BBK9 : ದೊಡ್ಮನೆಯಲ್ಲಿ ಬೈಕ್ ರೇಸರ್ ಅರವಿಂದ್ ಗಾಗಿ ದಿವ್ಯಾ ಉರುಡುಗ ಬೇಡಿಕೆ..!!
ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಸಖತ್ ಹೈಲೇಟ್ ಆಗಿದ್ದು ಅಂದ್ರೆ ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ.. ಇವರಿಬ್ಬರ ಜೋಡಿಗೆ ಪ್ರತ್ಯೇಕ ಫ್ಯಾನ್ ಬೇಸ್ ಸಹ ಿತ್ತು..
ಸೀಸನ್ 9 ರಲ್ಲೂ ದಿವ್ಯಾ ಉರುಡುಗ ಆಟವಾಡ್ತಿದ್ದಾರೆ.. ಆದ್ರೆ ಈ ಸೀಸನ್ ನಲ್ಲಿ ಕಂಪ್ಲೀಟ್ ಸೈಲೆಂಟ್ ಆಗಿಬಿಟ್ಟಿದ್ದಾರೆ..
ಇನ್ನೇನು ಸೀಸನ್ 9 ರ ಗ್ರ್ಯಾಂಡ್ ಫಿನಾಲೆಗೆ 4 ದಿನಗಳು ಮಾತ್ರ ಬಾಕಿ ಉಳಿದಿದೆ.. ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ ಆಶಾ ಭಾವಿಯ ಎದುರು ತಮ್ಮ ಮೂರು ಆಸೆಗಳನ್ನ ಕೋರಿಕೊಂಡು ಆ ನಾಣ್ಯವನ್ನು ಭಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್ ಮನೆಯೊಳಗೆ ಬಂದು ಅಡುಗೆ ಮಾಡಿ. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಅರವಿಂದ್ ಕೆ.ಪಿ ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನ ಎಸೆದಿದ್ದಾರೆ.