ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ : ಆಘಾತಕಾರಿ ಮಾಹಿತಿ ಬಹಿರಂಗ

1 min read

ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣ : ಆಘಾತಕಾರಿ ಮಾಹಿತಿ ಬಹಿರಂಗ

ಬೆಂಗಳೂರು : ಬಾಂಗ್ಲಾ ಯುವತಿ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಗೆದಷ್ಟು ಬಯಲಾಗುತ್ತಿದೆ ಆರೋಪಿಗಳ ಕರ್ಮಕಾಂಡ. ಈ ಗ್ಯಾಂಗ್ ಯುವತಿಯರನ್ನ ಮಾರಾಟ ಮಾಡುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಪೊಲೀಸರ ಮುಂದೆ ಪ್ರಕರಣದ ಪ್ರಮುಖ ಆರೋಪಿ ಶೋಬೂಜ್ ಈ ಹೇಳಿಕೆ ನೀಡಿದ್ದು, 30-40 ಯುವತಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

rape case

ಯುವತಿರ ಜೊತೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿ. ಆ ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿ ವೇಶ್ಯಾವಾಟಿಕೆಗೆ ಆರೋಪಿಗಳು ತಳ್ಳುತ್ತಿದ್ದರಂತೆ.

ಅಷ್ಟೇ ಅಲ್ಲದೇ ಈ ಗ್ಯಾಂಗ್ ಯುವತಿಯರನ್ನ ಬೇರೆ ಬೇರೆ ದೇಶಗಳಿಗೂ ಭಾರತದಿಂದ ಮಾರಾಟ ಮಾಡುತ್ತಿತ್ತು ಎನ್ನುವ ವಿಚಾರ ತನಿಖೆ ವೇಳೆ ಬಯಲಾಗಿದೆ.

ಸದ್ಯಕ್ಕೆ ರೇಪ್ ಕೆಸ್ ಜೊತೆಗೆ ಎಲ್ಲಾ ಆರೋಪಿಗಳ ಮೇಲೆ ಇದೀಗ ಮಾನವ ಕಳ್ಳಸಾಗಾಣಿಕೆ ಕೇಸನ್ನೂ ಕೂಡ ಪೊಲೀಸರು ಹಾಕಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd