“ಮದಗಜ” ಚಿತ್ರದ ಟ್ರೇಲರ್ ಲೋಕಾರ್ಪಣೆಗೊಳಿಸಿದ ಬೊಮ್ಮಾಯಿ..!

1 min read

“ಮದಗಜ” ಚಿತ್ರದ ಟ್ರೇಲರ್ ಲೋಕಾರ್ಪಣೆಗೊಳಿಸಿದ ಬೊಮ್ಮಾಯಿ..!

ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾದ “ಮದಗಜ”ದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ.. ಅಂದ್ಹಾಗೆ ಚಿತ್ರದ ಈ ಟ್ರೇಲರನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬಿಡುಗಡೆ ಮಾಡಿ ಸಿನಿಮಾಗೆ ಗುಡ್ ಲಕ್ ಹೇಳಿದ್ರು.. ‌ ಚಿತ್ರ ಡಿಸೆಂಬರ್ 3 ರಂದು ತೆರೆಗೆ ಬರಲಿದೆ.

ಟ್ರೇಲರ್ ಬಿಡುಗಡೆ ಸಮಾರಂಭದ ಆರಂಭದಲ್ಲಿ ಶ್ರೀಮುರಳಿ ಪುನೀತ್ ರಾಜ್‍ಕುಮಾರ್ ಅವರಿಗೆ “ಬೊಂಬೆ ಹೇಳುತ್ತಯ್ತೆ… ನೀನೆ ರಾಜಕುಮಾರ” ಹಾಡು ಹೇಳಿ, ಗಾನನಮನ ಸಲ್ಲಿಸಿದ್ದರು.

ಚಿತ್ರದ ಟ್ರೇಲರ್ ಇಷ್ಟು ಚೆನ್ನಾಗಿದೆ ಎಂದರೆ, ಇನ್ನೂ ಸಿನಿಮಾ ಹೇಗೆ ಇರಬೇಡ? ಒಳ್ಳೆ ಹಾಲಿವುಡ್ ಚಿತ್ರದಲ್ಲಿ ಮಾಡಿದ ಹಾಗೆ ಮಾಡಿದ್ದೀರಿ ಎಂದು ಶ್ರೀ ಮುರಳಿ ಅವರನ್ನು ಶ್ಲಾಘಿಸಿದ‌ ಮುಖ್ಯಮಂತ್ರಿಗಳು, ಈಗ ಹೆಚ್ಚಿನ ಸಂಖ್ಯೆಯಲ್ಲಿ ಯುವಪೀಳಿಗೆ‌ ನಿರ್ಮಾಣ, ನಿರ್ದೇಶನ ಹಾಗೂ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸುತ್ತಿರುವುದು ಸಂತಸದ ವಿಷಯ ಎಂದರು.

ಜೀವನದಲ್ಲಿ ಆಟವೇ ಆಡದವರಿಗೆ ‘ಬದುಕಿನ’ ಆಟವಾಡಲು ಆಗೋದಲ್ಲ : ಯಶ್

ಅಷ್ಟೇ ಅಲ್ಲ ಈ ವೇಳೆ ಕಾರ್ಯಕ್ರಮ ಮುಗಿಯುವವರೆಗೂ ಬೊಮ್ಮಾಯಿ ಅವರು ಅಪ್ಪುನನ್ನ ನೆನಪು ಮಾಡಿಕೊಳ್ತಲೇ ಇದ್ರು..

ಸಚಿವರಾದ ಅಶ್ವತ್ ನಾರಾಯಣ್ ಹಾಗೂ ಮುನಿರತ್ನ ಅವರು ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ‌ ಚಿತ್ರತಂಡಕ್ಕೆ ಶುಭ ಕೋರಿದ್ದರು..

ಶ್ರಂಉರುಳಿ ಅವರು ಮಾತನಾಡಿ ನಮ್ಮ ಚಿತ್ರದ ಮೊದಲ ಹೀರೋ ನಿರ್ಮಾಪಕ ಉಮಾಪತಿ ಅವರು. ಅವರ ಸಹಕಾರದಿಂದ ಚಿತ್ರ ಇಷ್ಟು ಚೆನ್ನಾಗಿ ಬಂದಿದೆ. ನಿರ್ದೇಶಕ ಮಹೇಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಸಾಲದು. ಮದಗಜ ದ ಇಡೀ ತಂಡಕ್ಕೆ ನನ್ನ ಅಭಿನಂದನೆ. ನಿರ್ದೇಶಕರು ಹೇಳಿದಂತೆ ನಾನು ನಟಿಸಿದ್ದೇನೆ.‌ ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ . ನೋಡಿ  ಹಾರೈಸಿ ಅಂದಿದ್ದರು.. ಸಿನಿಮಾದಲ್ಲಿ ಆಶಿಕಾ ರಂಗನಾಥ್  ನಾಯಕಿಯಾಗಿದ್ದಾರೆ..

ಒಟ್ಟಾರೆಯಾಗಿ ಹೇಳೋದಾದ್ರೆ ಸಿನಿಮಾದ ಟ್ರೇಲರ್ ಮಾತ್ರ ರಗಡ್ ಆಗಿ ಸಖತ್ ರೋಮಾಂಚನಕಾರಿಯಾಗಿ ಮೂಡಿಬಂದಿದ್ದು, ಕೇವಲ 24 ಗಂಟೆಗಳ ಒಳಗೇ 3 ಮಿಲಿಯನ್ ವೀವ್ಸ್ ಪಡೆದಿತ್ತು..  ಚಿತ್ರದ ಟ್ರೇಲರ್ ನಲ್ಲಿನ ವಿಶುವಾಲಿಟಿ ,  ರವಿ ಬಸ್ರೂರು ಪವರ್ ಫುಲ್ ಬಿಜಿಎಂ , ಆಕ್ಷನ್ ಸೀನ್ಸ್ , ಡೈಲಾಗ್ಸ್ , ವಿಲ್ಲನ್ ಗಳ ಇಂಟ್ರಡಕ್ಷನ್ ಕೂಡ ಸಖತ್ ಟೆರರ್ ಆಗಿದೆ..

ಚಿತ್ರದಲ್ಲಿ ಚಿಕ್ಕಣ್ಣ, ಧರ್ಮಣ್ಣ, ಶಿವರಾಜ್ ಕೆ ಆರ್ ಪೇಟೆ, ಗರುಡ ರಾಮ್ ಅನಿಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ..

ಅನುಷ್ಕಾ ರಂಜನ್ ಕಪೂರ್ ಸಂಗೀತ ಸಮಾರಂಭದಲ್ಲಿ ಸಖತ್ ಸ್ಟೆಪ್ಸ್ ಹಾಕಿದ ಆಲೀಯಾ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd