ಈ ವಾರ ಬ್ಯಾಂಕ್ ಗಳಿಗೆ 4 ದಿನ ರಜೆ – ಸೇವೆಯಲ್ಲಿ ವ್ಯತ್ಯಯ
ನೀವು ಬ್ಯಾಂಕ್ ಗಳಿಗೆ ವಿಸಿಟ್ ಮಾಡಬಹುದಾದ ಯಾವುದೇ ಪ್ರಮುಖ ಕೆಲಸದ ಜವಬ್ದಾರಿಯನ್ನ ಹೊತ್ತಿದ್ದರೆ ಇನ್ನೆರೆಡು ದಿನಗಳಲ್ಲಿ ಮುಗಿಸಿಕೊಂಡು ಬಿಡಿ, ಆನಂತರ ಬರುತ್ತಿರುವ ಸಾಲು ರಜಗಳಿಂದ ನಿಮ್ಮ ಬ್ಯಾಂಕ್ ಕೆಲಸಕ್ಕೆ ಅಡಚಣೆ ಉಂಟಾಗುವುದು ನಿಶ್ಚಿತ.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ, ಸೌರಮಾನ ಯುಗಾದಿ, ಬೈಸಾಶಿ, ವೈಸಾಖಿ ವಿಷು, ಗುಡ್ ಫ್ರೈಡೇ ಮುಂತಾದ ಹಬ್ಬಗಳು ಸಾಲು ಸಾಲಾಗಿ ಬರುತ್ತಿರುವುದರಿಂದ ಬ್ಯಾಂಕುಗಳಿಗೆ ನಿರಂತರ ರಜೆ ಸಿಗುತ್ತಿದೆ. ಏಪ್ರಿಲ್ 14ರಿಂದ ಏಪ್ರಿಲ್ 17ರ ತನಕ ರಜೆಯಿದೆ.
ಏಪ್ರಿಲ್ 14- ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮಹಾವೀರ ಜಯಂತಿ, ಬೈಸಾಖಿ/ವಿಷು/ತಮಿಳು ಹೊಸ ವರ್ಷ/ಚೀರೋಬಾ/ಬಿಜು/ಬೋಹಾಗ್ ಬಿಹು ಹಬ್ಬದ ಪ್ರಯುಕ್ತ ಮೇಘಾಲಯ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ಎಲ್ಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಏಪ್ರಿಲ್ 15 – ಶುಕ್ರವಾರ ಗುಡ್ ಫ್ರೈಡೇ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಷು/ಬೋಹಾಗ್ ಬಿಹು ಹಬಬ್ದ ಪ್ರಯುಕ್ತ ರಾಜಸ್ಥಾನ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ
ಏಪ್ರಿಲ್ 16-ಬೊಹಾಗ್ ಬಿಹು ಅಸ್ಸಾಂ ರಾಜ್ಯದ ಬ್ಯಾಂಕ್ ಗಳಿಗೆ ರಜೆ ಸಿಗಲಿದೆ.
ಏಪ್ರಿಲ್ 17: ಭಾನುವಾರ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಭಾರತದ ಪ್ರಾದೇಶಿಕ ಬ್ಯಾಂಕ್‌ಗಳು ನಿಗದಿತ ದಿನಾಂಕಗಳಂದು ಮತ್ತು ಮತ್ತು ಪ್ರಾದೇಶಿಕವಾರು ಹಬ್ಬ ಹರಿದಿನಗಳಂದು ರಜೆ ಘೋಷಿಸಲಾಗುತ್ತಿದೆ.








