ಹಾವೇರಿ : ಹಿರೆಕೆರೂರಿಗೆ ಕುಡಿಯುವ ನೀರನ್ನು ಪೂರೈಸುವ ದುರ್ಗಾದೇವಿ ಕೆರೆ ( Durga Devi Lake) ಯೋಜನೆ ಯಶಸ್ವಿಯಾಗಿದ್ದು, ಆ ಮೂಲಕ ಮತಕ್ಷೇತ್ರದ ಜನತೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ( B.C.Patil ) ಕ್ಷೇತ್ರದ ಜನತೆಯ ಬಹುದಿನಗಳ ಕನಸನ್ನು ನನಸುಗೊಳಿಸಿ ಕೊಟ್ಟಮಾತನ್ನು ಈಡೇರಿಸಿದಂತಾಗಿದೆ.
2018 ರಲ್ಲಿ ಆರಂಭಗೊಂಡಿದ್ದ ದುರ್ಗಾದೇವಿ ಕೆರೆ ಯೋಜನೆ ಟ್ರಯಲ್ ರನ್ ಯಶಸ್ವಿಯಾಗಿದ್ದು, ಇದಕ್ಕಾಗಿ ಹಿರೆಕೆರೂರಿನ ಶಾಸಕರು ಹಾಗೂ ಕೃಷಿ ಸಚಿವರು ಆಗಿರುವ ಬಿ.ಸಿ.ಪಾಟೀಲರು ಸಂತಸ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಕ್ಷೇತ್ರದ ಜನತೆ ಕುಡಿಯುವ ನೀರಿನ ಈ ದುರ್ಗಾದೇವಿ ಕೆರೆ ಯೋಜನೆಯ ಯಶಸ್ವಿಗೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಮುಂದುವರೆದ ಮಳೆ ಅವಾಂತರ; ಮನೆಗಳಿಗೆ ನುಗ್ಗಿದ ನೀರು, ಕೊಚ್ಚಿಹೋದ ಬ್ಯಾರೇಜ್
2017 ರಲ್ಲಿ ಸುಮಾರು 24 ಕೋಟಿ.ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು,2018ರಲ್ಲಿ ಕಾಮಗಾರಿ ಆರಂಭವಾಗಿತ್ತು.
ದುರ್ಗಾ ದೇವಿಯ ಕೆರೆಯ ಪಾದ ಸ್ಪರ್ಶಿಸಿ ಡೆಲಿವರಿ ಪಾಯಿಂಟ್ ತಲುಪಿರುವ ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ್ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಟ್ರಯಲ್ ರನ್ ಯಶಸ್ವಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಟ್ಟಿಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪದ ಹತ್ತಿರ ಕುಮಧ್ವತಿ ನದಿಯಿಂದ ನೀರನ್ನು ಎತ್ತಿ ಹಿರೆಕೆರೂರಿನ ದುರ್ಗಾದೇವಿ ಕೆರೆಗೆ ನೀರನ್ನು ಹರಿಸುವ ಯೋಜನೆ ಇದಾಗಿದೆ.
ಈ ಯೋಜನೆಯಿಂದ ದೂದಿಹಳ್ಳಿ ಗ್ರಾಮದ ಸುಮಾರು ಆರು ಕೆರೆಗಳು ಗುಂಡಗಟ್ಟಿ ಗ್ರಾಮದ ಕೊಪ್ಪದ ಕೆರೆ, ಹಿರೆಕೆರೂರಿನ ದುರ್ಗಾದೇವಿ ಕೆರೆಗೆ ನೀರು ಹಾಯಿಸಿ
ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಇದನ್ನೂ ಓದಿ : ಕೊರೊನಾ ವೈಫಲ್ಯ ಕಳಂಕ: ಅಸಮಾಧಾನ ಹೊರಹಾಕಿದ್ರಾ ಸಚಿವ ಶ್ರೀರಾಮುಲು..!
ಅಲ್ಲದೇ ಕೊಳವೆಬಾವಿ ಪುನಶ್ಚೇತನಗೊಳ್ಳುವ ಮೂಲಕ ಅಂತರ್ಜಲ ಹೆಚ್ಚಿ ಸುತ್ತಮುತ್ತಲ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel