ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ ಮಗ ಮಾತಾಡಲಿ : ಸಿಎಂಗೆ ಯತ್ನಾಳ್ ಸವಾಲು
ಬೆಂಗಳೂರು : ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ ಮಗ ಮಾತಾಡಲಿ ಎಂದು ಸಿಎಂ ಬಿಎಸ್ವೈ ಹಾಗೂ ಪುತ್ರ ವಿಜಯೇಂದ್ರಗೆ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.
ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನೇನು ಸ್ವಲ್ಪದಿನಗಳಲ್ಲೇ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಎಷ್ಟು ಲೂಟಿ ಮಾಡಿದರು ಎನ್ನುವುದು ಗೊತ್ತಾಗಲಿದೆ.
ಇನ್ನೂ ಸ್ವಲ್ಪ ದಿನಗಳಲ್ಲೇ ಅಪ್ಪ ಮಗನ ನಿಜ ಬಣ್ಣ ಬಯಲಾಗಲಿದೆ. ಫೆಡರಲ್ ಬ್ಯಾಂಕ್ ವ್ಯವಹಾರದಲ್ಲಿ ವಿಜಯೇಂದ್ರ ಅವರನ್ನು ಜಾರಿ ನಿರ್ದೇಶನಾಲಯದವರು ಕರೆದುಕೊಂಡು ಹೋಗಿಲ್ಲ ಎಂದು ಹೇಳಲಿ.
ನಾನು ಅವರಿಗೆ ಚಾಲೆಂಜ್ ಮಾಡ್ತೇನೆ. ಇದೇ ಡಿಕೆಶಿಯನ್ನು ಇಡಿಯವರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರಲ್ಲ.
ಅಲ್ಲಿಗೆ ವಿಜಯೇಂದ್ರರನ್ನು ಕರೆದುಕೊಂಡು ಹೋಗಿ ಇಡಿಯವರು ವಿಚಾರಣೆ ಮಾಡಿದ್ದಾರೆ. ವಿಜಯೆಂದ್ರ ಸೂಟು- ಬೂಟು ಹಾಕೊಂಡು ವಿಚಾರಣೆಗೆ ಹೋಗಿದ್ರು.
ಅದೆನ್ನೆಲ್ಲಾ ಬಿಚ್ಚಿಸಿ, ಡಿಕೆಶಿ ತರನೇ ವಿಜಯೇಂದ್ರರನ್ನು ವಿಚಾರಣೆ ಮಾಡಿದ್ದಾರೆ ಎಂದು ಗುಡುಗಿದರು.
ಇದೇ ವೇಳೆ ಸಿಎಂಗೆ ಸವಾಲ್ ಎಸೆದ ಯತ್ನಾಳ್, ತಾಕತ್ತಿದ್ದರೆ ನನ್ನ ಬಗ್ಗೆ ಅಪ್ಪ – ಮಗ ಮಾತಾಡಲಿ ಎಂದು ಎಂದು ಹೇಳಿದರು.
