BCCI Contract : ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಜಡೇಜಾಗೆ ಜಾಕ್ ಪಾಟ್ – ಕೆ ಎಲ್ ರಾಹುಲ್ ಗೆ ಹಿಂಬಡ್ತಿ…
ಬಿಸಿಸಿಐ 2022-23 ಋತುವಿಗೆ ಆಟಗಾರರ ಗುತ್ತಿಗೆ ಪಟ್ಟಿಯನ್ನ ಪ್ರಕಟಿಸಲಾಗಿದೆ. ಭಾನುವಾರ ತಡರಾತ್ರಿ ಬಿಡುಗಡೆಯಾದ ಗುತ್ತಿಗೆ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಬಡ್ತಿ ಪಡೆದಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಏ+ ಗ್ರೇಡ್ ಗೆ ಸೇರಿಕೊಂಡಿದ್ದಾರೆ. ಇವರೆಲ್ಲರೊಂದಿಗೂ ಬಿಸಿಸಿಐ 7 ಕೋಟಿ ಒಪ್ಪಂದವನ್ನ ಮಾಡಿಕೊಂಡಿದೆ. ಈ ಒಪ್ಪಂದವನ್ನು ಅಕ್ಟೋಬರ್ 2022 ರಿಂದ ಸೆಪ್ಟೆಂಬರ್ 2023 ರವರೆಗೆ ನೀಡಲಾಗಿದೆ.
ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಬ್ ಪಂತ್ ಮತ್ತು ಅಕ್ಷರ್ ಪಟೇಲ್ ಎ ಗ್ರೇಡ್ ಗೆ ಸೇರ್ಪಡೆಯಾಗಿದ್ದಾರೆ. ಇವರೆಲ್ಲರಿಗೂ ವರ್ಷಕ್ಕೆ 5 ಕೋಟಿ ರೂ ಬಿಸಿಸಿಐ ಕಡೆಯಿಂದ ಸಿಗಲಿದೆ. ಹಾರ್ದಿಕ್ ಪಾಂಡ್ಯ ಈ ಗ್ರೇಡ್ ಗೆ ಮರಳಿದರೆ ಅಕ್ಷರ್ ಪಟೇಲ್ ಬಡ್ತಿ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ರಿಷಬ್ ಪಂತ್ ಈ ಗ್ರೇಡ್‌ನಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡಿಗ ಕೆ ಎಲ್ ರಾಹುಲ್ ಹಿನ್ನಡೆ ಅನುಭವಿಸಿದ್ದಾರೆ. ಬಿ ಗ್ರೇಡ್ ಗೆ ಸರಿದಿದ್ದಾರೆ.
ಮಂಡಳಿಯ ಪಟ್ಟಿಯಲ್ಲಿ 26 ಆಟಗಾರರು
ಬಿಸಿಸಿಐ ಮಂಡಳಿಯ ಕೇಂದ್ರ ಗುತ್ತಿಗೆ ಆಟಗಾರರ ಪಟ್ಟಿಯಲ್ಲಿ 26 ಆಟಗಾರರನ್ನು ಸೇರಿಸಲಾಗಿದೆ. ಎ+ ಗ್ರೇಡ್‌ನಲ್ಲಿ ಪ್ರತಿ ಬಾರಿ ಮೂವರು ಆಟಗಾರರನ್ನ ಮಾತ್ರ ಸೇರಿಸಿಕೊಳ್ಳಲಾಗುತ್ತಿತ್ತು. ಆದರೇ ಈ ಬಾರಿ ನಾಲ್ವರು ಆಟಗಾರರನ್ನ ಸೇರಿಸಿಕೊಳ್ಳಲಾಗಿದೆ. ಎ ಗ್ರೇಡ್ ನಲ್ಲಿ ಐವರು ಆಟಗಾರರು ಬಿ ನಲ್ಲಿ ಆರು ಆಟಗಾರರ ಮತ್ತು ಸಿ ನಲ್ಲಿ 11 ಆಟಗಾರರನ್ನ ನೇಮಿಸಿಕೊಳ್ಳಲಾಗಿದೆ.
ಗಿಲ್-ಸೂರ್ಯ ಬಿ ದರ್ಜೆಗೆ ಬಡ್ತಿ ಪಡೆದಿದ್ದಾರೆ
ಆರಂಭಿಕರಾದ ಶುಭಮನ್ ಗಿಲ್ ಮತ್ತು ಸೂರ್ಯಕುಮಾರ್ ಯಾದವ್ ಗ್ರೇಡ್ ಬಿ ಗೆ ಬಡ್ತಿ ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಬಿ ನಿಂದ ಸಿ ಗ್ರೇಡ್ ಗೆ ಕುಸಿದಿದ್ದಾರೆ.
ರಹಾನೆ-ಇಶಾಂತ್ ಮತ್ತು ಭುವಿ ಔಟ್
ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ, ವೇಗದ ಬೌಲರ್ ಇಶಾಂತ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ಮಯಾಂಕ್ ಅಗರ್ವಾಲ್ ಅವರನ್ನು ಕೇಂದ್ರ ಗುತ್ತಿಗೆಯಿಂದ ಕೈಬಿಡಲಾಗಿದೆ. ಇಬ್ಬರೂ ಕೊನೆಯದಾಗಿ ಬಿ ಗ್ರೇಡ್‌ನಲ್ಲಿ ಸ್ಥಾನ ಪಡೆದಿದ್ದರು.
BCCI Contract : Jackpot for Jadeja in the BCCI contract list – KL Rahul is relegated… BCCI Contract