ಬಂಧಿಸಿ ಕರೆದೊಯ್ದ ಪೊಲೀಸರು..!
ಬಾಂಗ್ಲಾದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ 28 ವರ್ಷದ ನಟಿಯನ್ನ ಪೊಲೀಸರು ಲೈವ್ ನಲ್ಲಿಯೇ ಬಂಧಿಸಿ ಕರೆದೊಯ್ದಿದ್ದಾರೆ… ಹೌದು ನಟಿ ಮನೆ ಮೇಲೆ ರೇಡ್ ಮಾಡಿ ಆಕೆಯನ್ನ ಅರೆಸ್ಟ್ ಮಾಡುವ ಸಂಪೂರ್ಣ ಪ್ರಸಂಗ ಲೈವ್ ನಲ್ಲಿ ಟಿವಿ , ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.. ಹಲವು ಸಿನಿಮಾ, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿರುವ ಬಾಂಗ್ಲಾದೇಶದ ಪ್ರಖ್ಯಾತ ನಟಿ ಪೊರಿ ಮೋನಿ ಅಲಿಯಾಸ್ ಸ್ಮೃತಿ ಶ್ಯಾಮಸುನ್ನಹರ್ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ.. ಇತ್ತೀಚೆಗೆಷ್ಟೇ ಈ ನಟಿ ಕೆಲವರ ವಿರುದ್ಧ ಅತ್ಯಾಚಾರ , ಕಿರುಕುಳದ ಆರೋಪ ಹೊರಿಸಿದ್ದರು… ಇದೀಗ ಅವರ ಬಂಧನ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.. ಇದೀಗ ಈ ನಟಿಯನ್ನು ಬಾಂಗ್ಲಾದೇಶದ ಭಯೋತ್ಪಾದನಾ ವಿರೋಧಿ, ಅಪರಾಧ ತಡೆ ವಿಶೇಷ ದಳ ಆರ್ಎಬಿ (ರ್ಯಾಪಿಡ್ ಆಕ್ಷನ್ ಬೆಟಾಲಿಯನ್) ಬಂಧಿಸಿದೆ.
ಉದ್ಯಮಿಯೊಬ್ಬರು ಸೇರಿ ಕೆಲವರ ವಿರುದ್ಧ ಆರೋಪ ಮಾಡಿದ ಬೆನ್ನಲ್ಲೆ ಪೊರಿ ಮೊನಿ ಬಂಧನವಾಗಿದೆ.. ಕೆಲವು ದಿನಗಳ ಹಿಂದಷ್ಟೆ ಕೆಲವರ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಯತ್ನದ ಆರೋಪ ಮಾಡಿದ್ದರು. ಅದಾದ ಕೆಲವು ದಿನಗಳ ಬಳಿಕ ಈಗ ನಟಿಯನ್ನು ಬಂಧಿಸಲಾಗಿದೆ. ನಟಿಯನ್ನು ಬಂಧಿಸುವ ಮೊದಲು ಇಬ್ಬರು ಮಾಡೆಲ್ ಗಳನ್ನು ಬಂಧಿಸಿದ್ದು ಇವರದ್ದೆಲ್ಲ ಒಂದೇ ಗುಂಪು ಎಂದು ಪೊಲೀಸರು ಹೇಳಿದ್ದಾರೆ. ಆರ್ಎಬಿ ತಂಡವು ಢಾಕಾದ ಹೊರ ವಲಯದಲ್ಲಿರುವ ಪೊರಿ ಮೊನಿಯ ಮನೆಯ ಮೇಲೆ ದಾಳಿ ಮಾಡಲು ಹೋದಾಗ ತನ್ನೊಂದಿಗೆ ಟಿವಿ ಸುದ್ದಿವಾಹಿನಿಯವರನ್ನು ಕರೆದುಕೊಂಡು ಹೋಗಿದೆ. ದಾಳಿಯನ್ನು ಟಿವಿಯಲ್ಲಿ ಲೈವ್ ಆಗಿ ಪ್ರಸಾರವಾಗುವಂತೆ ಮಾಡಿ, ಲೈವ್ನಲ್ಲಿಯೇ ನಟಿಯನ್ನು ಬಂಧಿಸಿ ಎಳೆದೊಯ್ಯಲಾಗಿದೆ.
Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ – 10 ಕೋಟಿ ರೂ. ಪರಿಹಾರ ಕೇಳಿದ ಪತ್ನಿ
ಮಾದಕ ವಸ್ತು, ಮದ್ಯದ ಬಾಟಲಿಗಳು ಪತ್ತೆ ನಟಿಯ ಬಹುಮಹಡಿ ಮನೆಯಲ ತುಂಬೆಲ್ಲ ಮದ್ಯದ ಬಾಟಲಿಗಳು, ಎಲ್ಎಸ್ಡಿ ಮಾದಕ ವಸ್ತು ಇರುವುದಾಗಿ ವಿಡಿಯೋದಲ್ಲಿ ತೋರಿಸಲಾಗಿದೆ. ನಟಿಯ ಮನೆ ಮೇಲೆ ದಾಳಿ ನಡೆಯುತ್ತಿದ್ದಂತೆ ಸಾವಿರಾರು ಮಂದಿ ನಟಿಯ ಮನೆ ಮುಂದೆ ಜಮಾಯಿಸಿದ್ದಾರೆ. ಅವರ ಮುಂದೆಯೇ ನಟಿ ಕೈಯನ್ನು ಹಿಂದೆ ಕಟ್ಟಿ ಜನರೆದುರು ಎಳೆದುತಂದು ಠಾಣೆಗೆ ಕರೆದೊಯ್ಯಲಾಗಿದೆ. ಈ ಎಲ್ಲ ದೃಶ್ಯಗಳನ್ನು ಬಾಂಗ್ಲಾದೇಶದ ಜನರು ಟಿವಿ ಲೈವ್ನಲ್ಲಿ ನೋಡಿದ್ದಾರೆ. ಉದ್ಯಮಿ ನಾಸಿರುದ್ಧೀನ್ ಮೊಹಮ್ಮದ್ ಸೇರಿದಂತೆ ಒಬ್ಬ ಫುಟ್ ಬಾಲ್ ಆಟಗಾರ, ವಿದ್ಯಾರ್ಥಿ ಸಂಘಟನೆ ಮುಖಂಡ ಮತ್ತಿಬ್ಬರ ವಿರುದ್ಧ ನಟಿ ಆರೋಪ ಹೊರಿಸಿದ ಬೆನ್ನಲ್ಲೇ ಅವರನ್ನ ಬಂಧಿಸಲಾಗಿತ್ತು. ಅವರಿಗೆ 18 ದಿನದ ಜೈಲು ವಾಸದ ಬಳಿಕ ಜಾಮೀನು ನೀಡಲಾಯಿತು.
ಈ ಘಟನೆಯ ನಂತರ ಕೆಲವು ದಿನಗಳ ಹಿಂದೆ ಢಾಕಾದ ಕ್ಲಬ್ ಒಂದು ನಟಿ ಪೊರಿ ಮೊನಿ ವಿರುದ್ಧ ದೂರು ನೀಡಿತ್ತು. ನಟಿಯು ನಮ್ಮ ಬಾರಿನಲ್ಲಿ ದಾಂಧಲೆ ಮಾಡಿದ್ದಾಳೆ ಬಾರ್ ಅನ್ನು ಒಡೆದು ಹಾಕಿದ್ದಾಳೆ ಎಂದು ದೂರಿನಲ್ಲಿ ಹೇಳಿತ್ತು. ದೂರು ದಾಖಲಾದ ಬಳಿಕ ಆರ್ಎಬಿಯವರು ನಟಿ ಪೊರಿ ಮೊನಿ ಮನೆ ಮೇಲೆ ದಾಳಿ ಮಾಡಿದ್ದಾರೆ. ಪೊರಿ ಮೊನಿ ಮನೆ ಮೇಲೆ ದಾಳಿ ಮಾಡುವ ಮುನ್ನ ಇನ್ನಿಬ್ಬರು ಮಾಡೆಲ್ಗಳ ಮನೆ ಮೇಲೆ ದಾಳಿ ಅವರನ್ನು ಬಂಧಿಸಲಾಗಿದೆ.
ಸಲಾರ್ ಗೆ ಬಾಲಿವುಡ್ ನ ‘ಕಮಲಿ’ ಎಂಟ್ರಿ..!