Basavaraja Bommai | ವಿ.ಸೋಮಣ್ಣ ಯುವಕರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ
ಬೆಂಗಳೂರು : ವಸತಿ ಸಚಿವರಾದ ವಿ.ಸೋಮಣ್ಣ ರವರು ಯುವಕರನ್ನು ನಾಚಿಸುವಂತೆ ಕೆಲಸ ಮಾಡ್ತಾರೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ವಿ.ಸೋಮಣ್ಣರವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ವೇದಿಕೆ ಮೇಲೆ ಮಾತನಾಡಿದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿರವರು, ವಿ.ಸೋಮಣ್ಣ ಅವರು ಯುವಕರನ್ನ ನಾಚಿಸುವಂತೆ ಸೋಮಣ್ಣ ರವತು ಕೆಲಸ ಮಾಡುತ್ತಿದ್ದಾರೆ.

ಇವತ್ತಿನವರೆಗೂ ಅವರ ವಯಸ್ಸು ಎಷ್ಟು ಅಂತಾ ಕಂಡುಹಿಡಿಯೋಕೆ ಆಗ್ತಿಲ್ಲ. ಕ್ರಿಯಾಶೀಲರಾಗಿ ಪಾದರಸದಂತೆ ಓಡುತ್ತಾರೆ.
ಒಂದು ದಿನವೂ ವಿಶ್ರಾಂತಿಯನ್ನು ಪಡೆಯದೆ ಸದಾ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.