ಸಿಎಂ ಪುತ್ರ ವಿಜಯೇಂದ್ರ ಬಳಿ ಶಾಸಕರ ಸಿಡಿ : ಯತ್ನಾಳ್ ಹೊಸ ಬಾಂಬ್
ವಿಜಯಪುರ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರನ ಶಿಷ್ಯರು ಕೆಲ ಶಾಸಕರ ನಕಲಿ ಸಿಡಿ ಮಾಡ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಮನೆಯಲ್ಲೇ ಒಂದು ಟೀಂ ಇದೆ. ವಿಜಯೇಂದ್ರನ ಶಿಷ್ಯರು ಕೆಲ ಶಾಸಕರದ್ದು ಇದೇ ರೀತಿ ನಕಲಿ ಸಿಡಿ ಮಾಡ್ತಾರೆ.
ವಿಜಯೇಂದ್ರ ಬಳಿ ಯಾರ ಯಾರ ಸಿಡಿ ಇದೆ ಅಂತ ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲ ವಿಷಯವನ್ನ ದಾಖಲೆ ಸಮೇತ ಹೇಳುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಬಸನಗೌಡ ಪಾಟೀಲ್ ಮಂತ್ರಿಯಾಗಲು ಈ ರೀತಿ ಹೇಳಿಕೆಗಳನ್ನು ಕೊಡ್ತಾರೆ ಎಂಬ ಶೆಟ್ಟರ್ ಮತ್ತು ಈಶ್ವರಪ್ಪ ಆರೋಪದ ವಿಚಾರವಾಗಿ ಮಾತನಾಡಿ, ಜಗದೀಶ ಶೆಟ್ಟರ್ ಅವರಂತೆ ನಾನೇನು ಕೀಳು ರಾಜಕಾರಣ ಮಾಡುವುದಿಲ್ಲ.
ಬಾಲಿವುಡ್ ಬಾದ್ ಶಾ ಅಮಿತಾಬ್ ಬಚ್ಚನ್ ಜೊತೆ ತುಳುವಿನಲ್ಲಿ ಮಾತನಾಡಿದ ರವಿ ಕಟಪಾಡಿ
ನಾನೇನು ಸಿಎಂ ಆದ ಬಳಿಕ ಸಚಿವನಾಗಿಲ್ಲ. ಅವರು ಸಚಿವರಾಗುವ ಅವಶ್ಯಕತೆ ಇರಲಿಲ್ಲ. ಯುವಕರಿಗೆ ಅವಕಾಶ ನೀಡಬಹುದಿತ್ತು. ಶೆಟ್ಟರ್ ಸುಮ್ಮನೆ ನನ್ನ ಬಗ್ಗೆ ಮಾತನಾಡಬಾರದು. ನನ್ನ ಬಳಿ ಬಹಳ ಜನರ ಇತಿಹಾಸವಿದೆ ಎಂದು ಗರಂ ಆದರು.
ಈಶ್ವರಪ್ಪ ನನ್ನ ಬಗ್ಗೆ ಮಾತನಾಡಬಾರದು. ನಾನೆಂದೂ ಸಚಿವರನ್ನಾಗಿ ಮಾಡಿ ಅಂತ ಈಶ್ವರಪ್ಪ ಅವರ ಬಳಿ ಹೋಗಿಲ್ಲ. ನಾನೆಂದೂ ಲಾಬಿ ಮಾಡಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ.
ನನ್ನನ್ನು ಬಿಜೆಪಿಯಿಂದ ಆರು ವರ್ಷ ಉಚ್ಛಾಟಿಸಿದ್ದರಿಂದ ಜೆಡಿಎಸ್ ಸೇರಿದ್ದೆ. ಅದನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳಬೇಕಿತ್ತಾ? ನಾನು ಯಾವತ್ತಾದರೂ ಸಚಿವ ಸ್ಥಾನ ಕೇಳಿದ್ದೆನಾ ಎಂಬ ಬಗ್ಗೆ ಯಡಿಯೂರಪ್ಪ ಅವರೇ ಸ್ಪಷ್ಟಪಡಿಸಲಿ ಎಂದ ಸವಾಲ್ ಹಾಕಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








