‘ಯಂಗ್ ಇಂಡಿಯಾ’ಗೆ ಬಹುಪರಾಕ್ : ಐದು ಕೋಟಿ ಬೋನಸ್
ಬ್ರಿಸ್ಬೇನ್ : ಆಸ್ಟ್ರೇಲಿಯಾದಲ್ಲಿ ಕಾಂಗರೂಗಳನ್ನ ಬಗ್ಗುಬಡಿದು ಐಸಿಹಾಸಿಕ ಟೆಸ್ಟ್ ಸರಣಿ ಗೆದ್ದಿರುವ ಟೀಂ ಇಂಡಿಯಾಗೆ ಎಲ್ಲೆಡೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಯಂಗ್ ಸ್ಟಾರ್ ಗಳ ಆಟಕ್ಕೆ ಕ್ರಿಕೆಟ್ ಸೂಪರ್ ಸ್ಟಾರ್ ಗಳು ಶಹಬ್ಬಾಶ್ ಗಿರಿ ನೀಡುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ಸಂತಸ ಹಂಚಿಕೊಳ್ಳುತ್ತಿದ್ದಾರೆ.
ಇನ್ನು 31 ವರ್ಷಗಳಲ್ಲಿ ಬ್ರಿಸ್ಬೇನ್ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸುತ್ತಿರುವುದು ಇದೇ ಮೊದಲು. ಈ ಗೆಲುವು ಖಂಡಿತವಾಗಿಯೂ ಐತಿಹಾಸಿಕವಾದುದು ಎಂದು ಉಲ್ಲೇಖಿಸಿ ಬಿಸಿಸಿಐ ಟೀಂ ಇಂಡಿಯಾಗೆ ಬೋನಸ್ ಆಗಿ 5 ಕೋಟಿ ರೂ. ಬಹುಮಾನ ಘೋಷಣೆ ಮಾಡಿದೆ.
ಈ ಬಗ್ಗೆ ಜೈ ಶಾ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಐದು ಕೋಟಿ ಬೋನಸ್ ಅನೌನ್ಸ್ ಮಾಡಿದೆ. ಭಾರತದ ಈ ಗೆಲುವು ವಿಶೇಷ ಕ್ಷಣಗಳನ್ನು ಸೃಷ್ಟಿ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel