Womens IPL ಮಹಿಳಾ ಐಪಿಎಲ್ ಗೆ ಬಿಸಿಸಿಐ ಗ್ರೀನ್ ಸಿಗ್ನಲ್
ಮಹಿಳಾ ಐಪಿಎಲ್ ಗೆ ಬಿಸಿಸಿಐ ಗ್ರೀನ್ ಸಿಗ್ನಲ್ ಕೊಟ್ಟಿದೆ. ಕಾಮನ್ ವೆಲ್ತ್ ಗೇಮ್ಸ್ ನಿಂದ ಹಿಡಿದು ಇತ್ತಿಚೆಗೆ ಮುಗಿದ ಏಷ್ಯಾಕಪ್ ವರೆಗೂ ಮಹಿಳಾ ಕ್ರಿಕೆಟ್ ಮ್ಯಾಚ್ ಗಳಿಗೆ ಯಾರೂ ಊಹಿಸದ ರೀತಿಯಲ್ಲಿ ಟಿಆರ್ ಪಿ ಬಂದಿದೆ.
ಮ್ಯಾಚ್ ಗಳನ್ನು ನೋಡಲು ಪ್ರೇಕ್ಷಕರು ಸ್ಟೇಡಿಯಂಗಳತ್ತ ಹರಿದು ಬರುತ್ತಿದ್ದಾರೆ.
ಇದನ್ನ ಲಾಭವಾಗಿಸಿಕೊಳ್ಳಲು ಬಿಸಿಸಿಐ ವುಮೆನ್ಸ್ ಐಪಿಎಲ್ ಗೆ ಹಸಿರು ನಿಶಾನೆ ತೋರಿಸಿದೆ ಎಂದು ಹೇಳಲಾಗುತ್ತಿದೆ.
ತುಂಬಾ ವರ್ಷಗಳಿಂದ ಚಾಲ್ತಿಯಲ್ಲಿರುವ ಮಹಿಳಾ ಐಪಿಎಲ್ ಮುಂಬರುವ ವರ್ಷದಿಂದ ಆರಂಭವಾಗುವ ಸಾಧ್ಯತೆಗಳಿವೆ.
ಮೊದಲ ಎಡಿಷನ್ ನಲ್ಲಿ ಐದು ತಂಡಗಳೊಂದಿಗೆ ಟೂರ್ನಿಯನ್ನ ಆರಂಭಿಸಬೇಕು ಎಂದು ಬಿಸಿಸಿಐ ಪ್ಲಾನ್ ಮಾಡಿಕೊಳ್ಳುತ್ತಿದೆಯಂತೆ.
ಲೀಗ್ ಆರಂಭದ ದಿನಾಂಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.