Melukote – ತೆಲುಗು ಚಿತ್ರತಂಡದಿಂದ ಎಡವಟ್ಟು | ರಾಜಗೋಪುರದಲ್ಲಿ ಬಾರ್ ಸೆಟ್
ಮಂಡ್ಯ : ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ಪರಿಭಾಷಿಕ ಚಿತ್ರತಂಡ ಮತ್ತೆ ಎಡವಟ್ಟು ಮಾಡಿದ್ದು, ಮೇಲುಕೋಟೆ ಪರಂಪರೆಗೆ ಧಕ್ಕೆಯಾಗುವಂತೆ ಸೆಟ್ ಹಾಕಲಾಗಿದೆ.
ನಾಗಚೈತನ್ಯ ಅಭಿನಯದ 3 ನಾಟ್ 2 ಚಿತ್ರತಂಡ ಮೇಲುಕೋಟೆಯ ಪಾರಂಪರಿಕ ಸ್ಮಾರಕ ರಾಯಗೋಪುರದಲ್ಲಿ ಬಾರ್ ರೀತಿಯಲ್ಲಿ ಸೆಟ್ ಹಾಕಿದ್ದು, ಜನರ ಭಾವನೆ ಧಕ್ಕೆಯನ್ನುಂಟು ಮಾಡಿದೆ.

ರಾಯಗೋಪುರದ ಮುಂಭಾಗ ಪಾರ್ಟಿಯ ಸೆಟ್ ಹಾಕಿದ್ದು, ವಿವಿಧ ಬ್ರ್ಯಾಂಡ್ ಗಳ ಮದ್ಯದ ಬಾಟಲ್ ಗಳನ್ನಿಟ್ಟು ಚಿತ್ರೀಕರಣ ಮಾಡಲಾಗಿದೆ.
ಹೀಗಾಗಿ ಚಿತ್ರ ತಂಡದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.