ಯೋಗೀಶ್ವರ್ ಮೇಲೆ ಕ್ರಮ ತೆಗೆದುಕೊಳ್ಳೋ ಶಕ್ತಿ ಬಿಎಸ್ ವೈಗಿಲ್ಲ : ಯತ್ನಾಳ್
ವಿಜಯಪುರ : ಸಚಿವ ಸಿ.ಪಿ ಯೋಗೀಶ್ವರ್ ಮೇಲೆ ಕ್ರಮ ತೆಗೆದುಕೊಳ್ಳೋ ಶಕ್ತಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಿಲ್ಲ.
ಒಂದು ವೇಳೆ ಕ್ರಮ ತೆಗೆದುಕೊಂಡರೇ ಬರೀ ಒಂದೇ ಗಂಟೆಯಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸಿಎಂ ಪುತ್ರ ವಿಜಯೇಂದ್ರ ದೆಹಲಿ ಭೇಟಿ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳೇ ದೆಹಲಿ ಹೋಗಬೇಕಿತ್ತು, ಅವ್ರದೇನ್ ಕೆಲಸ ಎಂದು ಪ್ರಶ್ನಿಸಿದರು.
ಇದು ಸ್ಪಷ್ಟವಾಗಿ ಸಾಬೀತಾಗುತ್ತೆ, ಇದು ಯಡಿಯೂರಪ್ಪ ನವರ ಸರಕಾರ ಅಲ್ಲ, ವಿಜಯೇಂದ್ರ ಸರಕಾರ. ಅದಕ್ಕೆ ನಾವು ವಿರೋಧ ಮಾಡ್ತಾ ಇದ್ದೇವೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಜೊತೆಗೆ ವಿಜಯೇಂದ್ರ ಹೋಗ್ತಾನೆ. ಸಿ .ಪಿ ಯೋಗೀಶ್ವರ್ ಮೇಲೆ ಕ್ರಮ ತೆಗೆದುಕೊಳ್ಳೋ ಶಕ್ತಿ ಯಡಿಯೂರಪ್ಪಗಿಲ್ಲ.
ಯಡಿಯೂರಪ್ಪನವರು ಯೋಗಿಶ್ವರ್ ಮೇಲೆ ಕ್ರಮ ಕೈಗೊಂಡ್ರೆ, ಬರೀ ಒಂದೇ ಗಂಟೆಯಲ್ಲಿ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ಯೋಗೀಶ್ವರವರಿಗೆ ಉಪ ಮುಖ್ಯಮಂತ್ರಿ ಮಾಡಿ, ಇಂಧನ ಮಂತ್ರಿ ಮಾಡಿದ್ರೂ ಆಶ್ಚರ್ಯ ಇಲ್ಲ. ಅವ್ರನ್ನು ವಜಾ ಮಾಡೋ ಪ್ರಶ್ನೆ ಇಲ್ಲ.
ಮುರಗೇಶ್ ನಿರಾಣಿ, ಯೋಗಿಶ್ವರ್, ಎನ್ ಆರ್ ಸಂತೋಶ್ ಇವ್ರು ಒಂದೇ ಕೋಟಾದಲ್ಲಿ ಮಂತ್ರಿಯಾದವರು ಎಂದು ಟೀಕಿಸಿದರು.