ಇಂಡಿಯನ್ ಪ್ರೀಮಿಯರ್ ಲೀಗ್… ಕ್ರಿಕೆಟ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿರುವ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್… ಇದು ರೋಚಕತೆ, ಮನರಂಚನೆ, ಆಕ್ಷನ್, ಎಮೋಷನ್ಸ್ ಒಳಗೊಂಡ ವಿಶ್ವದ ಏಕೈಕ ಕ್ರಿಕೆಟ್ ಲೀಗ್ ಕೂಡ ಹೌದು..! ಸಂಜೆ ಆಗುತ್ತಿದ್ದಂತೆ ಎಲ್ಲ ಕೆಲಸಗಳನ್ನು ಬಿಟ್ಟು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಕುಳಿತುಬಿಡುತ್ತಾರೆ. ತಮ್ಮ ನೆಚ್ಚಿನ ತಂಡ ಗೆಲುವಿಗಾಗಿ ಪ್ರಾರ್ಥನೆ ಮಾಡುತ್ತಲೇ ಇರುತ್ತಾರೆ.
ಹಾಗಾದ್ರೆ ಈ ಐಪಿಎಲ್ ನಿಂದ ಹಣ ಹೇಗೆ ಬರುತ್ತೆ..? ಯಾರಿಗೆ ಬರುತ್ತೆ..? ಐಪಿಎಲ್ ಯಿಂದ ಸರ್ಕಾರಕ್ಕೆ ಬರುವ ಹಣ ಎಷ್ಟು..?
ಐಪಿಎಲ್ ಇಂಡಿಯನ್ ಪ್ರಿಮಿಯರ್ ಲೀಗ್.. ಈ ಟೂರ್ನಿಯನ್ನು ಪ್ರತಿ ವರ್ಷ ಬಿಸಿಸಿಐ ಕಂಡೆಕ್ಟ್ ಮಾಡುತ್ತೆ. ಬಿಸಿಸಿಐ 2008ರಲ್ಲಿ ಮೊದಲ ಬಾರಿಗೆ ಐಪಿಎಲ್ ಅನ್ನು ಕಂಡೆಕ್ಟ್ ಮಾಡಿತ್ತು.
ಇದನ್ನೂ ಓದಿ : ಐಪಿಎಲ್ 2020 – ಕೆಕೆಆರ್ ವಿರುದ್ಧ ಸೇಡು ತೀರಿಸಿಕೊಂಡ ಆರ್ ಸಿಬಿ
ಮೊದಲು ಬಿಸಿಸಿಐಗೆ ಐಪಿಎಲ್ ಯಿಂದಾಗಿ ಹೇಗೆ ಆದಾಯ ಬರುತ್ತೆ ಎಂಬೋದನ್ನ ತಿಳಿಯೋಣ. ಅದನಂತರ ಐಪಿಎಲ್ ಟೀಂಗಳ ಮಾಲೀಕರಿಗೆ, ಆಟಗಾರರಿಗೆ, ಟಿವಿ ಚಾನಲ್ ಗಳಿಗೆ ಐಪಿಎಲ್ ನಿಂದ ಬರುವ ಆದಾಯ ಎಷ್ಟು ಎಂದು ತಿಳಿಯೋಣ,
ಬಿಸಿಸಿಐಗೆ ಐಪಿಎಲ್ ಯಿಂದಾಗಿ ಹೇಗೆ ಆದಾಯ ಬರುತ್ತೆ..?
ನಂಬರ್ 1 ಸ್ಪೋನ್ಸರ್ ಶಿಪ್ಸ್
ಪ್ರತಿ ವರ್ಷ ಐಪಿಎಲ್ ಗೆ ಯಾವುದೋ ಒಂದು ಕಂಪನಿ ಟೈಟಲ್ ಸ್ಪೋನ್ಸರ್ ಆಗಿ ನಿಲ್ಲುತ್ತೆ. ಆದ್ದರಿಂದಲೇ ಡಿಎಲ್ ಎಫ್ ಐಪಿಎಲ್ ಎಂದು, ಪೆಪ್ಸಿ ಐಪಿಎಲ್ ಎಂದು, ವಿವೋ ಐಪಿಎಲ್ ಎಂದು ಈಗ ಡ್ರೀಮ್ 11 ಐಪಿಎಲ್ ಎಂದು ಕರೆಯುತ್ತಾರೆ.
2008ರಿಂದ 2012ರವೆಗೂ ಡಿಎಲ್ ಎಫ್ ಎಂಬ ರಿಯಲ್ ಎಸ್ಟೇಸ್ ಕಂಪನಿ 200 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡಿ ಐಪಿಎಲ್ ಸ್ಟಾನ್ಸಶಿಪ್ ಅನ್ನು ಕೊಂಡುಕೊಂಡಿತ್ತು
20013 ರಿಂದ 2015 ರವರೆಗೆ ಪೆಪ್ಸಿ ಕಂಪನಿ 200 ಕೋಟಿಗಳನ್ನು ಕೊಟ್ಟು ಟೈಟಲ್ ಸ್ಪಾನ್ಸಶಿಫ್ ಅನ್ನು ಖರೀದಿಸಿತ್ತು. 2016, 2017 ಈ ಎರಡು ವರ್ಷ ಐಪಿಎಲ್ ಟೈಟಲ್ ಸ್ಪಾನ್ಸ ಶಿಪ್ ಅನ್ನು ವಿವೋ 200 ಕೋಟಿಗಳನ್ನು ಕೊಟ್ಟು ಕೊಂಡುಕೊಂಡಿತ್ತು. ಇನ್ನ 2018 ರಿಂದ 2022 ರವರೆಗೆ ಅಂದ್ರೆ ಐದು ವರ್ಷಗಳ ಟೈಟಲ್ ಸ್ಪಾನ್ಸ ಶಿಪ್ ಅನ್ನು ವಿವೋ 2200 ಕೋಟಿ ರೂಪಾಯಿಗಳನ್ನು ಕೊಟ್ಟು ಖರೀದಿಸಿತ್ತು. ಆದ್ರೆ ಈ ವರ್ಷ ಚೀನಾ ಬಿಕ್ಕಟ್ಟಿನ ಹಿನ್ನೆಲೆ ಈ ಡೀಲ್ ಕ್ಯಾನಲ್ ಆದ ಹಿನ್ನೆಲೆ ಈ ವರ್ಷ ಡ್ರೀಮ್ 11 ಎಂಬ ಕಂಪನಿ 200 ಕೋಟಿಗಳನ್ನು ಕೊಟ್ಟು ಐಪಿಎಲ್ ಟೈಟಲ್ ಸ್ಪಾನ್ಸಶಿಪ್ ಅನ್ನು ಕೊಂಡುಕೊಂಡಿದೆ.
ಟೈಟಲ್ ಸ್ಪಾನ್ಸರ್ ಗಳ ಜೊತೆ ಅಸೋಸಿಯೆಟ್ ಸ್ಪಾನ್ಸರ್ ಗಳೂ ಕೂಡ ಇರುತ್ತಾರೆ. ಈ ವರ್ಷ ಅನ್ ಅಖಾಡೆಮಿ. ಕ್ರೆಡ್, ಟಾಟಾ ಅಲ್ಟ್ರೋ, ಸೀಲ್ ಟೈಯರ್ಸ್ ಈ ಕಂಪನಿಗಳು ಕೂಡ ಬಿಸಿಸಿಐಗೆ ಒಂದಿಷ್ಟು ದುಡ್ಡು ಪೇ ಮಾಡಿರುತ್ವೆ. ಈ ಕಂಪನಿಗಳು ನಮಗೆ ಐಪಿಎಲ್ ನಲ್ಲಿ ಕಾಣ ಸಿಗುತ್ವೆ ಅಂದ್ರೆ ಬೌಂಡರಿ ಲೈನ್ ಕಡೆ, ಡಿಶಿಷನ್ ಪೆಂಡಿಂಗ್ ಕಡೆ, ಸ್ಟ್ರಾಟರ್ಜಿಕ್ ಟೈಮ್ ವೇಳೆ ಕಾಣಿಸುತ್ತವೆ. ಈ ವಿಧವಾಗಿ ಸ್ಪಾನ್ಸಶಿಪ್ಸ್ ಯಿಂದ ಬಿಸಿಸಿಐಗೆ ಹಣ ಬರುತ್ತೆ.
ನಂಬರ್ 2 : ಟಿವಿ ರೈಟ್ಸ್ ಅಂಡ್ ಡಿಜಿಟಲ್ ರೈಟ್ಸ್
2008ರಲ್ಲಿ ಐಪಿಎಲ್ ಮ್ಯಾಚ್ ಗಳನ್ನು ಪ್ರಸಾರ ಮಾಡಲು `ಸೋನಿ ಪಿಚ್ಚರ್ಸ್ ಕಂಪನಿ’ ಒಂದು ವರ್ಷಕ್ಕೆ 8200 ಕೋಟಿಗಳನ್ನು ಕೊಟ್ಟ ಅನುಮತಿಯನ್ನು ಪಡೆದುಕೊಂಡಿತ್ತು. ಇದು 10 ವರ್ಷಗಳ ಕಾಲ ಐಪಿಎಲ್ ಮ್ಯಾಚ್ ಗಳನ್ನು ಪ್ರಸಾರ ಮಾಡಿದೆ. ಅಂದ್ರೆ ಈ 8200 ಕೋಟಿ ಬಿಸಿಸಿಐಗೆ ಹೋಗುತ್ತೆ.
ಇದನ್ನೂ ಓದಿ : ಮಹಮ್ಮದ್ ಸಿರಾಜ್.. ಕೊಹ್ಲಿ ಬತ್ತಳಿಕೆಯ ಸರ್ಪಾಸ್ತ್ರ..!
ಇನ್ನು 2018ರಲ್ಲಿ ಸ್ಟಾರ್ ಇಂಡಿಯಾ ಅನ್ನೋ ಕಂಪನಿ ಐದು ವರ್ಷಗಳ ಕಾಲ ಅಂದ್ರೆ 2018ರಿಂದ 2022ರವರೆಗೆ ಐಪಿಎಲ್ ಮ್ಯಾಚ್ ಗಳನ್ನು ಟಿವಿ, ಇಂಟರ್ ನೆಟ್ ನಲ್ಲಿ ಪ್ರಸಾರ ಮಾಡಲು ಬರೋಬ್ಬರಿ 16347 ಕೋಟಿ ಕೊಟ್ಟು ಬಿಸಿಸಿಐನಿಂದ ಪರ್ಮಿಷನ್ ಗಳನ್ನು ಪಡೆದುಕೊಂಡಿದೆ. ಅಂದ್ರೆ ಸ್ಟಾರ್ ಇಂಡಿಯಾ ಕಂಪನಿ ಪ್ರತಿ ಐಪಿಎಲ್ ಮ್ಯಾಚ್ ಗೆ 54 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡುತ್ತೆ.
ಅಂದಹಾಗೆ ಸ್ಟಾರ್ ಇಂಡಿಯಾ ಒಂದು ಇಂಟರ್ ನ್ಯಾಷನಲ್ ಮ್ಯಾಚ್ ಅನ್ನು ಪ್ರಸಾರ ಮಾಡಲು 43 ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ಪೇ ಮಾಡುತ್ತೆ. ಆದ್ರೆ ಒಂದು ಐಪಿಎಲ್ ಮ್ಯಾಚ್ ಅನ್ನು ಬ್ರಾಡ್ ಕ್ಯಾಸ್ಟ್ ಮಾಡಲು 54 ಕೋಟಿ ರೂಪಾಯಿಗಳನ್ನು ಪೇ ಮಾಡುತ್ತೆ. ಇದರಿಂದಲೇ ನಾವು ಅರ್ಥ ಮಾಡಿಕೊಳ್ಳಬಹುದು, ಐಪಿಎಲ್ ಗೆ ಎಷ್ಟು ಕ್ರೇಜ್ ಇದೆ ಎಂದು.. ಹೀಗೆ ಕಲರ್ ಫುಲ್ ಐಪಿಎಲ್ ನಿಂದ ಬಿಸಿಸಿಐಗೆ ಹಣ ಬರುತ್ತೆ..
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel