ಬಿಜೆಪಿಯ ಯುವ ನಾಯಕಿಯೊಬ್ಬರನ್ನು ಅವರ ಪತಿಯೇ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಬಿಜೆಪಿ ನಾಯಕಿ ಸನಾ ಖಾನ್, ನಾಗ್ಪುರ ಬಿಜೆಪಿಯ ಅಲ್ಪಸಂಖ್ಯಾತ ಘಟಕದ ನಾಯಕಿಯಾಗಿದ್ದರು. ಅವರು ಅಮಿತ್ ಅಲಿಯಾಸ್ ಪಪ್ಪು ಸಾಹು ಎಂಬಾತನ ಜೊತೆ ಮದುವೆಯಾಗಿದ್ದರು. ಇತ್ತೀಚೆಗೆ ಮಹಿಳೆ ನಾಪತ್ತೆಯಾಗಿದ್ದರು ಎನ್ನಲಾಗಿತ್ತು.
35 ವರ್ಷದ ಸನಾ ಮತ್ತು ಪಪ್ಪು ಮದುವೆಯಾಗಿದ್ದರು. ಸನಾಗೆ ಒಂದು ಮಗುವಿದೆ. ಆದರೆ ಗಂಡ ಮಗುವನ್ನು ಬಿಟ್ಟು, ಸನಾ ಖಾನ್ ಪಪ್ಪುವಿನ ಜೊತೆ ವಾಸಿಸಲು ಜಬಲ್ಪುರಕ್ಕೆ ತೆರಳಿದ್ದರು ಎನ್ನಲಾಗಿದೆ.
ಪಪ್ಪು ಹಾಗೂ ಸನಾ ಖಾನ್ ನಡುವಿನೆ ಸ್ನೇಹ ಸಂಬಂಧ ಜಗಜ್ಜಾಹೀರಾಗಿತ್ತು. ಈ ವಿಚಾರ ಆತನ ಹೆಂಡತಿಗೂ ಗೊತ್ತಾಯಿತು ಎನ್ನಲಾಗಿದೆ. ಇದೇ ವಿಚಾರಕ್ಕೆ ಪಪ್ಪು ಮತ್ತು ಅವನ ಹೆಂಡತಿಯ ನಡುವೆ ಆಗಾಗ ಗಲಾಟೆ, ಕಿರಿಕಿರಿ, ಜಗಳಗಳು ನಡೆಯುತ್ತಿದ್ದವಂತೆ. ಇದೇ ಕಾರಣಕ್ಕೆ ಪಪ್ಪು ಹಾಗೂ ಆತನ ಹೆಂಡತಿ ಬೇರೆ ಬೇರೆಯಾಗಿದ್ದರು ಕೂಡ ಎನ್ನಲಾಗಿದೆ. ಅದೇ ದಿನ ಸಂಜೆ ಸನಾ ಇಮ್ರಾನ್ ಜೊತೆ ಫೋನ್ ನಲ್ಲಿ ಮಾತನಾಡಿ ತನ್ನ ಪತಿಯಿಂದ ಹಲ್ಲೆಗೊಳಗಾದ ಬಗ್ಗೆ ತಿಳಿಸಿದ್ದಾಳೆ. ಇದೇ ವೇಳೆ ಇಮ್ರಾನ್ ತನ್ನ ತಾಯಿಗೆ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದ. ಈ ಫೋನ್ ಕಾಲ್ ನಂತರ ಸನಾ ನಾಪತ್ತೆಯಾಗಿದ್ದಳು.
ಸನಾ ಮತ್ತು ಅಮಿತ್ ಇಬ್ಬರಿಗೂ ಹಣದ ವಿಚಾರದಲ್ಲಿ ದೀರ್ಘಕಾಲದ ಜಗಳವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಜಬಲ್ಪುರಕ್ಕೆ ಅಮಿತ್ ನನ್ನು ಭೇಟಿಯಾಗಲು ಬಂದಾಗ, ಅವರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ವೇಳೆ ಪಪ್ಪು ಸನಾ ಖಾನ್ ತಲೆಗೆ ಹೊಡೆದು, ಕೊಲೆ ಮಾಡಿದ್ದಾನೆ ಎನ್ನಲಾಗಿದೆ.








