Rap ಸಿಂಗರ್ ‘ಯೋ ಯೋ ಹನಿಸಿಂಗ್’ ವಿರುದ್ಧ ದೌರ್ಜನ್ಯ ಕೇಸ್ – 10 ಕೋಟಿ ರೂ. ಪರಿಹಾರ ಕೇಳಿದ ಪತ್ನಿ
ಸೆಲೆಬ್ರಿಟಿಗಳು ಏನೇ ಮಾಡಿದ್ರೂ ಸುದ್ದಿಯಾಗ್ತಾರೆ.. ಆ ವಿಚಾರ ಎಷ್ಟೇ ಚಿಕ್ಕದಿರಲಿ , ದೊಡ್ಡದೇ ಇರಲಿ , ಖಾಸಗಿ ವಿಚಾರವೇ ಆಗಿರಲಿ.. ಹಾಗೇಯೇ ಅನೇಕರ ದಾಂಪತ್ಯ ಬೀದಿಗೆ ಬಂದಿರುವ ಸಾಕಷ್ಟು ಉದಾಹರಣಗಳಿವೆ..
ಇದೀಗ ಬಾಲಿವುಡ್ ಗಾಯಕ ಹಾಗೂ ನಟ ಯೋ ಯೋ ಹನಿ ಸಿಂಗ್ ವಿರುದ್ಧ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿದ್ದರು. Rap ಸಿಂಗರ್ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಪತ್ನಿ ಶಾಲಿನಿ ತಲ್ವಾರ್, ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಿಂಸೆಯ ಆರೋಪ ಮಾಡಿದ್ದರು.
ಇದೀಗ ಪತಿಯಿಂದ ವಿಚ್ಛೇದನ ಕೋರಿರುವ ಶಾಲಿನಿ 10 ಕೋಟಿ ರೂ. ಪರಿಹಾರ ಕೇಳಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. 38 ವರ್ಷದ ಪತ್ನಿ ಶಾಲಿನಿ ಹನಿ ಸಿಂಗ್ ತನ್ನನ್ನು ಕ್ರೂರವಾಗಿ, ಪ್ರಾಣಿಗಳಂತೆ ನಡೆಸಿಕೊಂಡಿದ್ದಾರೆ ಎಂದು ಕೋರ್ಟ್‌ಗೆ ಸಲ್ಲಿಸಿರುವ 120 ಪುಟಗಳ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಪತಿಯಿಂದ ಹಲವಾರು ಬಾರಿ ದೈಹಿಕ ಹಲ್ಲೆಗೆ ಒಳಗಾಗಿರುವುದಾಗಿ ಶಾಲಿನಿ ಆರೋಪ ಮಾಡಿದ್ದಾರೆ.
ಅಲ್ಲದೇ ತನ್ನ ಪತಿ ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹನಿ ಸಿಂಗ್ ಕುಟುಂಬದ ಸದಸ್ಯರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ, ಭಯದಲ್ಲೇ ಜೀವನ ಮಾಡಬೇಕಾಗಿದೆ ಎಂದು ಶಾಲಿನಿ ದೂರಿದ್ದಾರೆ. ಸತತ ಹಿಂಸೆ ಮತ್ತು ಕಿರುಕುಳದಿಂದ ಹಿಂಸೆ ಮತ್ತು ಮಾನಸಿಕ ವೇದನೆಯಿಂದ ಖಿನ್ನತೆಗೊಳಗಾಗಿದ್ದೀನಿ ಎಂದು ಆರೋಪಿಸಿದ್ದಾರೆ..








