Banking Scams
ಬ್ಯಾಂಕ್ ಗ್ರಾಟಹಕರೇ ಎಚ್ಚರ…. ಎಚ್ಚರ…!!
SBI , HDFC ಬ್ಯಾಂಕ್ ಹೆಸರಲ್ಲಿ ವಂಚನೆ
ಫಿಶಿಂಗ್ ಬ್ಯಾಂಕ್ SMS ಮೂಲಕ ವಂಚನೆ
ನಿಮ್ಮ ಬ್ಯಾಂಕ್ ಖಾತೆ ಅಪ್ ಡೇಟ್ ಮಾಡುವಂತೆ ಸಂದೇಶ
ಸಂದೇಶದ ಲಿಂಕ್ ಕ್ಲಿಕ್ ಮಾಡಿದ್ರೆ ಖಾತೆಗೆ ಕನ್ನ
ನಾವೆಲ್ಲರೂ ಸದ್ಯಕ್ಕೆ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದೀವಿ..
ಹಣ ವರ್ಗಾವಣೆ , ಅಥವ ವ್ಯವಹಾರಗಳಿಗೆ ನಗದಿಗಿಂತ ಹೆಚ್ಚಾಗಿ ಡಿಜಿಟಲ್ ಪಾವತಿಯನ್ನೇ ದೈನಂದಿನ ಬದುಕಿನಲ್ಲಿ ಹೆಚ್ಚಾಗಿ ಅಳವಡಿಸಿಕೊಂಡಿದ್ದೀವಿ.
ಇದು ತುಂಬಾ ಅನುಕೂಲಕರಿಯಾಗಿದೆ. ಅಷ್ಟೇ ಅಪಾಯಕಾರಿಯೂ ಆಗಿದೆ. ಯಾಕಂದ್ರೆ ಡಿಜಿಟಲ್ ಕಳ್ಳರ ಹಾವಳಿ ದಿನೇ ದಿನೇ ಹೆಚ್ಚಾಗ್ತಿದೆ..
ಪ್ರಪಂಚದಾದ್ಯಂತ ಸೈಬರ್ ವಂಚನೆ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಭಾರತದಲ್ಲಿಯೂ ಸಹ, ಸೈಬರ್ ಸೆಲ್‌ಗಳಲ್ಲಿ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿಗಳ ವಂಚನೆಯ ಪ್ರಕರಣಗಳು ಪ್ರತಿದಿನ ವರದಿಯಾಗುತ್ತವೆ.
ಜನರಿಂದ ಹಣ ಲೂಟಿಗೆ ಕಳ್ಳರ ನಾನಾ ಟೆಕ್ನಿಕ್ ಗಳನ್ನ ಬಳಸುತ್ತಿದ್ದಾರೆ.
ಇನ್ನೂ ಆಗಾಗ ಫಾರ್ವರ್ಡ್ ಮೆಸೇಜ್ ಗಳು ವಿಶೇಷವಾಗಿ ಬ್ಯಾಂಕ್ ಮೆಸೇಜ್ ಗಳ ಮೂಲಕ ಜನರನ್ನ ಸಂಪರ್ಕಿಸಿ ಒಟಿಟಿ ಪಡೆದು ಬ್ಉಆಂಕ್ ಖಾತೆಯಲ್ಲಿನ ಹಣವನ್ನ ಲಪಟಾಯಿಸುತ್ತಿದ್ದಾರೆ. ಇಂತಹ ಅಪರಾಧಗಳು ದಿನೇ ದಿನೇ ಹೆಚ್ಚಾಗ್ತಲೇ ಇದೆ.
ಅದ್ರಲ್ಲೂ ಫಿಶಿಂಗ್ SMS ಅತ್ಯಂತ ಸಾಮಾನ್ಯ ವಿಧಾನಗಳಲ್ಲಿ ಒಂದಾಗಿದೆ. ಸೈಬರ್ ವಂಚಕರು ಮುಖ್ಯವಾಗಿ ಫಿಶಿಂಗ್ ಬ್ಯಾಂಕ್ ಎಸ್ಎಮ್ಎಸ್ ಮಾಡುವ ಮೂಲಕ ಜನರನ್ನು ಮೋಸಗೊಳಿಸುತ್ತಿದ್ದಾರೆ.
ಸ್ಟ್ಯಾಟಿಸ್ಟಿಕಾ ವರದಿ ಪ್ರಕಾರ.. 2021ರಲ್ಲಿ ಭಾರತದಲ್ಲಿ 4.8 ಸಾವಿರಕ್ಕೂ ಹೆಚ್ಚು ಆನ್ ಲೈನ್ ಬ್ಯಾಂಕಿಂಗ್ ವಂಚನೆಗಳು ವರದಿಯಾಗಿವೆ. ಲೋಕಸಭೆಯಲ್ಲಿ ಹಣಕಾಸು ಖಾತೆಯ ರಾಜ್ಯ ಸಚಿವರು ಹಂಚಿಕೊಂಡ ಆರ್‌ಬಿಐ ವರದಿಯ ಪ್ರಕಾರ, ಎಟಿಎಂ/ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಅಡಿಯಲ್ಲಿ ಸುಮಾರು ರೂ.128 ಕೋಟಿ ಮೌಲ್ಯದ ವಂಚನೆಗಳನ್ನು ಮಾಡಲಾಗಿದೆ ಎಂದು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್‌ಗಳು (SBI) ತಿಳಿಸಿವೆ.
ಇತ್ತೀಚೆಗೆ HDFC ಬ್ಯಾಂಕ್ ತನ್ನ ಗ್ರಾಹಕರನ್ನು ಎಚ್ಚರಿಸಿದೆ. ಕೆಲವು ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್ ಹೆಸರಿನಲ್ಲಿ ಸಂದೇಶಗಳನ್ನು ಸ್ವೀಕರಿಸುತ್ತಿರುವುದನ್ನು ಕಂಡು ಬ್ಯಾಂಕ್ಗೆ ಮಾಹಿತಿ ನೀಡಿದಾಗ ಇದೀಗ ಈ ಬ್ಯಾಂಕ್ ಗ್ರಾಹಕರಿಗೆ ಎಚ್ಚರಿಕೆ ನೀಡುತ್ತಿದೆ.
ಸಂಘಮಿತ್ರ ಮಜುಂದಾರ್ ಎಂಬ ಗ್ರಾಹಕರು ಟ್ವಿಟರ್ ನಲ್ಲಿ ತಮಗೆ ಬಂದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ.. ಗ್ರಾಹಕ ನಿಮ್ಮ HDFC NET ಬ್ಯಾಂಕಿಂಗ್ ಅನ್ನು ಇಂದು ಸ್ಥಗಿತಗೊಳಿಸಲಾಗುವುದು. ದಯವಿಟ್ಟು ನಿಮ್ಮ ಪ್ಯಾನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿ. ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಂದು ಬರೆಯಲಾಗಿದೆ.
HDFC Bankcare ಫಿಶಿಂಗ್ ಹಗರಣದ ಬಗ್ಗೆ ಗ್ರಾಹಕರಿಗೆ ಎಚ್ಚರಿಸುವ ಕೆಲಸವನ್ನು ಮಾಡುತ್ತಿದೆ. ಹಗರಣಕ್ಕೆ ಸಂಬಂಧಿಸಿದ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹಾಯ್ ಸಂಗಮಿತ್ರ, PAN ಕಾರ್ಡ್ ಅಥವಾ KYC ಅಪ್ಡೇಟ್ ಹೀಗೆ ಯಾವುದೇ ಇತರ ಬ್ಯಾಂಕಿಂಗ್ ಮಾಹಿತಿಯನ್ನು ಕೇಳುವ ಅಪರಿಚಿತ ಸಂಖ್ಯೆಗಳಿಗೆ ಪ್ರತಿಕ್ರಿಯಿಸಬೇಡಿ ಎಂದು ಹೇಳಿದ್ದಾರೆ. HDFC ಬ್ಯಾಂಕ್ ಯಾವಾಗಲೂ ತಮ್ಮ ಅಧಿಕೃತ ID hdfcbk/ hdfcbn ನಿಂದ ಸಂದೇಶಗಳನ್ನು ಕಳುಹಿಸುತ್ತದೆ ಎಂದೂ ಹೇಳಿದ್ದಾರೆ.
ಬ್ಯಾಂಕ್ ಕಳುಹಿಸುವ ಸಂದೇಶಗಳಲ್ಲಿನ ಲಿಂಕ್‌ಗಳು ಯಾವಾಗಲೂ http://hdfcbk.io ಅಡಿಯಲ್ಲಿ ಇರುತ್ತವೆ. ಡೊಮೇನ್ ಅನ್ನು ನೆನಪಿಡಿ. ಬ್ಯಾಂಕ್ ಎಂದಿಗೂ ಪ್ಯಾನ್ ವಿವರಗಳು, OTP, UPI, VPA / MPIN, ಗ್ರಾಹಕ ID ಮತ್ತು ಪಾಸ್‌ವರ್ಡ್, ಕಾರ್ಡ್ ಸಂಖ್ಯೆ, ATM ಪಿನ್ ಮತ್ತು CVV ಗಳನ್ನು ಕೇಳುವುದಿಲ್ಲ. ದಯವಿಟ್ಟು ಅಂತಹ ಮಾಹಿತಿಯನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬೇಡಿ ಎಮದು ಬ್ಯಾಂಕ್ ನಿರ್ವಾಹಕರು ಹೇಳಿದ್ದಾರೆ
ಸ್ಕ್ಯಾಮರ್‌ಗಳು ಬ್ಯಾಂಕ್‌ನಂತೆ ಸಂದೇಶಗಳನ್ನು ಕಳುಹಿಸುತ್ತಾರೆ. ಖಾತೆ ವಿವರಗಳು, ಓಟಿಪಿಗಳು, ಗುರುತಿನ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಯನ್ನು ಕೇಳಲಾಗುತ್ತದೆ. ಜೊತೆಗೆ ನಿಮ್ಮ ಕೆವೈಸಿ, ಪ್ಯಾನ್ ಅಪ್ಡೇಟ್ ಮಾಡಿ ಇಲ್ಲವಾದ್ರೆ ಬ್ಯಾಂಕ್ ಖಾತೆ ಬ್ಯಾನ್ ಆಗುತ್ತೆ ಎಂದು ಹೇಳಿ, ಜೊತೆಗೆ ಒಂದು ಲಿಂಕ್ ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಮೊಬೈಲ್ ಬಳಕೆದಾರು ಒಂದು ವೇಳೆ ಆ ಲಿಂಕ್ ಅನ್ನು ಕ್ಲಿಕ್ ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ದುಡ್ಡನ್ನ ವಂಚಕರು ಲಪಟಾಯಿಸುತ್ತಾರೆ.
Banking Scams : Bankers beware… Beware…!! Fraud in the name of SBI, HDFC Bank