ಪುನೀತ್ ರಾಜಕುಮಾರ್ ಗೆ ಬಸವಶ್ರೀ ಪ್ರಶಸ್ತಿ

1 min read

ಪುನೀತ್ ರಾಜಕುಮಾರ್ ಗೆ ಬಸವಶ್ರೀ ಪ್ರಶಸ್ತಿ

ಚಿತ್ರದುರ್ಗ : 2021 ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುತ್ತದೆ ಎಂದು ಮುರುಘಾ ಶರಣರು ತಿಳಿಸಿದ್ದಾರೆ.

ಬಸವಶ್ರೀ ಪ್ರಶಸ್ತಿ ಮುರುಘಾ ಮಠದಿಂದ ಪ್ರತೀ ಸಾಲಿನಲ್ಲಿ ಕೊಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಈ ಸಾಲಿನ ಬಸವ ಶ್ರೀ ಪ್ರಶಸ್ತಿಯನ್ನು ಅಪ್ಪುಗೆ ನೀಡಲಾಗಿದೆ.

ಈ ಬಗ್ಗೆ ಮುರುಘಾ ಶರಣರು ಮಾಹಿತಿ ನೀಡಿದ್ದು, 2021 ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ದಿವಂಗತ ನಟ ಪುನೀತ್ ರಾಜಕುಮಾರ್ ಅವರಿಗೆ ನೀಡಲಾಗುತ್ತದೆ.

Punit Rajkumar saaksha tv

ಪ್ರಶಸ್ತಿಯ ಮೊತ್ತ 5 ಲಕ್ಷ ಮತ್ತು ಪ್ರಶಸ್ತಿ ಪತ್ರ ಹೊಂದಿರುತ್ತದೆ. ಇದೇ ತಿಂಗಳ 10 ರಂದು ಅವರ ಮನೆಗೆ ಹೋಗಿ ಸಾಂತ್ವಾನ ಹೇಳಿ ಬರುತ್ತೇವೆ.

ನಂತರ ಮುಂದಿನ ಬಸವ ಜಯಂತಿಯಂದು ಪ್ರಶಸ್ತಿಯನ್ನು ಪುನೀತ್ ಪತ್ನಿ ಅಶ್ವಿನಿ ಅವರು ಮತ್ತು ಶಿವರಾಜ್ ಕುಮಾರ್ ಸ್ವೀಕರಿಸಲು ಆಹ್ವಾನಿಸಲಾಗುತ್ತದೆ. ಈಗಾಗಲೇ ಅವರ ಕುಟುಂಬದವರೊಂದಿಗೆ ಮಾತನಾಡಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd