2021-22ನೇ ಸಾಲಿನ ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಬಿಸಿಸಿಐ ವೇಳಾಪಟ್ಟಿ ಪ್ರಕಟ..!

1 min read

2021-22ನೇ ಸಾಲಿನ ದೇಶಿ ಕ್ರಿಕೆಟ್ ಟೂರ್ನಿಗಳಿಗೆ ಬಿಸಿಸಿಐ ವೇಳಾಪಟ್ಟಿ ಪ್ರಕಟ..!

vijay-hazare bcci saakshatvಕೊನೆಗೂ ಬಿಸಿಸಿಐ ರಣಜಿ ಟೂರ್ನಿಯನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಕೋವಿಡ್ ಆತಂಕದಿಂದ ಕಳೆದ ವರ್ಷ ರಣಜಿ ಟೂರ್ನಿಯನ್ನು ರದ್ದುಗೊಳಿಸಲಾಗಿತ್ತು.
ಆದ್ರೆ 2021ನೇ ಸಾಲಿನ ರಣಜಿ ಟೂರ್ನಿಗೆ ಬಿಸಿಸಿಐ ಮುಹೂರ್ತ ಫಿಕ್ಸ್ ಮಾಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪ್ರತಿಷ್ಠಿತ ದೇಶಿ ಟೂರ್ನಿಯನ್ನು ಆಯೋಜನೆ ಮಾಡಲಿದೆ.
ನವೆಂಬರ್ 16ರಿಂದ 2022ರ ಫೆಬ್ರವರಿ 12ರವರೆಗೆ ರಣಜಿ ಪಂದ್ಯಗಳು ನಡೆಯಲಿವೆ. ಒಟ್ಟು 38 ತಂಡಗಳು ಭಾಗವಹಿಸಲಿದ್ದು, 177 ಪಂದ್ಯಗಳು ನಡೆಯಲಿವೆ.
ಇದೇ ವೇಳೆ ದೇಶಿಯ ಇತರೆ ಕ್ರಿಕೆಟ್ ಟೂರ್ನಿಗಳಿಗೆ ಚಾಲನೆ ನೀಡಲು ಬಿಸಿಸಿಐ ನಿರ್ಧಾರ ತೆಗೆದುಕೊಂಡಿದೆ.
ಸೆಪ್ಟಂಬರ್ 21ರಿಂದ ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಅದೇ ರೀತಿ ಸೈಯದ್ ಮುಷ್ತಾಕ್ ಆಲಿ ಟಿ-ಟ್ವೆಂಟಿ ಕ್ರಿಕೆಟ್ ಟೂರ್ನಿ ಅಕ್ಟೋಬರ್ 20ರಿಂದ ನವೆಂಬರ್ 12ರವರೆಗೆ ನಡೆಯಲಿದೆ. ಒಟ್ಟು 149 ಪಂದ್ಯಗಳು ನಡೆಯಲಿವೆ.
ರಣಜಿ ಟ್ರೋಫಿ ಮುಗಿದ ನಂತರ 2022ರ ಫೆಬ್ರವರಿ 23ರಿಂದ ವಿಜಯ್ ಹಜಾರೆ ಏಕದಿನ ಪಂದ್ಯಗಳು ನಡೆಯಲಿವೆ. ಒಟ್ಟು 169 ಪಂದ್ಯಗಳು ನಡೆಯಲಿವೆ.
ಇನ್ನು 23 ವರ್ಷದೊಳಗಿನ ಸಿ.ಕೆ. ನಾಯ್ಡು ಲೀಗ್ ಪಂದ್ಯಗಳು ನವೆಂಬರ್ 18ರಿಂದ 2022ರ ಫೆಬ್ರವರಿ 12ರವರೆಗೆ ನಡೆಯಲಿದ್ದು, ಒಟ್ಟು 160 ಪಂದ್ಯಗಳು ನಡೆಯಲಿವೆ.
sourav ganguly bcci jai sha saakshatvಹಾಗೇ ಸಿ.ಕೆ. ನಾಯ್ಡು ಏಕದಿನ ಟೂರ್ನಿಯು 2022ರ ಫೆಬ್ರವರಿ 23ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು, 160 ಪಂದ್ಯಗಳು ನಡೆಯಲಿವೆ.
19 ವರ್ಷದೊಳಗಿನ ವಿನೂ ಮಂಕಡ್ ಏಕದಿನ ಟೂರ್ನಿ 2021ರ ಸೆಪ್ಟಂಬರ್ 28ರಿಂದ ಅಕ್ಟೋಬರ್ 29ರವರೆಗೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 152 ಪಂದ್ಯಗಳು ನಡೆಯಲಿವೆ.
ಹಾಗೇ 19 ವರ್ಷದೊಳಗಿನ ವಿನೂ ಮಂಕಡ್ ಏಕದಿನ ಚಾಲೆಂಜರ್ ಕ್ರಿಕೆಟ್ ಟೂರ್ನಿಯು 2021ರ ನವೆಂಬರ್ 3ರಿಂದ 9ರವರೆಗೆ ಒಟ್ಟು ಏಳು ಪಂದ್ಯಗಳು ನಡೆಯಲಿವೆ.
ಕೂಚ್ ಬಿಹಾರ್ ಟ್ರೋಫಿ ಟೂರ್ನಿಯು ನವೆಂಬರ್ 14ರಿಂದ 2022ರ ಫೆಬ್ರವರಿ 7ರವರೆಗೆ ನಡೆಯಲಿದ್ದು, ಒಟ್ಟು 152 ಪಂದ್ಯಗಳು ನಡೆಯಲಿವೆ.
2021ರ ಅಕ್ಟೋಬರ್ 1ರಿಂದ ಡಿಸೆಂಬರ್ 6ರವರೆಗೆ 16 ವಯೊಮಿತಿ ವಿಜಯ್ ಮರ್ಚಂಟ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, 102 ಪಂದ್ಯಗಳು ನಡೆಯಲಿವೆ.
ಇನ್ನು ದೇಶಿ ಮಹಿಳಾ ಕ್ರಿಕೆಟ್ ಟೂರ್ನಿಗಳನ್ನು ಆಯೋಜನೆ ಮಾಡಲು ಬಿಸಿಸಿಐ ತೀರ್ಮಾನ ತೆಗೆದುಕೊಂಡಿದೆ.
ಸೀನಿಯರ್ ಚಾಲೆಂಜರ್ಸ್ ಟ್ರೋಫಿ ಟೂರ್ನಿಯು ಅಕ್ಟೊಬರ್ 27ರಿಂದ 31ರವರೆಗೆ ನಡೆಯಲಿದ್ದು, ನಾಲ್ಕು ಪಂದ್ಯಗಳು ನಡೆಯಲಿವೆ.
ಸೀನಿಯರ್ ಟಿ-ಟ್ವೆಂಟಿ ಲೀಗ್ ಟೂರ್ನಿ 2022ರ ಮಾರ್ಚ್ 19ರಿಂದ ಏಪ್ರಿಲ್ 11ರವರೆಗೆ ನಡೆಯಲಿದೆ. ಒಟ್ಟು 142 ಪಂದ್ಯಗಳು ನಡೆಯಲಿವೆ.
23 ವರ್ಷದೊಳಗಿನ ಮಹಿಳಾ ದೇಶಿ ಟಿ-20 ಕ್ರಿಕೆಟ್ ಟೂರ್ನಿ 2022ರ ಜನವರಿ 17ರಿಂದ ಫೆಬ್ರವರಿ 7ರವರೆಗೆ ನಡೆಯಲಿದ್ದು, ಒಟ್ಟು 142 ಪಂದ್ಯಗಳು ನಡೆಯಲಿವೆ.
23 ವರ್ಷದೊಳಗಿನ ಏಕದಿನ ಮಹಿಳಾ ಕ್ರಿಕೆಟ್ ಟೂರ್ನಿಯು 2022ರ ಫೆಬ್ರವರಿ 11ರಿಂದ ಮಾರ್ಚ್ 15ರವರೆಗೆ ನಡೆಯಲಿದೆ. ಒಟ್ಟು 160 ಪಂದ್ಯಗಳು ನಡೆಯಲಿವೆ.
19 ವರ್ಷದೊಳಗಿನ ಏಕದಿನ ಮಹಿಳಾ ಕ್ರಿಕೆಟ್ ಟೂರ್ನಿ ಅಕ್ಟೊಬರ್ 1ರಿಂದ 31ರವರೆಗೆ ನಡೆಯಲಿದ್ದು, 152 ಪಂದ್ಯಗಳು ನಡೆಯಲಿವೆ.

19 ವರ್ಷದೊಳಗಿನ ಮಹಿಳಾ ಟಿ- 20 ಕ್ರಿಕೆಟ್ ಟೂರ್ನಿ ನವೆಂಬರ್ 4ರಿಂದ 27ರವರೆಗೆ ನಡೆಯಲಿದ್ದು, 135 ಪಂದ್ಯಗಳು ನಡೆಯಲಿವೆ.

19 ವರ್ಷದೊಳಗಿನ ಚಾಲೆಂಜರ್ಸ್ ಟ್ರೋಫಿ ಡಿಸೆಂಬರ್ 1ರಿಂದ 5ರವರೆಗೆ ನಡೆಯಲಿದ್ದು, 4 ಪಂದ್ಯಗಳು ನಡೆಯಲಿವೆ.
ಒಟ್ಟು 2100 ದೇಶಿ ಪಂದ್ಯಗಳನ್ನು ಬಿಸಿಸಿಐ ಆಯೋಜನೆ ಮಾಡಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd