ನಾಡಿನೆಲ್ಲೆಡೆ ಸಂಭ್ರಮದಿಂದ ಬಸವ ಜಯಂತಿ ಆಚರಣೆ….
ಜಗಜ್ಯೋತಿ ಬಸವಣ್ಣನವರ ಜನ್ಮದಿನವನ್ನು ಎಲ್ಲೆಡೆ ಬಸವ ಜಯಂತಿ ಎಂದು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಓರ್ವ ಮಹಾನ್ ಸಮಾಜ ಸುಧಾರಕ, ದಾರ್ಶನಿಕ 12 ನೇ ಶತಮಾನದ ಕವಿ ಮತ್ತು ದಾರ್ಶನಿಕ ಬಸವಣ್ಣ ಅವರನ್ನು ವಿಶೇಷವಾಗಿ ಅವರ ಸಂದೇಶಗಳಿಂದ ನೆನೆಸಿಕೊಳ್ಳಲಾಗುತ್ತದೆ.
ಕರ್ನಾಟಕ ಪ್ರವಾಸದಲ್ಲಿರುವ ಕೇಂದ್ರ ಗೃಹ ಮತ್ತು ಸಹಕಾರಿ ಸಚಿವ ಅಮಿತ್ ಶಾ ಬೆಂಗಳೂರಿನ ಚಾಲುಕ್ಯ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಆಚರಿಸಿದರು.
ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಜಗಜ್ಯೋತಿ ಶ್ರೀ ಬಸವಣ್ಣನವರ ಪ್ರತಿಮೆಗೆ ಕೆಪಿಸಿಸಿ ಅಧ್ಯಕ್ಷ ಡಿ,ಕೆ ಶಿವಕುಮಾರ್ ಮಾಲಾರ್ಪಣೆ ಮಾಡಿ ನಮಸ್ಕರಿಸಿದ್ರು.
ಅಲ್ಲದೇ ಈ ವರ್ಷದ ಬಸವ ಜಯಂತಿ ಆಚರಣೆಯ ವಿಶೇಷವೆಂದರೆ ಪ್ರತಿ ವರ್ಷ ಮೇ 3 ರಂದು ರಾಜ್ಯಾದ್ಯಂತ ಬಸವ ಜಯಂತಿ ಆಚರಣೆ ಮಾಡುವಂತೆ ಆಂಧ್ರ ಪ್ರದೇಶ ಸರ್ಕಾರದ ಆದೇಶಿಸಿದೆ.
Basava Jayanti celebration with excitement everywhere….